ಸೋಮವಾರ, ಜೂನ್ 16, 2025
Homeಮಿಸ್ ಮಾಡಬೇಡಿHappy Ugadi 2022 : ಯುಗಾದಿ 2022 : ಈ ದಿನದ ಮಹತ್ವ, ಆಚರಣೆಯ ಬಗ್ಗೆ...

Happy Ugadi 2022 : ಯುಗಾದಿ 2022 : ಈ ದಿನದ ಮಹತ್ವ, ಆಚರಣೆಯ ಬಗ್ಗೆ ನೀವೂ ತಿಳಿಯಿರಿ

- Advertisement -

ಯುಗಾದಿ(Happy Ugadi 2022) ದಕ್ಷಿಣ ಭಾರತದಲ್ಲಿ ಹೊಸ ವರ್ಷಾಚರಣೆಯ ಹಬ್ಬವಾಗಿದೆ. ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ತಮಿಳುನಾಡುಗಳಲ್ಲಂತೂ ಯುಗಾದಿ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ಪಡದೆ ಹಬ್ಬ. ಈ ರಾಜ್ಯಗಳಲ್ಲಿ ಈ ದಿನವನ್ನು ಹೊಸ ವರ್ಷದ ಮೊದಲ ದಿನ ಎಂದು ಸಂಭ್ರಮಿಸುತ್ತಾರೆ. ವರ್ಷದ ಮೊದಲ ದಿನವನ್ನು ಯುಗಾದಿ ಎಂದು ಕರೆಯುತ್ತಾರೆ.

ಹೂವುಗಳ ಅಲಂಕಾರ, ಸಾಂಪ್ರದಾಯಿಕ ಆಚರಣೆಗಳು ಮತ್ತು ಹಲವು ಬಗೆಯ ರುಚಿಯಾದ ವ್ಯಂಜನಗಳು ಯುಗಾದಿ ಹಬ್ಬದ ವಿಶೇಷವಾಗಿದೆ. ಯುಗಾದಿಯ ಆಚರಣೆಯ ಬಗ್ಗೆ ತಿಳಿದುಕೊಳ್ಳುವುದು ಬಹಳವಿದೆ. ದಕ್ಷಿಣ ಭಾರತೀಯರಿಗೆ ಪ್ರಮುಖವಾದ ಈ ಹಬ್ಬವು, ದೇಶದ ಸಾಂಸ್ಕೃತಿ ಪರಂಪರೆಯಲ್ಲಿ ವಿಶೇಷ ಸ್ಥಾನಗಳಿಸಿದೆ.

ಯುಗಾದಿ ಎಂದು ಆಚರಿಸುತ್ತಾರೆ?
ಚಂದ್ರ ಸೌರ ಕ್ಯಾಲೆಂಡರ್‌ ನ ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಎಂದು ಆಚರಿಸುತ್ತಾರೆ. ಇದು ಸಾಮಾನ್ಯವಾಗಿ ಏಪ್ರಿಲ್‌ ತಿಂಗಳಿನಲ್ಲೇ ಬರುತ್ತದೆ. ಈ ವರ್ಷ ಯುಗಾದಿಯು ಏಪ್ರಿಲ್‌ 2 (Ugadi 2022) ರಂದು ಆಚರಿಸಲ್ಪಡುವುದು.

ಯುಗಾದಿಯ ಏಕೆ ಮಹತ್ವದ್ದಾಗಿದೆ?
ಯುಗ ಎಂದರೆ ಕಾಲ ಅಥವಾ ಸಮಯ, ಆದಿ ಎಂದರೆ ಪ್ರಾರಂಭ. ಯುಗಾದಿ ಎಂದರೆ ಹೊಸ ಸಮಯದ ಪ್ರಾರಂಭ ಅಥವಾ ಹೊಸ ವರ್ಷ ಎಂದರ್ಥ. ಯುಗಾದಿ ಆಚರಿಸುವ ಜನರ ಜೀವನದಲ್ಲಿ ಇದು ಹೊಸ ಆರಂಭವನ್ನು ಸೂಚಿಸುತ್ತದೆ. ಮುಂಬರುವ ವರ್ಷವು ಸಂತೋಷದಿಂದ ಕೂಡಿರಲಿ ಎಂದು ಆಚರಿಸುವ ಹಬ್ಬವಾಗಿದೆ.

