Lemon : ಇಂಟರ್ನೆಟ್‌ ನಲ್ಲಿ ಹರಿದಾಡ್ತಾ ಇದೆ ಲಿಂಬು ಮೇಲೆ ಮಿಮ್ಸ್‌ ಮತ್ತು ಜೋಕ್ಸ್‌!

ಬೇಸಿಗೆ ಆರಂಭವಾಗಿದೆ, ನಮ್ಮ ದೇಹ ತಣಿಸಲು ತಂಪು ಪಾನೀಯಗಳು ಬೇಕು. ಪಾನೀಯ ಎಂದಾಕ್ಷಣ ನೆನಪಿಗೆ ಬರುವುದೇ ಲಿಂಬು(Lemon). ಫ್ರೆಶ್‌ ಲಿಂಬು ಸೋಡಾದಿಂದ ಹಿಡಿದು ಲಿಂಬು ಪಾನಕದವರೆಗೆ ಎಲ್ಲದಕ್ಕೂ ಲಿಂಬು ಬೇಕೇ ಬೇಕು. ಪರಿಣಾಮ ಮಾರುಕಟ್ಟೆಯಲ್ಲಿ ಲಿಂಬುವಿನ ದರ ಜಾಸ್ತಿಯಾಗಿರುವುದು. ಈ ವರ್ಷ ಬೇಸಿಗೆ ಶುರುವಾದಾಗಿನಿಂದಲೂ ಒಂದೇ ಸಮನೆ ಲಿಂಬುವಿನ ದರ ಏರುತ್ತಲೇ ಇದೆ. ಮತ್ತೂ ಕೆಳೆದ ಕೆಲವು ವಾರದಿಂದ ಅದರ ಮಿತಿಯೂ ದಾಟಿದೆ. 10 ರೂಪಾಯಿಗೆ 2 ಲಿಂಬು ಬಂದರೆ ಹೆಚ್ಚು.

ಈ ಲಿಂಬು ಸಿಕ್ಕಾಪಟ್ಟೆ ತನ್ನ ರೇಟ್‌ ಹೆಚ್ಚಿಸಿಕೊಂಡ ಮೇಲೆ ಸೋಷಿಯಲ್‌ ಮೀಡಿಯಾದಲ್ಲೂ ತನ್ನ ಹೆಸರು ಹರಿದಾಡುವಂತೆ ಮಾಡಿದೆ. ಕೆಲವು ವ್ಯಾಪಾರಿಗಳು ತಮ್ಮ ಗೋಳು ಹೇಳಿಕೊಂಡರೆ, ಇನ್ನು ಕೆಲವರು ಅದರ ಮೇಲೆ ಜೋಕ್ಸ್‌ ಮತ್ತು ಮಿಮ್ಸ್‌ ಮಾಡಿದ್ದಾರೆ. ಲಿಂಬು ದರ ಹೆಚ್ಚಾಗಿದೆ ಎಂದು ಯೋಚಿಸುತ್ತಲೇ ನಗುವಂತೆ ಮಾಡಿದ್ದಾರೆ.

ದರ ಏರಿಸಿಕೊಂಡ ಲಿಂಬುವಿನ ಮೇಲೆ ಟ್ವಿಟರ್‌ನಲ್ಲೂ ಬಿಸಿ ಬಿಸಿ ಮಾತು ಕೇಳಿಬರುತ್ತಿದೆ. ಅಷ್ಟೇ ಅಲ್ಲದೇ ಮೈಕ್ರೋ ಬ್ಲಾಗಿಂಗ್‌ ಸೈಟ್‌ಗಳ ಮೂಲಕ ಲಿಂಬುವಿನ ದರಕ್ಕೆ ಪ್ರತ್ಯುತ್ತರವನ್ನು ಜೋಕ್ಸ್‌ ಮತ್ತು ಮಿಮ್ಸ್‌ಗಳ ಮೂಲಕವೇ ನೀಡುತ್ತಿದ್ದಾರೆ.

ಜೀವನದಲ್ಲಿ ಎಂದಾದರೂ ಲಿಂಬು ಸಿಕ್ಕರೆ ಅದನ್ನು ಮಾರಾಟ ಮಾಡಿ ಎಂದು ಲಿಂಬುಗೆ ಹ್ಯಾಶ್‌ ಟ್ಯಾಗ್‌ (#nimbu) ಹಾಕಿ ಒಬ್ಬರು ಬರೆದುಕೊಂಡಿದ್ದಾರೆ. ಇನ್ನೊಂದು ಟ್ವೀಟ್‌ನಲ್ಲಿ “ಇದು ಲಿಂಬುವಿನ ಹೊಸ ತಳಿಯೇ…….?” ಎಂದಿದ್ದಾರೆ, “ಚಾಟ್‌ ಸೆಂಟರ್‌ಗಳಲ್ಲಿ ಚಾಟ್‌ನಲ್ಲಿಯ ಲಿಂಬುಗೆ ಎಕ್ಸಟ್ರಾ ಚಾರ್ಜ್‌ ಮಾಡುತ್ತಿದ್ದಾರೆಯೇ?” ಎಂದು ಮತ್ತೊಬ್ಬರು ಟ್ವೀಟ್‌ ಮಾಡಿ ಕೇಳಿದ್ದಾರೆ.

ನಿಮಗಾಗಿ ಲಿಂಬುವಿನ ಕೆಲವು ಮಿಮ್ಸ್‌ಗಳು

ಇದನ್ನೂ ಓದಿ : Watermelon : ಬೇಸಿಗೆಯ ಬಿಸಿಲಿಗೆ ತಂಪು ನೀಡುವ ಕಲ್ಲಂಗಡಿ ಹಣ್ಣಿನ ಪ್ರಯೋಜನಗಳೇನು ಎಂಬುದು ಗೊತ್ತೇ?

ಇದನ್ನೂ ಓದಿ : Lemon peel : ಉಪಯೋಗಿಸಿದ ಬಳಿಕ ಲಿಂಬೆ ಸಿಪ್ಪೆ ಎಸೆಯುತ್ತಿದ್ದೀರಾ? ಹಾಗಾದ್ರೇ ಈ ಸ್ಟೋರಿ ನೋಡಲೇ ಬೇಕು …!

(Lemon Price memes and jokes over social media)

Comments are closed.