actress rashmika mandanna : ರಶ್ಮಿಕಾ ಮಂದಣ್ಣ ವಿವಾಹದ ಬಳಿಕ ವಿಚ್ಛೇದನ ಪಡೆಯುತ್ತಾರೆ:ವೇಣುಸ್ವಾಮಿ

ಸ್ಯಾಂಡಲ್​ವುಡ್​​ನ ಕಿರಿಕ್​ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿರುವ ನಟಿ ರಶ್ಮಿಕಾ ಮಂದಣ್ಣ (actress rashmika mandanna) ಇದೀಗ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ಬಾಲಿವುಡ್​ ಅಂಗಳಕ್ಕೂ ಕಾಲಿರಿಸಿದ್ದಾರೆ. ಸಿದ್ಧಾರ್ಥ ಮಲ್ಹೋತ್ರಾ ಜೊತೆಯಲ್ಲಿ ಸಿನಿಮಾವನ್ನು ಪೂರೈಸಿರುವ ನಟಿ ರಶ್ಮಿಕಾ ಇನ್ನೇನು ಕೆಲವೇ ದಿನಗಳಲ್ಲಿ ರಣಬೀರ್​ ಕಪೂರ್​ ಜೊತೆಯಲ್ಲಿ ಆ್ಯನಿಮಲ್​ ಸಿನಿಮಾದಲ್ಲಿ ನಟಿಸಲಿದ್ದಾರೆ.


ಕಿರಿಕ್​ ಪಾರ್ಟಿ ಸಿನಿಮಾದ ಬಳಿಕ ನಟ ರಕ್ಷಿತ್​ ಶೆಟ್ಟಿ ಜೊತೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟಿ ರಶ್ಮಿಕಾ ಮಂದಣ್ಣ ಕಾಲಾಂತರದಲ್ಲಿ ಈ ಸಂಬಂಧವನ್ನು ಮುರಿದುಕೊಂಡಿದ್ದರು. ಇದಾದ ಬಳಿಕ ರಶ್ಮಿಕಾ ಮಂದಣ್ಣರ ಹೆಸರು ನಟ ವಿಜಯ್​ ದೇವರಕೊಂಡ ಜೊತೆಯಲ್ಲಿ ಥಳುಕು ಹಾಕಿಕೊಂಡಿದೆ. ಆಗಾಗ ರೆಸ್ಟಾರೆಂಟ್​ಗಳಲ್ಲಿ ಈ ಜೋಡಿ ಪಪ್ಪರಾಜೆಗಳ ಕಣ್ಣಿಗೆ ಬೀಳುತ್ತಲೇ ಇದೆ.


ಈ ಎಲ್ಲದರ ನಡುವೆ ನಟಿ ರಶ್ಮಿಕಾ ಮಂದಣ್ಣರ ವೈವಾಹಿಕ ಜೀವನ ಸುಖಮಯವಾಗಿ ಇರುವುದಿಲ್ಲ ಎಂದು ಆಂಧ್ರ ಪ್ರದೇಶದ ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ. ಮದುವೆಯ ಬಳಿಕ ನಟಿ ರಶ್ಮಿಕಾ ಡಿವೋರ್ಸ್ ನೀಡುತ್ತಾರೆ ಎಂದು ವೇಣು ಸ್ವಾಮಿ ನೀಡಿರುವ ಹೇಳಿಕೆಯ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿದೆ.


ಸೆಲೆಬ್ರಿಟಿಗಳ ಬಗ್ಗೆ ಭವಿಷ್ಯವನ್ನು ನುಡಿಯುವ ವೇಣು ಸ್ವಾಮಿ ಈ ಹಿಂದೆ ಅಕ್ಕಿನೇನಿ ನಾಗ ಚೈತನ್ಯ ಹಾಗೂ ಸಮಂತಾ ರುತ್​ ಪ್ರಭು ಕೂಡ ವಿಚ್ಛೇದನ ಪಡೆಯುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಆ ಮಾತು ನಿಜವಾಗಿದೆ ಕೂಡ. ಹೀಗಾಗಿ ರಶ್ಮಿಕಾ ಮಂದಣ್ಣ ವಿಚಾರದಲ್ಲಿಯೂ ಈ ಮಾತು ನಿಜವಾಗುತ್ತಾ ಎಂಬ ಪ್ರಶ್ನೆ ಇದೀಗ ಎಲ್ಲೆಡೆ ಹರಿದಾಡುತ್ತಿದೆ.


ಕೇವಲ ರಶ್ಮಿಕಾ ಮಂದಣ್ಣ ಮಾತ್ರವಲ್ಲದೇ ಅನುಷ್ಕಾ ಶೆಟ್ಟಿ, ಪ್ರಭಾಸ್​, ನಯನತಾರಾರ ವೈವಾಹಿಕ ಜೀವನದಲ್ಲಿ ಸುಖ ಇರುವುದಿಲ್ಲ ಎಂದು ವೇಣು ಸ್ವಾಮಿ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ನನ್ನ ಬಳಿಯಲ್ಲಿ ತಾರಾ ಪೂಜೆಯನ್ನು ಮಾಡಿಸಿಕೊಂಡ ಬಳಿಕವೇ ಅವರಿಗೆ ಚಿತ್ರರಂಗದಲ್ಲಿ ಅದೃಷ್ಟ ಖುಲಾಯಿಸಿದೆ ಎಂದು ವೇಣುಸ್ವಾಮಿ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನು ಓದಿ : Aregalige Nee : ಮೇ ತಿಂಗಳಲ್ಲಿ ತೆರೆಗೆ ಬರಲಿದೆ ‘ಖಾಸಗಿ ಪುಟಗಳು’ : ಯೂಟ್ಯೂಬ್ ನಲ್ಲಿ ‘ಅರೆಘಳಿಗೆ’ ಹಾಡಿನ ದಿಬ್ಬಣ

ಇದನ್ನೂ ಓದಿ : Wedding Dance : ತಂಗಿ ಮದುವೆಯಲ್ಲಿ ಅಣ್ಣಂದಿರ ಭರ್ಜರಿ ಡ್ಯಾನ್ಸ್‌ : ವೈರಲ್‌ ಆಯ್ತು ಉಡುಪಿಯ ಮದುವೆ ವಿಡಿಯೋ

actress rashmika mandanna married life divorce venu swamy famous celebrity astrologer of andhra pradesh

Comments are closed.