Chaitra Kundapur : ಚೈತ್ರಾ ಕುಂದಾಪುರ, ಮುತಾಲಿಕ್‌ಗೆ ಕಲಬುರಗಿ ಪ್ರವೇಶ ನಿಷೇಧ : ಜಿಲ್ಲಾಧಿಕಾರಿ ಆದೇಶ

ಕಲಬುರಗಿ : ಶಿವರಾತ್ರಿಯ ಸಂದರ್ಭದಲ್ಲಿ ಶಿವಲಿಂಗದ ಶುದ್ದೀಕರಣ ಕಾರ್ಯಕ್ರಮಕ್ಕೆ ಜೇವರ್ಗಿ ಆಂದೋಲನ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಖ್ಯಾತ ಹಿಂದೂಪರ ಹೋರಾಟಗಾರ್ತಿ ಚೈತ್ರಾ ಕುಂದಾಪುರ (Chaitra Kundapur) ಹಾಗೂ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್‌ ಮುತಾಲಿಕ್‌ (pramod Muthalik) ಅವರಿಗೆ ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್‌ ಅವರು ಆದೇಶ ಹೊರಡಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಪಾಡ್ಲೆ ಮಶಾಕ್‌ ದರ್ಗಾದಲ್ಲಿ ಮಾರ್ಚ್‌ 1 ರಂದು ಸಂದಲ್‌ ಮತ್ತು ಶಬ್‌ -ಏ-ಬರಾತ್‌ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ ಇದೇ ಸಂದರ್ಭದಲ್ಲಿಯೇ ಶಿವಲಿಂಗದ ಶುದ್ದಿಕರಣ ಕಾರ್ಯಕ್ರಮ ನಡೆಸುವಂತೆ ಸ್ವಾಮೀಜಿ ಕರೆ ಕೊಟ್ಟಿದ್ದಾರೆ. ಇದರಿಂದಾಗಿ ಶಾಂತಿ ಸುವ್ಯವಸ್ಥೆ ಹದಗೆಡುವ ಸಾಧ್ಯತೆಯಿದೆ. ಹೀಗಾಗಿ ಫೆಬ್ರವರಿ 27 ರಿಂದ ಮಾರ್ಚ್‌ 3 ರ ವರೆಗೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಅಳಂದ ತಾಲೂಕು ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ.

ಶ್ರೀ ಸಿದ್ದಲಿಂಗ ಸ್ವಾಮೀಜಿ, ಚೈತ್ರಾ ಕುಂದಾಪುರ (Chaitra Kundapur) ಮತ್ತು ಪ್ರಮೋದ್‌ ಮುತಾಲಿಕ್‌ ಅವರು ಜಿಲ್ಲೆಗೆ ಭೇಟಿ ನೀಡಿದ್ರೆ ಕೋಮು ಸೌಹಾರ್ದತೆಗೆ ಧಕ್ಕೆಯಾಗಲಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ನೀಡಿದ ವರದಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸಿ.ಆರ್.ಪಿ.ಸಿ ಕಾಯ್ದೆ-1973ರ ಕಲಂ-132, 143, 144 ಹಾಗೂ 144ಎ ರನ್ವಯ ನಿರ್ಬಂಧ ಹೇರಿದ್ದಾರೆ.

ಇದನ್ನೂ ಓದಿ : ಸದ್ಯದಲ್ಲೇ ನಿಷೇಧವಾಗುತ್ತಾ ಪಿಎಫ್ಐ : ಸಿಎಂ ಬೊಮ್ಮಾಯಿ ಕೊಟ್ರು ಸುಳಿವು

ಇದನ್ನೂ ಓದಿ : ಲೇಡಿಗೋಷನ್ ಆಸ್ಪತ್ರೆ ಇನ್ಮುಂದೆ ರಾಣಿ ಅಬ್ಬಕ್ಕ ಹಾಸ್ಪಿಟಲ್: ಅಧಿಕೃತ ಘೋಷಣೆಯೊಂದೇ ಬಾಕಿ

( Chaitra Kundapur and pramod Muthalik admission ban Kalburgi Entry )

Comments are closed.