itel A49 ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌! ಭಾರತದಲ್ಲಿ ಇದು ಕೇವಲ 6499 ರೂಪಾಯಿಗಳಿಗೆ

ನೀವು ಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್‌ಫೋನ್‌(Smartphone) ಖರೀದಿಸಲು ಬಯಸಿದ್ದರೆ ಇದೋ ನಿಮಗೆ ಈ ಸಂತಸದ ಸುದ್ದಿ. itel ಈಗ ಭಾರತದಲ್ಲಿ 6,499 ರೂಪಾಯಿಗಳಲ್ಲಿ ಒಳ್ಳೆಯ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ಕಂಪನಿಯು ಈ ಸ್ಮಾರ್ಟ್‌ಫೋನ್‌ ಹೆಸರನ್ನು itel A49 ಎಂದು ಹೇಳಿದೆ. ಈ ಫೋನ್‌ನಲ್ಲಿ ದೊಡ್ಡದಾದ ಸ್ಕ್ರೀನ್‌ ಮತ್ತು ಉತ್ತಮ ಬ್ಯಾಟರಿ ಮತ್ತು ಒಳ್ಳೆಯ ಫೀಚರ್‌ ನಿಂದ ಇದು ಆಕರ್ಷಕವಾಗಿದೆ. ಹಾಗಾದರೆ, ಇದರ ಫೀಚರ್‌ ಮತ್ತು ಸ್ಪೆಸಿಫಿಕೇಷನ್‌ ಬಗ್ಗೆ ತಿಳಿಯೋಣ ಬನ್ನಿ.

ಇದನ್ನೂ ಓದಿ: Reliance Jio 28 ದಿನಗಳ ಹೊಸ ಪ್ರೀಪೇಡ್‌ ಪ್ಲಾನ್‌!

ಫೀಚರ್‌ ಮತ್ತು ಸ್ಪೆಸಿಫಿಕೇಶನ್‌ಗಳು :
ಈ ಸ್ಮಾರ್ಟ್‌ಫೋನ್‌ 6.6 ಇಂಚ್‌ ಸ್ಕ್ರೀನ್‌ HD+IPS ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇಯುಲ್ಲಿ ವಾಟರ್‌ಡ್ರಾಪ್‌ ನಾಚ್ ಕೂಡಾ ಇದೆ. 2ಜಿಬಿ RAM ಮತ್ತು 32 ಜಿಬಿ ಇಂಟರ್ನಲ್‌ ಸ್ಟೋರೇಜ್‌ ಇದೆ. ಕ್ವಾಡ್‌ ಕೋರ್‌ ಚಿಪ್‌ಸೆಟ್‌ ಇರುವ 1.4 ಗಿಗಾ ಹರ್ಟ್ಜನ ಪ್ರೊಸೆಸರ್‌ ಒಳಗೊಂಡಿದೆ. ಐಟೆಲ್‌ ಕ್ರಿಸ್ಟಲ್‌ ಪರ್ಪಲ್‌, ಡೋಮ್‌ ಬ್ಲೂ ಮತ್ತು ಸ್ಕೈ ಸಿಯಾನ್‌ ಬಣ್ಣಗಳಲ್ಲಿ ಬರುತ್ತದೆ.

ಇದರಲ್ಲಿಯ 32 ಜಿಬಿಗಳ ಸಿಂಗಲ್‌ ಸ್ಟೋರೇಜ್‌ ಅನ್ನು 28ಜಿಬಿಗಳವರೆಗೆ ಮೈಕ್ರೋ ಎಸ್‌ಡಿ ಕಾರ್ಡ್‌ ಸಹಾಯದಿಂದ ಹೆಚ್ಚಿಸಬಹುದಾಗಿದೆ. 4G VoLTE ಕನೆಕ್ಟಿವಿಟಿ ಇದ್ದು, ವೈಫೈ, ಬ್ಲೂಟೂತ್‌ ಮತ್ತು ಯುಎಸ್‌ಬಿ ಪೋರ್ಟ್‌ ಸಹ ಇದೆ. 4000mAh ಬ್ಯಾಟರೀ ಸಾಮರ್ಥ್ಯಹೊಂದಿದ್ದು, ಫೇಸ್‌ ಅನ್‌ಲಾಕ್‌ ಮತ್ತು ಫಿಂಗರ್‌ಪ್ರಿಂಟ್‌ ಸೆನ್ಸಾರ್‌ಗಳನ್ನು ಒಳಗೊಂಡಿದೆ. ಇನ್ನು ಕ್ಯಾಮರಾದ ವಿಚಾರದಲ್ಲಿ ಇದು ಡ್ಯುಯಲ್‌ ರಿಯರ್‌ ಕ್ಯಾಮರಾ ಹೊಂದಿದ್ದು, ಮೆನ್‌ ಲೆನ್ಸ್‌ 5MP ಯದ್ದಾಗಿದೆ.

ಇದನ್ನೂ ಓದಿ: Girls Use Smartphones : ಸ್ಮಾರ್ಟ್ ಫೋನ್ ಬಳಸೋದ್ರಲ್ಲಿ ಹೆಣ್ಮಕ್ಲೇ ಸ್ಟ್ರಾಂಗ್; ಸಂಶೋಧನಾ ವರದಿಯಲ್ಲಿ ಬಹಿರಂಗ

(itel A49 launch just rs 6499 cheapest smartphone in India)

Comments are closed.