accused mohammad arif arrested : ಹುಬ್ಬಳ್ಳಿ ಗಲಭೆ ಪ್ರಕರಣದ ಮತ್ತೊಬ್ಬ ಮಾಸ್ಟರ್​ ಮೈಂಡ್​ ಬಂಧನ

ಹುಬ್ಬಳ್ಳಿ :accused mohammad arif arrested : ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಈ ಗಲಾಟೆಯನ್ನು ನಡೆಸಲು ಪ್ರಚೋದನೆ ನೀಡಿದ ಒಬ್ಬೊಬ್ಬರನ್ನೇ ಪೊಲೀಸರು ಖೆಡ್ಡಾಗೆ ಕೆಡವುತ್ತಿದ್ದಾರೆ . ವಾಟ್ಸಾಪ್​ ಗ್ರೂಪ್​ ಒಂದನ್ನು ಮಾಡಿಕೊಂಡು ಇಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸಿ ಗಲಭೆ ಕಾರಣಾದವರು ಒಬ್ಬೊಬ್ಬರಾಗಿಯೇ ಜೈಲು ಸೇರುತ್ತಿದ್ದಾರೆ. ಪ್ರಚೋದನಕಾರಿ ಸಂದೇಶವನ್ನು ಕಳುಹಿಸಿ ಬಂಧನಕ್ಕೊಳಗಾಗಿರು ಮೌಲ್ವಿ ವಾಸೀಂ ಪಠಾಣ್​ರನ್ನು ಐದು ದಿನಗಳ ಕಾಲ ಪೊಲೀಸ್​ ವಶದಲ್ಲಿ ಇಡಲಾಗಿದೆ. ವಾಸೀಂನನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಗಲಭೆ ಹಿಂದಿನ ಮಾಸ್ಟರ್​ ಪ್ಲಾನ್​ ಏನಾಗಿತ್ತು..?ಇದರಲ್ಲಿ ಯಾವ ಸಂಘಟನೆಗಳ ಪಾತ್ರವಿದೆ ಹೀಗೆ ನಾನಾ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎನ್ನಲಾಗಿದೆ.


ಈ ನಡುವೆ ಹುಬ್ಬಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಮಾಸ್ಟರ್​ ಮೈಂಡ್​ ಮೊಹಮ್ಮದ್​ ಆರೀಫ್​​ನನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಈತ ಕೂಡ ವಾಟ್ಸಾಪ್​ ಗ್ರೂಪ್​​ನಲ್ಲಿ ವಿವಿಧ ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ. ಹುಬ್ಬಳ್ಳಿ ಗಲಾಟೆ ಪ್ರಕರಣದ ಬಳಿಕ ಕಳೆದೊಂದು ವಾರದಿಂದ ತಲೆಮರೆಸಿಕೊಂಡಿದ್ದ ಈತನನ್ನು ಪೊಲೀಸರು ಬಂಧಿಸಿದ್ದಾರೆ.


ಹುಬ್ಬಳ್ಳಿ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಒಟ್ಟು 124 ಮಂದಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಇದರಲ್ಲಿ 12 ಮಂದಿಯ ವಿರುದ್ಧ ಈಗಾಗಲೇ ಎಫ್​ಐಆರ್​ ದಾಖಲಾಗಿದೆ. ಹಾಗೂ 20 ಮಂದಿಯನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ : KGF Chapter 2 : ಅಮುಲ್​​ ಕಾರ್ಟೂನ್​​ ರೂಪದಲ್ಲಿ ಮೂಡಿಬಂತು ರಾಕಿ ಭಾಯ್​ ಚಿತ್ರ

ಇದನ್ನೂ ಓದಿ : psi appointment scam : ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದ ಕಿಂಗ್​ ಪಿನ್​ ರುದ್ರೇಗೌಡ ವಶಕ್ಕೆ

hubli riot mastermind accused mohammad arif arrested in bengaluru

Comments are closed.