ಒಂದೆಡೆ ಕೆಜಿಎಫ್- 2 ಸಿನಿಮಾ ( KGF Chapter 2) ರಿಲೀಸ್ ಆದ ಒಂದು ವಾರದ ಬಳಿಕವೂ ಯಶಸ್ವಿ ಪಯಣ ಮುಂದುವರೆಸಿದ್ದು ಸದ್ಯ ೭೦೦ ಕೋಟಿ ಗಳಿಕೆ ದಾಖಲಿಸಿ ಹೊಸ ಸಾಧನೆ ಬರೆಯುತ್ತಿದ್ದರೇ ಇನ್ನೊಂದೆಡೆ ಅಸಲಿ ಕೆಜಿಎಫ್ ಕಡೆಗೂ ಪ್ರವಾಸಿಗರ ಸಂಖ್ಯೆ ಹೆಚ್ಚಲಾರಂಭಿಸಿದೆ. ವಿಶ್ವದಾದ್ಯಂತ ತೆರೆ ಕಾಣ್ತಿರೋ ಕನ್ನಡದ ಹೆಮ್ಮೆಯ ಸಿನಿಮಾ ಕೆಜಿಎಫ್-2 ಚಿತ್ರೀಕರಣಗೊಂಡಿದ್ದು ಕರ್ನಾಟಕದ ಕೋಲಾರ ಜಿಲ್ಲೆಯ ಕೆಜಿಎಫ್ ನಲ್ಲಿ. ಹೀಗಾಗಿ ಸಿನಿಮಾ ಶೂಟಿಂಗ್ ನಡೆದಿರೋ ಸ್ಥಳಕ್ಕೆ ಪ್ರೇಕ್ಷಕರು ಕುತೂಹಲದಿಂದ ಭೇಟಿ ನೀಡುತ್ತಿದ್ದಾರೆ.

ಕೆಜಿಎಫ್ ನಗರದ ಸೈನೆಡ್ ಗುಡ್ಡಗಳಲ್ಲಿ ಹಾಗೂ ಚಿತ್ರೀಕರಣ ನಡೆದಿರುವ ಸ್ಥಳದಲ್ಲಿ ಪೋಟೋ ತೆಗೆದುಕೊಳ್ಳಲು ದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರು ಆಗಮಿಸಲು ಆರಂಭಿಸಿದ್ದಾರೆ. ಬೆಂಗಳೂರು, ಚನ್ನೈ. ಮುಂಬೈ ಹಾಗೂ ದೆಹಲಿಯಿಂದಲೂ ಪ್ರವಾಸಿಗರು ಶೂಟಿಂಗ್ ಸ್ಪಾಟ್‍ಗೆ ಭೇಟಿ ನೀಡಿ ಪೋಟೊಗಳನ್ನ ತೆಗೆದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ಕೊಂಡು ಸಂಭ್ರಮಿಸುತ್ತಿದ್ದಾರೆ.

ಇನ್ನು ಚಿನ್ನದಗಣಿಯ ಸೈನೆಡ್ ಗುಡ್ಡಗಳಲ್ಲಿ ಓಡಾಡಲು ಪ್ರವೇಶಿಸಲು ನಿಷೇಧವಿದೆ. ಈ ಹಿನ್ನಲೆಯಲ್ಲಿ ಚಿತ್ರೀಕರಣ ನಡೆದ ಸ್ಥಳಗಳಿಗೆ ಸಾರ್ವಜನಿಕರು ಪ್ರವೇಶಿಸದಂತೆ ಬಿಜಿಎಂಎಲ್ ಸಂಸ್ಥೆಯ ಸೆಕ್ಯೂರಿಟಿ ಸಿಬ್ಬಂದಿ ಮುಳ್ಳು ಬೇಲಿ ಹಾಕಿ ನಿರ್ಬಂಧಿಸಿದ್ದಾರೆ, ಆದರು ಬೇರೆ ಮಾರ್ಗಗಳಿಂದ ಸೈನೆಡ್ ಗುಡ್ಡ ಪ್ರವೇಶ ಮಾಡ್ತಿರುವ ಪ್ರವಾಸಿಗರು, ಕೆಜಿಎಪ್ ಸಿನಿಮಾ ಚಿತ್ರೀಕರಣ ನಡೆಸಿದ, ಸ್ಥಳಗಳಲ್ಲಿ ಪೋಟೋಗಳನ್ನ ತೆಗೆಸಿಕೊಂಡು ಸಂಭ್ರಮಿಸುತ್ತಿದ್ದಾರೆ.

