ಮಂಗಳವಾರ, ಜೂನ್ 17, 2025
HomeCrimeರೈಲಿಗಾಗಿ ಕಾಯುತ್ತಿದ್ದ ಮಹಿಳೆಯ ಮೇಲೆ ಶೌಚಾಲಯದಲ್ಲಿ ಅತ್ಯಾಚಾರ : ಆರೋಪಿ ಪರಾರಿ

ರೈಲಿಗಾಗಿ ಕಾಯುತ್ತಿದ್ದ ಮಹಿಳೆಯ ಮೇಲೆ ಶೌಚಾಲಯದಲ್ಲಿ ಅತ್ಯಾಚಾರ : ಆರೋಪಿ ಪರಾರಿ

- Advertisement -

ಲಕ್ನೋ : ಪತಿಯೊಂದಿಗೆ ರೈಲಿಗಾಗಿ ಕಾಯುತ್ತಿದ್ದ ಮಹಿಳೆಯ ಮೇಲೆ ಸಾರ್ವಜನಿಕ ಶೌಚಾಲಯದಲ್ಲಿಯೇ ಕಾಮುಕನೋರ್ವ ಅತ್ಯಾಚಾರವೆಸಗಿದ (Woman Raped ) ಘಟನೆ ಲಕ್ನೋದ ಪ್ರತಾಪ್‌ಗಢ ರೈಲ್ವೆ ನಿಲ್ಡಾಣದ ಪಾರ್ಕಿಂಗ್‌ ಸ್ಟ್ಯಾಂಡ್‌ನಲ್ಲಿ ನಡೆದಿದೆ. ಪತ್ನಿಯನ್ನು ಪತಿ ರಕ್ಷಿಸಿದ್ದು, ಆರೋಪಿ ಪರಾರಿಯಾಗಿದ್ದಾನೆ.

ಪ್ರತಾಪ್‌ಗಢ ರೈಲ್ವೆ ನಿಲ್ಡಾಣದಲ್ಲಿ 20 ವರ್ಷದ ಮಹಿಳೆ ತನ್ನ ಪತಿಯ ಜೊತೆಗೆ ರೈಲಿಗಾಗಿ ಕಾಯುತ್ತಿದ್ದರು. ಪತಿ ಮಹಿಳೆಯನ್ನು ಒಬ್ಬಂಟಿಯಾಗಿ ಬಿಟ್ಟು ಚಹಾ ತರಲು ತೆರಳಿದ್ದರು. ಈ ವೇಳೆಯಲ್ಲಿ ಮಹಿಳೆಯ ಬಳಿಗೆ ಬಂದ ಆರೋಪಿ ತನ್ನ ಕೈಯಲ್ಲಿದ್ದ ಕೀಲಿಯನ್ನು ನೀಡಿ ಪಾರ್ಕಿಂಗ್‌ ಸ್ಥಳದ ಬಳಿಯಲ್ಲಿರುವ ಶೌಚಾಲಯವನ್ನು ಬಳಸುವಂತೆ ಸೂಚಿಸಿದ್ದಾನೆ.

ಮಹಿಳೆ ಶೌಚಾಲಯ ಪ್ರವೇಶ ಮಾಡುವವರೆಗೂ ಹೊರಗೆ ಕಾಯುತ್ತಿದ್ದ ಆರೋಪಿ, ಮಹಿಳೆ ಶೌಚಾಲಯದೊಳಗೆ ತೆರಳುತ್ತಿದ್ದಂತೆಯೇ ಕಾಮುಕ ಒಳ ಪ್ರವೇಶಿಸಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಚಹಾ ತಂದ ಪತಿ ಪತ್ನಿಗಾಗಿ ಹುಡುಕಾಟ ನಡೆಸಿದ್ದಾನೆ. ನಂತರ ಶೌಚಾಲಯದ ಬಳಿಗೆ ಬಂದಾಗ ಪತ್ನಿಯ ಮೇಲೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದಿಎ.

ಸಂತ್ರಸ್ತೆಯ ಪತಿ ಕೊತ್ವಾಲಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಅತ್ಯಾಚಾರವೆಸಗಿದ ನಂತರದಲ್ಲಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇದೀಗ ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲು ಮಾಡಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟವನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಸ್ಯಾಂಡಲ್ ವುಡ್ ಖ್ಯಾತ ನಟಿ ಸಹೋದರ ಅರೆಸ್ಟ್

ಇದನ್ನೂ ಓದಿ : ಮದುವೆಯಾಗೋಣ ಎಂದು ಕರೆದು ಪೆಟ್ರೋಲ್‌ ಸುರಿದು ಬೆಂಕಿ ಇಟ್ಟ : ಪ್ರೇಮಿಯ ಹುಚ್ಚಾಟಕ್ಕೆ ತಹಶೀಲ್ದಾರ ಪುತ್ರಿ ಬಲಿ

Woman Raped Inside Public toilet At Pratapgarh Railway Station in Uttar Pradesh

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular