Man Shoots Himself : ವೈವಾಹಿಕ ಸಂಬಂಧಗಳು ಚೆನ್ನಾಗಿದ್ದರೆ ಎಷ್ಟು ಪ್ರಿಯ ಎನಿಸುತ್ತದೆಯೋ ಅದೇ ರೀತಿ ಆ ಸಂಬಂಧಗಳು ಹಳಸಿ ಹೋದರೆ ಆಗುವ ಅಪಾಯಗಳು, ದುರಂತಗಳು ಭೀಕರವಾಗಿಯೇ ಇರುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಈ ಮಾತಿಗೆ ಸಷ್ಟ ಉದಾಹರಣೆ ಎಂಬಂತೆ ವ್ಯಕ್ತಿಯೊಬ್ಬ ತನ್ನ ಮಾಜಿ ಪತ್ನಿ ಹಾಗೂ ಪುತ್ರಿಯನ್ನು ನಡು ರಸ್ತೆಯಲ್ಲಿ ಕೊಲೆ ಮಾಡಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ಘಟನೆ ಪಾಟ್ನಾದಲ್ಲಿ ನಡೆದಿದೆ. ಹಾಡ ಹಗಲೇ ನಡು ರಸ್ತೆಯಲ್ಲಿ ಈ ಭೀಕರ ಘಟನೆ ಸಂಭವಿಸಿದೆ. ಸಿಸಿ ಟಿವಿ ದೃಶ್ಯಾವಳಿಯ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ದುರ್ಘಟನೆಯಲ್ಲಿ ಮೂವರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳಲ್ಲಿ ವ್ಯಕ್ತಿಯು ಬ್ಯಾಗ್ ಹಾಗೂ ಪಿಸ್ತೂಲ್ನ್ನು ಹಿಡಿದಿದ್ದ. ಮಾಜಿ ಪತ್ನಿಯು ಹೊರಗೆ ಬರುತ್ತಿದ್ದಂತೆಯೇ ಆತ ಮಹಿಳೆಯ ತಲೆಗೆ ಗುಂಡು ಹಾರಿಸಿ ಬಳಿಕ ತನ್ನನ್ನೂ ತಾನು ಶೂಟ್ ಮಾಡಿಕೊಂಡಿದ್ದಾನೆ.
ಮೃತ ವ್ಯಕ್ತಿಯನ್ನು ರಾಜೀವ್ ಕುಮಾರ್ ಎಂದು ಗುರುತಿಸಲಾಗಿದೆ. ಈತನ ಮಾಜಿ ಪತ್ನಿ ಶಶಿಪ್ರಭಾ ಈತನಿಗೆ ಡಿವೋರ್ಸ್ ನೀಡಿ ಬಳಿಕ ಮತ್ತೊಂದು ವಿವಾಹವಾಗಿದ್ದರು. ರಾಜೀವ್ ಕುಮಾರ್ ಮೊದಲ ವಿವಾಹದಲ್ಲಿ ಜನಿಸಿದ್ದ ಮಗಳು ಸಂಸ್ಕೃತಿ ಎಂಬಾಕೆಯನ್ನೂ ಈತ ಕೊಲೆ ಮಾಡಿದ್ದಾರೆ. ಈ ಘಟನೆಯನ್ನು ಕಂಡು ರಸ್ತೆಯಲ್ಲಿ ಕುಸಿದು ಬಿದ್ದ ಮಹಿಳೆಯನ್ನು ಶಶಿಪ್ರಭಾ ತಾಯಿ ಎಂದು ಗುರುತಿಸಲಾಗಿದೆ. ಮದುವೆ ಮನೆಯಿಂದ ಇವರು ತಮ್ಮ ಮನೆಗೆ ವಾಪಸ್ಸಾಗುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮೊದಲು ರಾಜೀವ್ ಕುಮಾರ್ ಶಶಿ ಪ್ರಭಾಳ ಸಹೋದರಿಯನ್ನು ವಿವಾಹವಾಗಿದ್ದ. ಆಕೆ ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದಳು. ಇದಾದ ಬಳಿಕ ರಾಜೀವ್ ಕುಮಾರ್ ಶಶಿ ಪ್ರಭಾಳ ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ. ಆದರೆ ವೈವಾಹಿಕ ಸಂಬಂಧದಲ್ಲಿ ಯಾವುದೇ ಸುಧಾರಣೆ ಕಂಡು ಬಾರದ ಹಿನ್ನೆಲೆಯಲ್ಲಿ ಶಶಿ ಪ್ರಭಾ ರಾಜೀವ್ ಕುಮಾರ್ಗೆ ವಿಚ್ಛೇದನ ನೀಡಿದ್ದಳು. ರಾಜೀವ್ ಕುಮಾರ್ ಮೊದಲ ಮದುವೆಯಲ್ಲಿ ಜನಿಸಿದ್ದ ಮಗಳು ಸಂಸ್ಕೃತಿ ತಾನು ತನ್ನ ಮಲತಾಯಿಯ ಜೊತೆಯಲ್ಲಿಯೇ ಇರುವುದಾಗಿ ಹೇಳಿದ್ದಳು.
ಇದಾದ ಬಳಿಕ ಶಶಿಪ್ರಭಾ ಏರ್ ಫೋರ್ಸ್ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ವಿವಾಹವಾಗಿದ್ದರು. ಪಾಟ್ನಾದ ಹೈ ಪ್ರೊಫೈಲ್ ಪೊಲೀಸ್ ಕಾಲೋನಿ ಏರಿಯಾದ ಅಪಾರ್ಟ್ಮೆಂಟ್ ಒಂದರಲ್ಲಿ ಇವರು ಬಾಡಿಗೆಗೆ ವಾಸವಿದ್ದರು. ಇದು ಉನ್ನತ ನಿವೃತ್ತ ಪೊಲೀಸ್ ಅಧಿಕಾರಿಗಳ ನೆಲೆಯಾಗಿದೆ.
ರಾಜೀವ್ ಕುಮಾರ್ ಪದೇ ಪದೇ ಶಶಿಪ್ರಭಾ ಹಾಗೂ ಸಂಸ್ಕೃತಿಗೆ ತನ್ನೊಂದಿಗೆ ಇರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ ಶಶಿ ಪ್ರಭಾ ಹಾಗೂ ಸಂಸ್ಕೃತಿ ನಿರಾಕರಿಸಿದ್ದೇ ಈತನ ಕೋಪಕ್ಕೆ ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ . ಅಲ್ಲದೇ ಮೃತಪಟ್ಟ ರಾಜೀವ್ ಕುಮಾರ್ ಮಾನಸಿಕ ಅಸ್ವಸ್ಥ ಕೂಡ ಆಗಿದ್ದ ಎನ್ನಲಾಗಿದೆ.
ಇದನ್ನು ಓದಿ : acid attack : ಆಸಿಡ್ ಪ್ರೇಮಿ ನಾಗೇಶ್ ಬಂಧನಕ್ಕೆ ಮೂರು ತಂಡ : #hangnagesh ಅಭಿಯಾನಕ್ಕೆ ಬಾರೀ ಬೆಂಬಲ
ಇದನ್ನೂ ಓದಿ : Aravind Kaushik Arrest : ಸ್ಯಾಂಡಲ್‌ವುಡ್ ನಿರ್ದೇಶಕ ಅರವಿಂದ ಕೌಶಿಕ್ ಅರೆಸ್ಟ್
On Camera, After Killing Ex-Wife, Daughter, Man Shoots Himself In The Head