skin in summer : ಬೇಸಿಗೆ ಕಾಲದಲ್ಲಿ ಹೀಗಿರಲಿ ನಿಮ್ಮ ತ್ವಚೆಯ ಆರೈಕೆ

skin in summer : ಈಗಂತೂ ಬೇಸಿಗೆ ಕಾಲ. ಬೇಸಿಗೆ ರಜೆಗಳು ಕೂಡ ಆರಂಭವಾಗಿರೋದ್ರಿಂದ ಟ್ರಿಪ್​ಗಳ ಬಗ್ಗೆ ಪ್ಲಾನ್​ಗಳು ನಡೆಯುತ್ತಲೇ ಇರುತ್ತದೆ. ಅಲ್ಲದೇ ಈ ಸಮಯದಲ್ಲಿ ಮದುವೆ ಮುಂಜಿಗಳಂತಹ ಕಾರ್ಯಕ್ರಮಗಳೂ ಹೆಚ್ಚು. ಆದರೆ ಬೇಸಿಗೆ ಕಾಲದಲ್ಲಿ ಅತಿಯಾದ ಸುತ್ತಾಟ ನಿಮ್ಮ ತ್ವಚೆಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಬಿಸಿಲಿನ ಶಾಖ, ಮಾಲಿನ್ಯಗಳಿಂದಾಗಿ ನಿಮ್ಮ ತ್ವಚೆಯ ನೈಸರ್ಗಿಕ ಕಾಂತಿ ಹಾಳಾಗಿ ಬಿಡುತ್ತದೆ.


ತಜ್ಞರ ಸಲಹೆ :ಈ ಸಮಯದಲ್ಲಿ ವಿಟಾಮಿನ್​ ಸಿ ಸೆರಮ್​ಗಳನ್ನು ಹೆಚ್ಚಾಗಿ ಬಳಕೆ ಮಾಡಬೇಕೆಂದು ತಜ್ಞರು ಸಲಹೆ ನೀಡುತ್ತಾರೆ. ಇದರಲ್ಲಿರುವ ಆಂಟಿ ಆಕ್ಸಿಡಂಟ್​ಗಳು ನಿಮ್ಮ ತ್ವಚೆಯನ್ನು ಹೈಡ್ರೇಟ್​ ಮಾಡುತ್ತವೇ. ಅಲ್ಲದೇ ಇವು ತ್ವಚೆ ಹಾಳಾಗುವುದರಿಂದಲೂ ತಡೆಯುತ್ತವೆ. ಅಲ್ಲದೇ ಊಟದಲ್ಲಿ ಹೆಚ್ಚೆಚ್ಚು ತರಕಾರಿ ಹಾಗೂ ಹಣ್ಣಗಳನ್ನು ಸೇರಿಸಿಕೊಳ್ಳುವುದರಿಂದಲೂ ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.


ಹೆಚ್ಚು ನೀರು ಸೇವಿಸಿ : ನಿಮ್ಮ ತ್ವಚೆಯು ನೈಸರ್ಗಿಕವಾಗಿ ಹೊಳೆಯಬೇಕು ಅಂದರೆ ನೀವು ನೀರನ್ನು ಹೆಚ್ಚಾಗಿ ಕುಡಿಯಬೇಕು. ಇದರಿಂದ ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳು ದೇಹದಿಂದ ವಿಸರ್ಜಿಸಲ್ಪಡುತ್ತವೆ . ಅಲ್ಲದೇ ಇದು ಬೇಸಿಗೆ ಸಾಮಾನ್ಯವಾಗಿ ಕಾಡುವ ತುರಿಕೆ, ಮೊಡವೆ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಸಿಂಪಲ್​ ಪರಿಹಾರವಾಗಿದೆ.


ಫೇಸ್​ ಟೋನರ್​ : ಬೇಸಿಗೆಯಲ್ಲಿ ನಿಮಗೆ ಸಮಯ ಸಿಕ್ಕಾಗಲೆಲ್ಲ ಮುಖ ತೊಳೆದುಕೊಳ್ಳುತ್ತಿರುವುದನ್ನು ಮರೆಯುವಂತಿಲ್ಲ. ಇದರ ಜೊತೆಯಲ್ಲಿ ಟೋನರ್​​ ಬಳಕೆ ಮಾಡುವುದನ್ನು ರೂಢಿ ಮಾಡಿಕೊಳ್ಳಿ. ಟೋನರ್​​ಗಳು ನಿಮ್ಮ ಮುಖದಲ್ಲಿನ ಎಲ್ಲಾ ಡೆಡ್​​ ಸ್ಕಿನ್​ ಸೆಲ್​ಗಳನ್ನು ತೆಗೆದು ಹಾಕುತ್ತವೆ. ಹೀಗಾಗಿ ಯಾವಾಗಲು ಮುಖ ತೊಳೆದ ಬಳಿಕ ಟೋನರ್​ ಬಳಕೆ ಮರೆಯಬೇಡಿ.


