Vastu Tips: ಕೃಷ್ಣನಿಗೆ ಅತ್ಯಂತ ಪ್ರಿಯವಾದ ವಸ್ತುಗಳಲ್ಲಿ ಕೊಳಲು ಪ್ರಮುಖ ಸ್ಥಾನದಲ್ಲಿದೆ. ಕೊಳಲಿನಿಂದ ಬರುವ ಆ ಇಂಪಾದ ಸಂಗೀತವನ್ನು ಕೇಳುವುದು ಕಿವಿಗಳಿಗೆ ಪರಮಾನಂದವನ್ನು ನೀಡುತ್ತದೆ . ಈ ಕೊಳಲು ಕೇವಲ ಸಂಗೀತ ಸಾಧನ ಮಾತ್ರವಲ್ಲ. ಕೊಳಲು ಹಾಗೂ ವಾಸ್ತು ಶಾಸ್ತ್ರಕ್ಕೆ ಅವಿನಾಭಾವ ಸಂಬಂಧವಿದೆ ಎಂದರೆ ನೀವು ನಂಬಲೇಬೇಕು. ಕೊಳಲನ್ನು ನೀವು ಮನೆಯ ಆಯ್ದ ಸ್ಥಳಗಳಲ್ಲಿ ಇಡುವುದರಿಂದ ನಿಮ್ಮ ಮನೆಗಳಲ್ಲಿ ಸಂಪತ್ತಿನ ಹರಿವು ಹೆಚ್ಚುವುದರ ಜೊತೆಯಲ್ಲಿ ದಾಂಪತ್ಯ ಜೀವನದಲ್ಲಿ ಇರುವ ಎಲ್ಲಾ ವಿರಸಗಳು ದೂರಾಗುತ್ತದೆ.
ಭಗವಾನ್ ಶ್ರೀಕೃಷ್ಣ ಕೊಳಲನ್ನು ಎಂದಿಗೂ ತನ್ನ ಬಳಿಯೇ ಇಟ್ಟುಕೊಳ್ಳುತ್ತಿದ್ದ. ಅದೇ ರೀತಿ ವಾಸ್ತು ಶಾಸ್ತ್ರ ಕೂಡ ಮನೆಯಲ್ಲಿ ಎಂದಿಗೂ ಕೊಳಲು ಇರಲಿ ಎಂದು ಹೇಳುತ್ತದೆ. ಮನೆಯ ಯಾವುದೇ ಗೋಡೆಗಳಲ್ಲಿ ಅಥವಾ ದೇವರ ಕೋಣೆಯ ಹೊರಭಾಗದ ಗೋಡೆಯಲ್ಲಿ ನೀವು ಕೊಳಲನ್ನು ನೇತು ಹಾಕುವುದರಿಂದ ಮನೆಯಲ್ಲಿ ಧನಾಗಮನ ಹೆಚ್ಚುತ್ತದೆ. ಇದರ ಜೊತೆಯಲ್ಲಿ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ ಎಂದು ವಾಸ್ತು ಶಾಸ್ತ್ರ ಹೇಳಿದೆ.
ನಿಮ್ಮ ಮನೆಯ ಯಾವುದೇ ಸದಸ್ಯರು ಹೊಸ ಕೆಲಸವನ್ನು ಮಾಡಿದರೆ ಮತ್ತು ಅದು ಪ್ರಾರಂಭವಾಗುವ ಮೊದಲು ಹಾಳಾಗಿದ್ದರೆ, ನಂತರ ನವಿಲು ಗರಿಗಳಿರುವ ಕೊಳಲನ್ನು ಗೋಡೆಯ ಮೇಲೆ ಇಡಬೇಕು. ನಿಮ್ಮ ಎಲ್ಲಾ ಕೆಲಸಗಳು ಆಗುತ್ತವೆ.ನೀವು ಮಕ್ಕಳ ಕೋಣೆಯಲ್ಲಿ ಕೊಳಲನ್ನು ಇರಿಸಬೇಕು ಎಂದುಕೊಂಡಿದ್ದರೆ ಬಿಳಿ ಬಣ್ಣದ ಕೊಳಲನ್ನು ಆಯ್ಕೆ ಮಾಡಿಕೊಳ್ಳಿ.
ಹಸಿರು ಬಣ್ಣದ ಕೊಳಲನ್ನು ದಂಪತಿ ಮಲಗುವ ಕೋಣೆಯಲ್ಲಿ ಎಲ್ಲಿಯಾದರೂ ಅಡಗಿಸಿ ಇಡಬೇಕು. ಈ ರೀತಿ ಮಾಡುವುದರಿಂದ ಪತಿ – ಪತ್ನಿ ನಡುವೆ ಪ್ರೀತಿ ಹೆಚ್ಚುತ್ತದೆ. ಇದರಿಂದ ಇಬ್ಬರ ನಡುವೆ ಪರಸ್ಪರ ಗೌರವ ಭಾವನೆ ಮೂಡುವುದರ ಜೊತೆಯಲ್ಲಿ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಶಮನವಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳಿದೆ.
ಇದನ್ನು ಓದಿ : PUC Exams 2022 : ಏಪ್ರಿಲ್ 22 ರಿಂದ ದ್ವಿತೀಯ ಪಿಯು ಪರೀಕ್ಷೆ : ಹಿಜಾಬ್‌ಗೆ ಇಲ್ಲ ಅವಕಾಶ : ಸಚಿವ ಬಿ.ಸಿ.ನಾಗೇಶ್
ಇದನ್ನೂ ಓದಿ : Shah Rukh Khan: ಶಾರುಖ್ ಖಾನ್ ಮತ್ತೊಂದು ಬಿಗ್ ಬಜೆಟ್ ಸಿನಿಮಾ!
Vastu Tips: Know how a flute can solve rift between husband and wife