Santosh Patil : ಸಂತೋಷ್ ಪಾಟೀಲ್ ತಂಗಿದ್ದ ಹೊಟೇಲ್ ನಲ್ಲಿ ಏನಾಯ್ತು? ಇಲ್ಲಿದೆ Exclusive Details

ಉಡುಪಿ : ಗುತ್ತಿಗೆದಾರ ಸಂತೋಷ್ ಪಟೇಲ್ ಆತ್ಮಹತ್ಯೆ ಪ್ರಕರಣ ಉಡುಪಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದೆ. ಈ ಮಧ್ಯೆ ಸಂತೋಷ್ ಪ್ರಕರಣದ ತನಿಖೆಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎರಡು ತನಿಖಾ ತಂಡ ಕೂಡ ರಚಿಸಿದ್ದಾರೆ. ಈ ಮಧ್ಯೆ ಉಡುಪಿಯಲ್ಲಿ ಸಂತೋಷ್ ಆತ್ಮಹತ್ಯೆಗೆ ಶರಣಾದ ಹೊಟೇಲ್ ಮ್ಯಾನೇಜರ್ ಸಂತೋಷ್ ಚಲನವಲನದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಕುರಿತ ಎಕ್ಸ್‌ ಕ್ಲೂಸಿವ್‌ ಮಾಹಿತಿ (Exclusive) ಇಲ್ಲಿದೆ.

ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟಿಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂಭವಿ ಲಾಡ್ಜ್ ಮ್ಯಾನೇಜರ್ ದಿನೇಶ್ ಪ್ರತಿಕ್ರಿಯೆ ನೀಡಿದ್ದು, ಸಂತೋಷ್ ಪಾಟಿಲ್ ಇಬ್ಬರು ಸ್ನೇಹಿತರೊಂದಿಗೆ 11 ರ ಸಂಜೆ 5ಕ್ಕೆ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದರು. ಸಂತೋಷ್ ಪಾಟೀಲ್ ಹೆಸರಲ್ಲಿ ರೂಂ ಬುಕ್ ಆಗಿತ್ತು. ಹಿಂಡೆಲಗ ವಿಳಾಸ ಕೊಟ್ಟು ಎರಡು ರೂಂ ಬುಕ್ ಮಾಡಿದ್ದರು ಸಂತೋಷ್‌ ಪಾಟೀಲ್ ಎಂದು ಮಾಹಿತಿ ನೀಡಿದ್ದಾರೆ. ಹೊಟೇಲ್ ನ ರೂಂ ನಂ 207 ರಲ್ಲಿ ಸಂತೋಷ್ ಹಾಗೂ 209 ನಲ್ಲಿ ಸ್ನೇಹಿತರಾದ ಸಂತೋಷ್ ಮೇದಪ್ಲ ಹಾಗೂ ಪ್ರಶಾಂತ್ ಶೆಟ್ಟಿ ತಂಗಿದ್ದರು.‌ ರೂಂ ಚೆಕ್ ಇನ್ ಆದ ಬಳಿಕ ಎಲ್ಲರೂ ಆ ಸಂಜೆ ಊಟಕ್ಕೆ ಹೊರಗೆ ಹೋಗಿ ರಾತ್ರಿ 8:59ಕ್ಕೆ ರೂಂ ಬಂದಿದ್ದರು. ಬರುವಾಗ ಸಂತೋಷ್ ಪಾಟೀಲ್ ಕವರ್ ನಲ್ಲಿ ಜ್ಯೂಸ್ ತಂದಿದ್ದರು ಎಂದು ಹೊಟೇಲ್ ಮ್ಯಾನೇಜರ್ ವಿವರಿಸಿದ್ದಾರೆ.

ಮರುದಿನ ಬೆಳಿಗ್ಗೆ 10:50ಕ್ಕೆ ಜೊತೆಯಲ್ಲಿದ್ದ ಸ್ನೇಹಿತರು ನಮ್ಮಲ್ಲಿ ಬಂದು ಸಂತೋಷ್ ಬಗ್ಗೆ ವಿಚಾರಿಸಿದ್ದಾರೆ. ಸಂತೋಷ್ ಪಾಟೀಲ್ ರೂ ಬಾಗಿಲು ತೆಗೆಯುತ್ತಿಲ್ಲ ಎಷ್ಟೇ ಕರೆ ಮಾಡಿದ್ರು ತೆಗೆಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಕೂಡಲೇ ರೂಂ ಬಾಯ್ ಕೈಯಲ್ಲಿ ನಕಲಿ ಬೀಗದ ಕೀ ಮೂಲಕ ಸಂತೋಷ್ ರೂಂ 207 ಬಾಗಿಲು ತೆಗೆದಾಗ ಸಂತೋಷ್ ಪಾಟೀಲ್ ಮೃತಪಟ್ಟಿದ್ದ ಎಂದು ಮಾಹಿತಿ ನೀಡಿದರು.

