Neem Oil : ನಿಮಗೆ ಬೇವಿನ ಎಣ್ಣೆ ಮಹತ್ವ ಗೊತ್ತಾ? ಕೂದಲು ಮತ್ತು ತ್ವಚೆ ಎರಡಕ್ಕೂ ಇದೆ ಭಾರಿ ಪ್ರಯೋಜನ!

ಬೇವಿನ ಎಣ್ಣೆ(Neem Oil) ಮೊದಲಿಗಿಂತಲೂ ತ್ವಚೆ ಮತ್ತು ಇತರ ಬಳಕೆಗೆ ಹೆಚ್ಚಿ ಜನಪ್ರಿಯತೆಗಳಿಸಿದೆ ಎಂದೆನಿಸುತ್ತಿದೆಯಲ್ಲವೇ? ಸ್ವಲ್ಪ ಆಶ್ಚರ್ಯವೆನಿಸಿದರೂ ಬೇವಿನ ಮರದಿಂದ ತೆಗೆಯುವ ಎಣ್ಣೆಯ ವಿಶೇಷ ಗುಣವು ಹಲವಾರು ತ್ವಚೆ ಮತ್ತು ಕೂದಲಿನ ಸ್ಥಿತಿಗಳಿಗೆ ಪ್ರಯೋಜನಕಾರಿಯಾಗಿದೆ. ಬೇವಿನ ಮರದ ಹಣ್ಣು ಮತ್ತು ಬೀಜದಿಂದ ತೆಗೆದ ಎಣ್ಣೆಯು ಅತಿ ಹೆಚ್ಚಿನ ಆಂಟಿಒಕ್ಸಿಡೆಂಟ್‌ ಹೊಂದಿದ್ದು, ಅನೇಕ ಕಾಯಿಲೆಗಳನ್ನು ತಡೆಯಲು ಬಳಸುತ್ತಾರೆ ಎಂದು ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಹೇಳಲಾಗಿದೆ. ಅದಲ್ಲದೇ, ಇದನ್ನು ಅನೇಕ ಸೌಂದರ್ಯ ಪ್ರಸಾದನಗಳ ತಯಾರಿಕೆಯಲ್ಲಿಯೂ ಬಳಸುತ್ತಾರೆ. ಸ್ಕಿನ್‌ ಕ್ರೀಮ್‌, ಹೇರ್‌ ಮಾಸ್ಕ್‌, ಫೇಸ್‌ ಮಾಸ್ಕ್‌, ಹೇರ್ ಆಯಿಲ್‌, ಬಾಡಿ ಬಟರ್‌ ಹೀಗೆ ಮುಂತಾದ ಉತ್ಪನ್ನಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

ಬೇವಿನ ಎಣ್ಣೆಯ ಅದ್ಭುತ ಪ್ರಯೋಜನಗಳು :

ಈ ಎಣ್ಣೆಯಿಂದ ಪ್ರಯೋಜನ ಪಡೆಯುವ ಅತ್ಯತ್ತಮ ಮಾರ್ಗ ಎಂದರೆ ದಿನನಿತ್ಯದ ಸೌಂದರ್ಯದ ಪ್ರಸಾದನಗಳನ್ನಾಗಿ ಬಳಸುವುದು. ಬೇವಿನ ಎಣ್ಣೆಯು ನಿಮ್ಮ ತ್ವಚೆ ಮತ್ತು ಕೂದಲಿಗೆ ಯಾವ ರೀತಿಯ ಪ್ರಯೋಜನಗಳನ್ನು ನೀಡಬಲ್ಲದು ಇಲ್ಲಿದೆ ನೋಡಿ.

ಎಕ್ನಿ ತಡೆಯುತ್ತದೆ :
ಬೇವಿನ ಎಣ್ಣೆಯನ್ನು ಎಕ್ನಿ ದೂರಮಾಡಲು ಪರಿಣಾಮಕಾರಿ ಆಂಟಿಡಾಟ್‌ ನಂತೆ ಸಾಂಪ್ರದಾಯಿಕ ವೈದ್ಯ ಪದ್ಧತಿಯಾದ ಆಯುರ್ವೇದಲ್ಲಿ ಉಪಯೋಗಿಸುತ್ತಿದ್ದರು. ಅದರಲ್ಲಿಯ ಆಂಟಿಬ್ಯಾಕ್ಟೀರಿಯಲ್‌, ಆಂಟಿ–ಇನ್ಪ್ಲಾಮೆಟರಿ, ಮತ್ತು ಆಂಟಿ ಫಂಗಲ್‌ ವಿಶೇಷ ಗುಣಗಳು ಎಕ್ನಿ ತೊಂದರೆಯನ್ನು ನಿಭಾಯಿಸಲು ಪ್ರಯೋಜನಕಾರಿಯಾಗಿದೆ. ಎಕ್ನಿಯಿಂದ ತ್ವಚೆಯ ಮೇಲಾಗುವ ನೋವು ಮತ್ತು ತುರಿಕೆಗಳನ್ನು ಕಡಿಮೆ ಮಾಡಿ, ಕೆಂಪಾಗದ ಭಾಗಕ್ಕೆ ಆರಾಮ ನೀಡುತ್ತದೆ. ಅದಲ್ಲದೆ ಎಕ್ನಿಯಿಂದ ಉಂಟಾದ ಕಲೆಗಳ ನಿವಾರಣೆಗೂ ಪ್ರಯೋಜನಕಾರಿಯಾಗಿದೆ.