ಯುಗಾದಿಯ ಇತಹಾಸವೇನು?
ಹಿಂದೂ ಪುರಾಣಗಳ ಪ್ರಕಾರ ಬ್ರಹ್ಮ ದೇವನು ಜಗತ್ತಿನ ಸೃಷ್ಟಿಯನ್ನು ಯುಗಾದಿಯ ದಿನದಂದೇ ಆರಂಭಿಸದನು ಎಂದು ಹೇಳಲಾಗಿದೆ. ಬ್ರಹ್ಮ ದೇವನ ಸೃಷ್ಟಿಯ ಆರಂಭವನ್ನು ಗುರುತಿಸುವ ಸಲುವಾಗಿ ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಎಂದು ಸ್ಮರಿಸಲಾಗುವುದು. ಅಷ್ಟೇ ಅಲ್ಲದೇ ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಗೌರವಿಸುವ ಚೈತ್ರ ಮಾಸದ ನವರಾತ್ರಿಯ ಮೊದಲ ದಿನವನ್ನು ಕೂಡಾ ಯುಗಾದಿ ಎಂದೇ ಆಚರಿಸುತ್ತಾರೆ. ಭಾರತದ ಮಹಾನ್‌ ಗಣಿತ ಶಾಸ್ತ್ರಜ್ಞ ಭಾಸ್ಕರಾಚಾರ್ಯರು 12ನೇ ಶತಮಾನದಲ್ಲಿ ಯುಗಾದಿಯ ಈ ದಿನವನ್ನು ಹೊಸ ವರ್ಷ, ತಿಂಗಳು, ದಿನದ ಪ್ರಾರಂಭ ಎಂದು ಹೇಳಿದರು.

ಯುಗಾದಿಯ ಆಚರಣೆ ಹೇಗೆ?
ಯುಗಾದಿ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ. ಹೀಗಾಗಿ ಜನ ವಾರದ ಮೊದಲೇ ತಯಾರಿ ನಡೆಸುತ್ತಾರೆ. ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸುತ್ತಾರೆ. ಮನೆಯನ್ನು ಸ್ವಚ್ಛಗೊಳಿಸಿ, ಮಾವಿನ ಎಲೆ, ಹೂವುಗಳಿಂದ ಅಲಂಕರಿಸುತ್ತಾರೆ. ಅದಲ್ಲದೇ ಈ ಹಬ್ಬದಲ್ಲಿ ರಂಗೋಲಿಗೆ ಬಹಳ ಪ್ರಾಮುಖ್ಯತೆಯಿದೆ. ಅಭ್ಯಂಜನ ಮಾಡಿ, ಹೊಸ ಬಟ್ಟೆ ಧರಿಸಿ, ದೇವರನ್ನು ಪೂಜಿಸುವ ಮೂಲಕ ಹೊಸ ವರ್ಷವು ತಮ್ಮ ಜೀವನದಲ್ಲಿ ಹೊಸತನ್ನು ತರಲಿ ಎಂದು ಯುಗಾದಿ ಆಚರಿಸಿ ಸಂಭ್ರಮಿಸುತ್ತಾರೆ.

ಇದನ್ನೂ ಓದಿ: Daily Horoscope : ದಿನಭವಿಷ್ಯ : ಹೇಗಿದೆ ಶುಕ್ರವಾರದ ನಿಮ್ಮ ರಾಶಿಫಲ

ಇದನ್ನೂ ಓದಿ: Best fruit face packs : ಬೇಸಗೆಯಲ್ಲಿ ಈ ಹಣ್ಣಿನ ಫೇಸ್ ಪ್ಯಾಕ್ ಬಳಸಿ; ಚರ್ಮದ ಸಮಸ್ಯೆಗಳಿಗೆ ಗುಡ್ ಬೈ ಹೇಳಿ

(Happy Ugadi 2022 all you need to know significance and celebrations of Ugadi)

RELATED ARTICLES

Most Popular