ಮಂಗಳವಾರ, ಜೂನ್ 17, 2025
HomeCinemaKGF 2 : ಕೆಜಿಎಫ್ 2 ಟಿಕೆಟ್‌ ಬೊಂಬಾಟ್‌ ಸೇಲ್‌! ಕೇವಲ 12 ಗಂಟೆಯಲ್ಲಿ 1.7...

KGF 2 : ಕೆಜಿಎಫ್ 2 ಟಿಕೆಟ್‌ ಬೊಂಬಾಟ್‌ ಸೇಲ್‌! ಕೇವಲ 12 ಗಂಟೆಯಲ್ಲಿ 1.7 ಲಕ್ಷ ಮುಂಗಡ ಟಿಕೆಟ್ ಬುಕ್ಕಿಂಗ್ !

- Advertisement -

ಕೆಜಿಎಫ್ (KGF 2 ) ಸಿನಿಮಾ ಬಾಲಿವುಡ್ ನಾಯಕರ ನಿದ್ದೆಗೆಡಿಸುತ್ತಿದೆ ಅನ್ನೋದು ಸುಳ್ಳಲ್ಲ. ಇದರ ಮನ್ಸೂಚನೆ ಗಳಿಸಿಯೋ ಏನೋ, ಲಾಲ್ ಸಿಂಘ್ ಛಡ್ಡಾ ಸಿನಿಮಾ ಬಿಡುಗಡಯನ್ನೇ ಮುಂದೂಡಲಾಯಿತು. ಯಶ್ ಮುಂಬಯಿ ಯಾವ ಗಲ್ಲಿಗೋದರೂ ರಾಕಿ ಬಾಯ್ ಅಂಥ ಅಭಿಮಾನಿಗಳು ಸುತ್ತುವರಿಯುವುದನ್ನು ಬಾಲಿವುಡ್ಡೇ ನೋಡಿ ದಂಗಾಗಿಹೋಗಿದೆ. ಈಗ ಎಲ್ಲರ ನಿರೀಕ್ಷೆ ಕೆಜಿಎಫ್ -2 ಮೇಲೆ ಇದೆ ಅನ್ನೋದಕ್ಕೆ ಇಲ್ಲಿದೆ ಮತ್ತೊಂದು ಸಾಕ್ಷಿ. ಇದು ಕೇವಲ ಕರ್ನಾಟಕ, ಆಂಧ್ರಪ್ರದೇಶದಲ್ಲಿ ಮಾತ್ರವಲ್ಲ. ಇಡೀ ದಕ್ಷಿಣ ಭಾರತದಲ್ಲೆಲ್ಲಾ ಕೆಜಿಎಫ್ ಹವಾ ಸಿಕ್ಕಾಪಟ್ಟೆ ಜೋರಾಗಿದೆ ಅನ್ನೋದಕ್ಕೆ ಹಿಡಿದ ಕನ್ನಡಿ.

ಕೇವಲ 12 ಗಂಟೆಗಳಲ್ಲಿ ದಕ್ಷಿಣ ಭಾರತದ ಹಿಂದಿ ಭಾಷಿಕ ಪ್ರದೇಶದಲ್ಲಿ ಕೆಜಿಎಫ್ ಸಿನಿಮಾದ ಸುಮಾರು 1.7ಲಕ್ಷ ಮುಂಗಡ ಟಿಕೆಟ್ ಬುಕ್ಕಿಂಗ್ ಆಗಿದೆ. ಇದರ ಮೌಲ್ಯ ಹೆಚ್ಚು ಕಮ್ಮಿ 3.35 ಕೋಟಿ ಎನ್ನುವ ಅಂದಾಜು ಮಾಡಲಾಗಿದ್ದು. ತೆರಿಗೆ ಎಲ್ಲಾ ಕಳೆದರೆ 2.83 ಕೋಟಿ ಕೈಗೆ ಸಿಗಲಿದೆ.

ಕೆಜಿಎಫ್ ಮುಂಗಡ ಬುಕ್ಕಿಂಗ್ ಚಿತ್ರತಂಡ ನಿರೀಕ್ಷೆ ಮಾಡಿದ್ದಕ್ಕಿಂತ ಜೋರಾಗಿದೆ. ಇಡೀ ದೇಶದಲ್ಲಿ ದೆಹಲಿ ನಗರ ಒಂದರಲ್ಲೇ 75ಲಕ್ಷ ಮೌಲ್ಯದ ಟಿಕೆಟ್ ಮಾರಾಟವಾಗಿದೆಯಂತೆ. ಮುಂಬಯಿನಲ್ಲಿ ಸುಮಾರು 65 ಲಕ್ಷ ಮೊತ್ತದ ಟಿಕೆಟ್ ಬಿಕರಿಯಾಗಿದ್ದರೆ, ಪುಣೆ,ಸೂರತ್,ಅಹ್ಮದಾಬಾದ್, ಕೊಲ್ಕತ್ತಾ, ಜೈಪುರ, ಲಕ್ನೋಗಳಲ್ಲಿ 10 ಲಕ್ಷ ಮೊತ್ತದ ಟಿಕೆಟ್ ಬುಕ್ಕಿಂಗ್ ಆಗಿದೆ.

ಹಾಗಂತ, ಮುಂಗಡ ಬುಕಿಂಗ್ ವಾರದ ಎಲ್ಲಾ ದಿನಗಳಲ್ಲೂ ಲಭ್ಯವಿಲ್ಲ. ಭಾನವಾರ ಒಳಗೊಂಡಂತೆ ಸೀಮೀತ ದಿನಗಳಗೆ ಮಾತ್ರ ಮುಂಡ ಬುಕಿಂಗ್ ತೆರೆದಿದೆ. ಒಟ್ಟಾರೆ, ಮುಂಗಡ ಟಿಕೆಟ್ ಬುಕ್ಕಿಂಗ್ ಅನ್ನು 1,839 ಶೋಗಳಿಗೆ ಮಾತ್ರವಂತೆ. ಬುಧವಾರದ ಹೊತ್ತಿಗೆ ಹಿಂದಿ ಭಾಷಿಕ ಪ್ರದೇಶಗಳಿಂದಲೇ ಸುಮಾರು 15 ಕೋಟಿ ಮೊತ್ತದ ಟಿಕೆಟ್ ಬಿಕರಿಯಾಗುವ ಲೆಕ್ಕಾಚಾರವಿದೆ.

ಇದನ್ನೂ ಓದಿ : KGF 2 : ಕೆಜಿಎಫ್ ಅನ್ನು ಪಾನ್ ಇಂಡಿಯಾ, ಸೌತ್ ಇಂಡಿಯಾ ಸಿನಿಮಾ ಅನ್ನ ಬೇಡಿ! ಅದು ಅದ್ಭುತ ಹಿಂದೂಸ್ತಾನ್ ಮೂವಿ ಎಂದ ಸಂಜಯ್ ದತ್

ಕೆಜಿಎಫ್ -2 ಬಿಡಗಡೆಯಂದೇ ಬಾಲಿವುಡ್ ನ ಶಾಹೀದ್ ಕಪೂರ್ ನಟನೆಯ ಜರ್ಸಿ ಸಿನಿಮಾವು ಬಿಡುಗಡೆಯಾಗುತ್ತಿದೆ. ಆದರೆ, ಈಗಾಗಲೇ ನಟ ಯಶ್ ಅವರ ಕೆಜಿಎಫ್ -2 ಗೆ ಪ್ರೇಕ್ಷರು ಶೇ.60ರಷ್ಟು ಅಂಕ ನೀಡಿದ್ದಾರೆ, ಶಾಹೀದ್ ಕಪೂರ್ ಚಿತ್ರಕ್ಕೆ 40 ಕೊಟ್ಟಿರುವುದು ಯಶ್ ಬಾಲಿವುಡ್ ನಲ್ಲಿ ಬೇರು ಬಿಡುತ್ತಿರುವ ಸೂಚನೆ ಅನ್ನೋ ಮಾತು ಕೇಳಿಬರುತ್ತಿದೆ.

ಈಗಿರುವ ಕೆಜಿಎಫ್ ಅಲೆಯನ್ನು ಪರಿಗಣಿಸಿ, ಪ್ರಪಂಚದಾದ್ಯಂತ ಈ ಸಿನಿಮಾ ಬಿಡುಗಡೆಯಾದರೆ, 1,250ಕೋಟಿ ಕಲಕ್ಷನ್ ಆಗುತ್ತದೆ ಎನ್ನುವ ಲೆಕ್ಕಾಚಾರವನ್ನು ಮುಂದಿಟ್ಟಿದ್ದಾರೆ ಸಿನಿಮಾ ಪಂಡಿತರು. ಅದರಲ್ಲೂ ಹಿಂದಿ ಭಾಷಿಕ ಪ್ರದೇಶ ಒಂದರಿಂದಲೇ 400 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ 160 ಕೋಟಿ ಆಗಬಹುದು ಅನ್ನೋ ನಿರೀಕ್ಷೆ ಇದೆ.

ಇದನ್ನೂ ಓದಿ : KGF 2 Yash : ಸಲ್ಮಾನ್, ಶಾರೂಖ್ ಜೊತೆ ಹೋಲಿಸಬೇಡಿ : ಫ್ಯಾನ್ಸ್ ಗೆ ಯಶ್ ಮನವಿ

(KGF 2 Advance bookings in North India are smashing)

RELATED ARTICLES

Most Popular