ಬೆಂಗಳೂರು : ಬಿಬಿಎಂಪಿ ಚುನಾವಣೆ ಗಣೇಶನ ಮದುವೆಯಂತೇ ಮುಂದಕ್ಕೆ ಹೋಗುತ್ತಲೇ ಇದೆ. ಹೀಗಾಗಿ ಮಹಾನಗರ ಪಾಲಿಕೆ ಸದ್ಯಕ್ಕೆ ಅಧಿಕಾರಿಗಳ ಆಡಳಿತದಲ್ಲೇ ಸಾಗುತ್ತಿದೆ. ಈ ಮಧ್ಯೆ ಬಿಬಿಎಂಪಿ ಬಜೆಟ್ (BBMP Budget ಗೆ ಭರದ ಸಿದ್ಧತೆ ನಡೆದಿದ್ದು, 2022-23ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ಸಚಿವರು, ಶಾಸಕರ ಜೊತೆ ಪಾಲಿಕೆ ಸಭೆ ನಡೆಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2022-23ನೇ ಸಾಲಿನ ಆಯವ್ಯಯ ಅಂತಿಮ ಹಂತದಲ್ಲಿದ್ದು, ಈ ಕುರಿತು ನಡೆದ ಸಭೆಯಲ್ಲಿ ಸಚಿವರಾದ ಕೆ.ಗೋಪಾಲಯ್ಯ, ಮುನಿರತ್ನ, ಸಂಸದರಾದ ಶ್ರೀ ಪಿ.ಸಿ.ಮೋಹನ್ ಸೇರಿಂದತೆ ನಗರದ ಎಲ್ಲಾ ಶಾಸಕರು ಭಾಗಿಯಾಗಿ ಅಗತ್ಯ ಸಲಹೆ ಸೂಚನೆ ನೀಡಿದ್ದಾರೆ.
ಈ ಬಾರಿ ಮೇಯರ್, ಕಾರ್ಪೋರೇಟರ್ ಗಳು ಇಲ್ಲದೇ ಇರೋದರಿಂದ ಪಾಲಿಕೆ ಅಧಿಕಾರಿಗಳು ಬಜೆಟ್‌ಗೂ ಮುನ್ನ ಜನ ಪ್ರತಿನಿಧಿಗಳ ಸಲಹೆ ಪಡೆದುಕೊಂಡಿದ್ದಾರೆ. ಇನ್ನು ಬಹು ನೀರಿಕ್ಷಿತ ಬಿಬಿಎಂಪಿ ಬಜೆಟ್ ನಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು ಯಾವುದು ಅನ್ನೋದನ್ನು ಗಮನಿಸೋದಾದರೇ,
ಬಿಬಿಎಂಪಿ ಬಜೆಟ್ (BBMP Budget )ಕುರಿತು ಚರ್ಚೆಯಾದ ಅಂಶಗಳು
- ಪ್ರತಿ ವಾರ್ಡ್ ಗೂ 2 ರಿಂದ 3 ಕೋಟಿ ರೂ. ವಾರ್ಷಿಕ ನಿರ್ವಹಣೆಗೆ(POW) ಅನುದಾನ ಕಡ್ಡಾಯವಾಗಿ ಮೀಸಲಿಡಬೇಕು
- ಬಿ ಯಿಂದ ಎ ಖಾತಾ ವರ್ಗೀಕರಣ ಮಾಡಿ ಹೆಚ್ಚಿನ ಸಂಪನ್ಮೂಲ ಕ್ರೋಢೀಕರಿಸುವುದು
- ತೆರಿಗೆ ವ್ಯಾಪ್ತಿಗೆ ಒಳಪಡದ ಸುಮಾರು 5 ಲಕ್ಷ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದು ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳುವುದು
- ಅನಧಿಕೃತ ಕಟ್ಟಡಗಳನ್ನು ಗುರುತಿಸುವ ಪ್ರಕ್ರಿಯೆಗೆ ಚುರುಕು ನೀಡಿ ಆಸ್ತಿ ತೆರಿಗೆ ವ್ಯಾಪ್ತಿಗೆ ತರುವುದು
- Self Assessment Scheme ಅಡಿಯಲ್ಲಿ ಸಂಗ್ರಹಿಸುವ ತೆರಿಗೆಯು ವಸ್ತುಸ್ಥಿಗೆ ಹೊಂದಾಣಿಕೆಯಾಗುತ್ತಿದೆಯೆ ಎಂಬುದನ್ನು ಪರಿಶೀಲಿಸಬೇಕು
- ಒಂಟಿ ಮನೆಗಳಿಗೆ ಅನುದಾನ ಮೀಸಲಿಡುವುದು
- ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸುವುದು ಹಾಗೂ ಎಲ್.ಇ.ಡಿ ಬೀದಿ ದೀಪಗಳನ್ನು ಅಳವಡಿಸುವುದು
- ಕಸ ನಿರ್ವಹಣೆ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸುವುದು. ಕಾಂಪ್ಯಾಕ್ಟರ್, ಆಟೋ ಟಿಪ್ಪರ್ ಗಳಿಗೆಲ್ಲಾ ಜಿಪಿಎಸ್ ಅಳವಡಿಸುವುದು
- ಪಾಲಿಕೆಯ Lease Property ಗಳಿಂದ ಬಾಕಿ ಹಣ ಸಂಗ್ರಹಿಸಲು ಕ್ರಮವಹಿಸುವುದು
- ರಾಜಕಾಲುವೆಗಳ ನಿರ್ವಹಣೆ ಸರಿಯಾಗಿ ಮಾಡುವುದು
- ಉದ್ಯಾನಗಳ ನಿರ್ವಹಣೆಗೆ ಹೆಚ್ಚು ಆದ್ಯತೆ ನೀಡುವುದು ಹಾಗೂ ಉದ್ಯಾನಗಳಲ್ಲಿರುವ ವ್ಯಾಯಾಮ, ಮಕ್ಕಳ ಆಟಿಕೆಗಳ ಅಳವಡಿಕೆ, ಭದ್ರತಾ ಸಿಬ್ಬಂದಿ ಸರಿಯಾಗಿರುವಂತೆ ನೋಡಿಕೊಳ್ಳುವುದು
- ಕಲ್ಯಾಣ ಕಾರ್ಯಕ್ರಮದಡಿ ಬಡ ವರ್ಗದ ಜನರಿಗೆ ಲ್ಯಾಪ್ ಟಾಪ್ ವಿತರಿಸುವುದು ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವುದು
- 110 ಹಳ್ಳಿಗಳಿಗೆ ಸಂಬಂಧಿಸಿದಂತೆ ರಸ್ತೆ ಪುನಶ್ಚೇತನ ಕಾರ್ಯ ತ್ವರಿತವಾಗಿ ಮಾಡುವುದು
- ಪಾದಚಾರಿ ಮಾರ್ಗಗಳು ಒಡಾಡಲು ಸುಗಮವಾಗಿರುವ ಹಾಗೆ ನೋಡಿಕೊಳ್ಳುವುದು
- ಕೆರೆಗಳನ್ನು ಅಭಿವೃದ್ಧಿಗೊಳಿಸಿ ಸರಿಯಾಗಿ ನಿರ್ವಹಣೆ ಮಾಡುವುದು
- ಒಣಗಿರುವ ಮರಗಳು, ಕೊಂಬೆಗಳನ್ನು ಕತ್ತರಿಸಿ ಸೂಕ್ತ ನಿರ್ವಹಣೆ ಮಾಡುವುದು, ಇದರಿಂದಾಗುವ ಅಪಘಾತ ತಡೆಗಟ್ಟುವುದು
- ನಗರದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ನಿರ್ವಹಣೆ ಮಾಡುವುದು
- ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಆದ್ಯತೆ ನೀಡುವುದು
ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ರಾಜ್ಯ ಸರ್ಕಾರಕ್ಕೆ ಈ ಬಜೆಟ್ ಪ್ರಾಮುಖ್ಯತೆ ಪಡೆದುಕೊಂಡಿದ್ದು ಅಧಿಕಾರಿಗಳ ಮೂಲಕ ಸರ್ಕಾರದ ಪರ ಮತಗಳಿಕೆಯಾಗುವಂತಹ ಜನಾನುರಾಗಿ ಬಜೆಟ್ ಗೆ ಸಿದ್ಧತೆ ನಡೆದಂತಿದೆ.
ಇದನ್ನೂ ಓದಿ : ಬೆಂಗಳೂರಿನ ರಸ್ತೆಗಳು ಓಡಾಟಕ್ಕೆ ಯೋಗ್ಯವಲ್ಲ: ಸಲ್ಲಿಕೆಯಾಯ್ತು ಸಿಎಜಿ ವರದಿ
ಇದನ್ನೂ ಓದಿ : ಬಿಎಂಟಿಸಿಗೆ ಬಿಸಿ ತುಪ್ಪ ವಾದ ಎಲೆಕ್ಟ್ರಿಕ್ ಬಸ್ : ಮತ್ತೆ ನಷ್ಟದ ಹಾದಿಯಲ್ಲಿ ಬೆಂಗಳೂರು ಸಾರಿಗೆ
( Officers Prepare BBMP Budget )