ಮಾಯ್ಶ್ಚೂರೈಸರ್​ ಬಳಕೆ : ಬೇಸಿಗೆಯಲ್ಲಿ ನಿಮ್ಮ ತ್ವಚೆಯನ್ನು ಎಷ್ಟು ಹೈಡ್ರೇಟ್​ ಮಾಡಿದರೂ ಸಹ ಅದು ಕಡಿಮೆಯೇ. ಹೀಗಾಗಿ ನೀವು ಈ ಅವಧಿಯಲ್ಲಿ ಮಾಯ್ಶ್ಚೂರೈಸರ್ ಹಾಗೂ ಸೆರಂಗಳನ್ನು ಹೆಚ್ಚಾಗಿ ಬಳಕೆ ಮಾಡಬೇಕು. ಇದರಿಂದ ನಿಮ್ಮ ತ್ವಚೆಗೆ ನೈಸರ್ಗಿಕ ಕಾಂತಿ ಸಿಗಲಿದೆ.

ಸನ್​ಸ್ಕ್ರೀನ್​ ಮರೆಯಲೇಬೇಡಿ : ಬೇಸಿಗೆಯಲ್ಲಿ ನೀವು ಸನ್​ಸ್ಕ್ರೀನ್​​ಗಳನ್ನು ಮರೆಯುವಂತೆಯೇ ಇಲ್ಲ. ಈ ಸಮಯದಲ್ಲಿ ಉಂಟಾಗುವ ಸುಕ್ಕುಗಟ್ಟುವಿಕೆ, ಕಲೆಗಳು, ಸೂರ್ಯನಿಂದ ಸುಟ್ಟ ಕಲೆಗಳು ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಲು ಸನ್​ಸ್ಕ್ರೀನ್​ ಬಳಕೆ ಅತ್ಯಗತ್ಯ, ಇವು ಸೂರ್ಯನ ನೇರಳಾತೀತ ಕಿರಣಗಳಿಂದ ನಿಮ್ಮ ತ್ವಚೆಯನ್ನು ಕಾಪಾಡಿತ್ತವೆ.

ಮನೆ ಮದ್ದುಗಳು : ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಮನೆಯಲ್ಲಿಯೇ ಸಾಕಷ್ಟು ಮನೆಮದ್ದುಗಳನ್ನು ಮಾಡಬಹುದಾಗಿದೆ. ಮನೆಯಲ್ಲಿಯೇ ತಯಾರಿಸಿದ ಫೇಸ್​ ಪ್ಯಾಕ್​​ಗಳು ನಿಮ್ಮ ತ್ವಚೆಯ ಆರೋಗ್ಯವನ್ನು ಹೆಚ್ಚಿಸುತ್ತದೆ ಮಾತ್ರವಲ್ಲದೇ ಇದರಿಂದ ಯಾವುದೇ ಅಡ್ಡ ಪರಿಣಾಮ ಇರೋದಿಲ್ಲ. ಹೀಗಾಗಿ ಟೊಮ್ಯಾಟೋ. ಆಲೋವೇರಾ, ನಿಂಬು, ಐಸ್​ ಕ್ಯೂಬ್​ಗಳನ್ನು ನೀವು ನಿಮ್ಮ ತ್ವಚೆಗೆ ಬಳಕೆ ಮಾಡಬಹುದಾಗಿದೆ.

ಇದನ್ನು ಓದಿ : Vastu Tips: ದಂಪತಿಯ ನಡುವಿನ ಭಿನ್ನಾಭಿಪ್ರಾಯಗಳನ್ನು ದೂರಮಾಡಲು ಮನೆಯಲ್ಲಿರಲಿ ಈ ವಸ್ತು

ಇದನ್ನೂ ಓದಿ : Shah Rukh Khan: ಶಾರುಖ್ ಖಾನ್ ಮತ್ತೊಂದು ಬಿಗ್ ಬಜೆಟ್ ಸಿನಿಮಾ!

How to care for your skin in summer

Comments are closed.