Vastu Tips : ವಾಸ್ತು ಎನ್ನುವುದು ಮನೆಯ ಪ್ರತಿಯೊಂದು ಮೂಲೆ ಮೂಲೆಗೂ ಅನ್ವಯಿಸುತ್ತದೆ. ಅಡುಗೆ ಕೋಣೆಯಿಂದ ಹಿಡಿದು ಶೌಚಾಲಯದವರೆಗೂ ವಾಸ್ತು ನಿಯಮ ಅನ್ವಯಿಸುತ್ತದೆ. ದಂಪತಿ ಮಲಗುವ ಕೋಣೆಗಳಲ್ಲಿಯೂ ಸಹ ವಾಸ್ತು ನಿಯಮವನ್ನು ಕಾಪಾಡುವುದು ತುಂಬಾನೇ ಅನಿವಾರ್ಯವಾಗಿದೆ.
ಸಂತೋಷಕರ ದಾಂಪತ್ಯಕ್ಕಾಗಿ ಕೋಣೆಗೆ ಈ ಬಣ್ಣ ಬಳಿಯಿರಿ :

ಪ್ರೀತಿ ಮತ್ತು ಶಾಂತಿಗಾಗಿ ನೈಋತ್ಯ ದಿಕ್ಕಿನಲ್ಲಿರುವ ಮಾಸ್ಟರ್ ಬೆಡ್ ರೂಂನ ಗೋಡೆಗಳನ್ನು ಗುಲಾಬಿ ಅಥವಾ ಬೂದು ಬಣ್ಣದಲ್ಲಿ ಚಿತ್ರಿಸಬೇಕು.
ಈ ಫೋಟೋಗಳು ಮಲಗುವ ಕೋಣೆಯಲ್ಲಿ ಇರದಿರಲಿ :

ಮಲಗುವ ಕೋಣೆಯಲ್ಲಿ ಯಾವುದೇ ದೇವರು ಅಥವಾ ದೇವತೆಗಳ ಚಿತ್ರಗಳು ಇರಬಾರದು. ಅಲ್ಲದೆ, ಮನುಷ್ಯರ ಒಬ್ಬಂಟಿ ಫೋಟೋ ಹಾಗೂ ಕಾಡು ಪ್ರಾಣಿಗಳ ಫೋಟೋ ಇರಬಾರದು.
ಹಾಸಿಗೆ ಕಡೆಗೆ ಮುಖ ಮಾಡಿ ಕನ್ನಡಿ ಇಡಬೇಡಿ :

ಹಾಸಿಗೆಗೆ ಮುಖ ಮಾಡಿ ಕನ್ನಡಿಗಳನ್ನು ಇಡಬಾರದು. ಮಲಗುವ ಕೋಣೆಯಲ್ಲಿ ಕನ್ನಡಿಗಳು ನೇರವಾಗಿ ಹಾಸಿಗೆಯತ್ತ ಮುಖ ಮಾಡಿರಬಾರದು.
ಸುಗಂಧಭರಿತ ಕ್ಯಾಂಡಲ್ಗಳನ್ನು ಬಳಕೆ ಮಾಡಿ :

ದಂಪತಿಯ ನಡುವೆ ಪ್ರೀತಿಯನ್ನು ಹೆಚ್ಚಬೇಕು ಅಂದರೆ ಸುಗಂಧಭರಿತ ಮೇಣದಬತ್ತಿಗಳನ್ನು ಹಚ್ಚಿ.
ಮರದ ಮಂಚಗಳನ್ನು ಬಳಕೆ ಮಾಡಿ :

ಮಲಗುವ ಕೋಣೆಯಲ್ಲಿ ಮರದಿಂದ ನಿರ್ಮಿಸಲಾದ ಮಂಚವನ್ನೇ ಬಳಕೆ ಮಾಡಿ. ಯಾವುದೇ ಕಾರಣಕ್ಕೂ ಬೆಡ್ ಬಾಕ್ಸ್ ಅಥವಾ ಕಬ್ಬಿಣದ ನಿರ್ಮಿಸಿದ ಮಂಚಗಳ ಬಳಕೆ ಬೇಡ.
ಇದನ್ನು ಓದಿ :KGF Chapter 2 Piracy Leak: ಕೆಜಿಎಫ್ 2ಗೆ ಪೈರಸಿ ಶಾಕ್: ಮೊದಲ ದಿನವೇ ಲೀಕ್ ಆದ ಸಿನೆಮಾ
ಇದನ್ನೂ ಓದಿ : Kanthara : ಕರಾವಳಿಯ ಕತೆ ಹೇಳೋಕೆ ಬರ್ತಿದೆ ಕಾಂತಾರ : ರಿಲೀಸ್ ಆಯ್ತು ಟೀಸರ್
Vastu Tips for happy married life: Avoid mirror in bedroom, and use THIS wall colour for long-lasting relationship!