ಆ ಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆವು. ಮೃತಪಟ್ಟಿದ್ದ ಆ ದಿನ ಬೆಳಿಗ್ಗೆ ಪೊಲೀಸರು ಸಂತೋಷ್ ಪಾಟೀಲ್ ಕೇಳಿಕೊಂಡು ಲಾಡ್ಜ್ ಬಂದಿದ್ದರು. ಬೆಳಗಾವಿ ವಿಳಾಸದೊಂದಿಗೆ ಫೋಟೋ ತೋರಿಸಿ ತಂಗಿದ್ದಾರಾ‌ ಎಂದು ಪ್ರಶ್ನಿಸಿದ್ರು. ಫೋಟೋ ನೋಡಿ ಪರಿಚಯ ಆಗಿಲ್ಲ ಸಂತೋಷ್ ರೂಂ ಬುಕ್ ಮಾಡುವಾಗ ಹಿಂಡೆಲಗಾ ವಿಳಾಸ ಕೊಟ್ಟಿದ್ದರಿಂದ ಪೊಲೀಸರು ಬೆಳಗಾವಿ ಅಂದಾಗ ಗೊತ್ತಾಗಿಲ್ಲ ಎಂದಿದ್ದಾರೆ. ಅಲ್ಲದೆ ಸಧ್ಯ ನಮ್ಮಲ್ಲಿದ್ದ ಎಲ್ಲಾ ಸಿಸಿ ಟಿವಿ ದೃಶ್ಯಾವಳಿ ಪೊಲೀಸರು ಪಡೆದುಕೊಂಡಿದ್ದಾರೆ ಎಂದು ದಿನೇಶ್ ವಿವರಿಸಿದ್ದಾರೆ. ಅಲ್ಲದೇ ಪೊಲೀಸರು 207 ಹಾಗೂ 209 ರೂಂ ವಾರದ ಮಟ್ಟಿಗೆ ಯಾರಿಗೂ ಕೊಡಬೇಡಿ ಎಂದಿದ್ದಾರೆ.‌

ಅಲ್ಲದೇ ಇನ್ನು ಹದಿನೈದು ದಿನಗಳ ಕಾಲ ಮೂರನೇ ಮಹಡಿಯ ಯಾವುದೇ ಕೋಣೆ ಗ್ರಾಹಕರಿಗೆ ನೀಡುತ್ತಿಲ್ಲ. ಸದ್ಯ ಸಂತೋಷ್ ಮೃತಪಟ್ಟಿದ್ದ ಕೋಣೆ ಸ್ವಚ್ಚ ಮಾಡಲಾಗಿದೆ. ಗಣಹೋಮ ಮಾಡಿ ಒಂದು ವಾರದ ಬಳಿಕ ಗ್ರಾಹಕರಿಗೆ ನೀಡಲಾಗುವುದು ಎಂದಿದ್ದಾರೆ. ಅಲ್ಲದೇ ಈ ಅತ್ಮಹತ್ಯೆಯಿಂದಾಗಿ ನಮ್ಮ ಲಾಡ್ಜ್ ಹೆಸರು ಹಾಳಾಗಿ ತುಂಬ ಕಷ್ಟ ಪಡುವಂತಾಯಿತು. ಬಹಳಷ್ಟು ಬುಕ್ಕಿಂಗ್ ಕ್ಯಾನ್ಸಲ್ ಆಗಿದೆ ಎಂದು ಹೊಟೇಲ್ ಮ್ಯಾನೇಜರ್ ತಮ್ಮ ದುಃಖ ತೋಡಿಕೊಂಡಿದ್ದಾರೆ.

ಇದನ್ನೂ ಓದಿ : ಈಶ್ವರಪ್ಪ ಬಚಾವ್ ಮಾಡಲು ಸಿಎಂ ಮಾಸ್ಟರ್ ಪ್ಲ್ಯಾನ್ : ಸಿಐಡಿ ತನಿಖೆಗೆ ಸಂತೋಷ್ ಕೇಸ್

ಇದನ್ನೂ ಓದಿ : ಸಂತೋಷ್‌ ಆತ್ಮಹತ್ಯೆ ಪ್ರಕರಣ, ಎಲ್ಲಾ ಆಯಾಮದಲ್ಲಿಯೂ ತನಿಖೆ : ಪಶ್ಚಿಮ ವಲಯ ಐಜಿಪಿ

What happened at the hotel where Santosh Patil was staying? Here’s Exclusive Details

Comments are closed.