ಇನ್ನು ಕೆಜಿಎಪ್ ಚಾಪ್ಟರ್ 2 ( KGF Chapter 2) ಸಿನಿಮಾ ತೆರೆಕಂಡ ನಂತರ, ಗೂಗಲ್ ನಲ್ಲಿ ಕೆಜಿಎಫ್ (KGF) ಹಾಗೂ ಕೆಜಿಎಫ್-2 ಸಿನಿಮಾದ ಶೂಟಿಂಗ್ ಸ್ಪಾಟ್ ಯಾವುದು ಎಂದು ಹುಡುಕಿದರೇ ಕೋಲಾರದ ಕೆಜಿಎಫ್ ನಗರದಲ್ಲಿರೋ ಶೂಟಿಂಗ್ ಸ್ಪಾಟ್ ಅನ್ನು ತೋರಿಸುತ್ತಿದೆ. ಈ ಮಧ್ಯೆ ಕೋಲಾರದ ಕೆಜಿಎಫ್-2 ಶೂಟಿಂಗ್ ಸ್ಪಾಟ್ ಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ಕೊಡುತ್ತಿರುವುದರಿಂದ ಈ ಸ್ಥಳವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಿ ಎಂಬ ಕೂಗು ಸ್ಥಳೀಯರಿಂದ ಕೇಳಿಬಂದಿದೆ.

ಅನುಮತಿ ಇಲ್ಲದೇ ಪ್ರವಾಸಿಗರೇ ಎಲ್ಲೆಲ್ಲೋ ಪ್ರವೇಶಿಸಿ ಅನಾಹುತಮಾಡಿಕೊಳ್ಳೋದು ಬೇಡ ಎಂಬ ಕಾರಣಕ್ಕೆ ಸೂಕ್ತ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿ ಆದಾಯ ತರುವ ಪ್ರಯತ್ನ ಮಾಡಿ ಎಂದು ಸ್ಥಳೀಯರು ಜಿಲ್ಲಾಡಳಿತಕ್ಕೆ ಮನವಿ ಮಾಡ್ತಿದ್ದಾರೆ. ಮುಂಬೈ, ಬೆಂಗಳೂರು, ದೆಹಲಿ ಸೇರಿದಂತೆ ಹಲವು ಪ್ರದೇಶದಿಂದ ಪ್ರವಾಸಿಗರು ಪ್ರತಿನಿತ್ಯ ಕೆಜಿಎಫ್ ಗೆ ಭೇಟಿ ನೀಡುತ್ತಿದ್ದಾರೆ. ಸಿನಿಮಾದಲ್ಲಿ ನೋಡಿದ ಸೀನ್ ಗಳನ್ನು ಶೂಟಿಂಗ್ ಸ್ಪಾಟ್ ನಲ್ಲಿ ಹುಡುಕಿ ಹುಡುಕಿ ಪೋಟೋ ತೆಗೆಸಿಕೊಳ್ತಿದ್ದಾರೆ.
ಇದನ್ನೂ ಓದಿ : KGF 2 Impact :ಮೆಗಾಸ್ಟಾರ್ ಚಿರಂಜೀವಿ ಚಿತ್ರದ ಮೇಲೂ ಪ್ರಭಾವ ಬೀರಲಿದೆಯೇ ಕೆಜಿಎಫ್ 2
ಇದನ್ನೂ ಓದಿ : ಹಿಂದೂಗಳನ್ನು ಕೆರಳಿಸಿದ ಕರಿನಾ ಕಪೂರ್ : ವಿವಾದ ಹುಟ್ಟಿಸಿದ ಮಲಬಾರ್ ಗೋಲ್ಡ್ ಜಾಹೀರಾತು
shooting place of the KGF Chapter 2 film is now a tourist hot spot