ನೆತ್ತಿಯ(ಸ್ಕಾಲ್ಪ್‌) ಆರೋಗ್ಯವರ್ಧಿಸುತ್ತದೆ:
ಬೇವಿನ ಎಣ್ಣೆಯಲ್ಲಿರುವ ಆಂಟಿಒಕ್ಸಿಡೆಂಟ್‌, ಆಂಟಿಬ್ಯಾಕ್ಟೀರಿಯಾ, ಆಂಟಿಫಂಗಲ್‌ ಮತ್ತು ಆಂಟಿಸೆಪ್ಟಿಕ್‌ ಗುಣಗಲು ನೆತ್ತಿಯ ಆರೋಗ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಅದರಲ್ಲಿಯ ಇತರ ಸಂಯುಕ್ತಗಳು ತಲೆಹೊಟ್ಟು, ತುರಿಕೆ ಮತ್ತು ನೆತ್ತಿಯ ಚರ್ಮ ಉದುರುವ ತೊಂದರೆಗಳಿಂದ ಹೋರಾಡಲು ಸಹಾಯ ಮಾಡುತ್ತದೆ.

ತ್ವಚೆ ಕಳೆಗುಂದುವುದನ್ನು ತಪ್ಪಿಸುತ್ತದೆ:
ಬೇವಿನ ಎಣ್ಣೆಯು ಎಸೆನ್ಶಿಯಲ್‌ ಫ್ಯಾಟಿ ಎಸಿಡ್‌ ಮತ್ತು ವಿಟಮಿನ್‌ಗಳಿಂದ ಕೂಡಿದ್ದು ತ್ವಚೆಗೆ ಪೋಷಣೆ ನೀಡುತ್ತದೆ. ನಿಯಮಿತವಾಗಿ ಈ ಎಣ್ಣೆಯನ್ನು ಹಚ್ಚುವುದರಿಂದ ಸುಕ್ಕುಗಳು ಮಾಯವಾಗಿ ವಯಸ್ಸಿನ ಕಳೆ ಹೋಗಲಾಡಿಸುತ್ತದೆ.

ಹಲ್ಲಿನ ಆರೈಕೆಗೆ ಸಹಾಯ :
ಹಲ್ಲಿನ ಆರೈಕೆಯ ಉತ್ಪನ್ನಗಳಾದ ಟೂತ್‌ಪೇಸ್ಟ್‌ ಮತ್ತು ಮೌತ್‌ವಾಶ್‌ಗಳಲ್ಲಿ ಬೇವಿನ ಎಣ್ಣೆಯನ್ನು ಪ್ರಮುಖ ವಸ್ತುವನ್ನಾಗಿ ಬಳಸುತ್ತಾರೆ. ಬೇವಿ ಎಣ್ಣೆಯಲ್ಲಿರುವ ಆಂಟಿಬ್ಯಾಕ್ಟೀರಿಯಲ್‌ ಮತ್ತು ಆಂಟಿಫಂಗಲ್‌ ವಿಶೇಷಗುಣಗಳು ವಸಡಿನ ಊತ ಮತ್ತು ಕ್ಯಾವಿಟಿ ಸಮಸ್ಯೆಗಳನ್ನು ಪರಿಹಾರ ಒದಗಿಸುತ್ತದೆ. ಒಂದು ಹನಿ ಬೇವಿನ ಎಣ್ಣೆಯನ್ನು ನಿಮ್ಮ ಟೂತ್‌ಪೇಸ್ಟ್‌ಗೆ ಸೇರಿಸಿ ಬ್ರಶ್‌ ಮಾಡಿ ನಂತರ ಅದರ ಮ್ಯಾಜಿಕ್‌ ನೋಡಿ.

ತಲೆ ಹೇನುಗಳನ್ನು ತಡೆಯುತ್ತದೆ:
ಬೇವಿನ ಎಣ್ಣೆಯನ್ನು ನಿಯಮಿತವಾಗಿ ಕೂದಲುಗಳಿಗೆ ಕಚ್ಚುವುದರಿಂದ ಗಂಟಾಗುವುದು ಮತ್ತು ಒರಟಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಬೇವಿನ ಎಣ್ಣೆಯನ್ನು ತೆಂಗಿನ ಎಣ್ಣೆಯೊಂದಿಗೆ ಸೇರಿಸಿ ರಾತ್ರಿ ಮಸ್ಸಾಜ್‌ ಮಾಡಿ. ಅದರಿಂದ ಉತ್ತಮ ಪರಿಣಾಮ ದೊರೆಯುತ್ತದೆ. ಇದು ತಲೆಯಲ್ಲಿರುವ ಹೇನುಗಳನ್ನು ಹೋಗಲಾಡಿಸಲು ನೈಸರ್ಗಿಕ ರೀತಿಯಲ್ಲಿ ಸಹಾಯ ಮಾಡುತ್ತದೆ. ಮತ್ತು ಇದರಿಂದ ಯಾವುದೇ ಅಡ್ಡ ಪರಿಣಾಮಗಳೂ ಇಲ್ಲ.

ಇದನ್ನೂ ಓದಿ :Me Time : ಇದು ನನ್ನ ಸಮಯ! ಮಹಿಳೆಯರೇ ನೀವೂ ಒಂದು ಸಮಯ ನಿಗದಿ ಪಡಿಸಿಕೊಳ್ಳಿ

ಇದನ್ನೂ ಓದಿ : Meditation For Health And Happiness: ಸರ್ವ ಮಾನಸಿಕ ರೋಗಗಳಿಗೆ ರಾಮಬಾಣ ಧ್ಯಾನ; ಯಾವುದೇ ತರಬೇತಿ ಇಲ್ಲದೆ ನೀವೂ ಟ್ರೈ ಮಾಡಿ

(Neem Oil Do you know the benefits of this oil for hair and skin)

Comments are closed.