corona 4th wave : ಕರ್ನಾಟಕಕ್ಕೆ ಬೇಸಿಗೆ ಬಿಸಿಲು, ಕೊರೊನಾ ಭೀತಿ

ಬೆಂಗಳೂರು : ಒಂದೆಡೆ ರಾಜ್ಯದಲ್ಲಿ ಕರೋನ ಭೀತಿ (corona 4th wave) ಜನರನ್ನು ಕಂಗೆಡಿಸಿದ್ದರೇ ಇನ್ನೊಂದೆಡೆ ಏರುತ್ತಲೇ ಇರುವ ತಾಪಮಾನವೂ ಜನಜೀವನವನ್ನು ನಡುಗಿಸುತ್ತಿದೆ. ಮನೆಯಿಂದ ಹೊರಕ್ಕೆ ಕಾಲಿಟ್ಟರೇ ಮೈಮೇಲೆ ಕೆಂಡ ಬಿದ್ದಂತ ಸ್ಥಿತಿ ಎದುರಾಗುತ್ತಿದ್ದು, ಜನರು ಈ ಹವಾಮಾನ ವೈಪರಿತ್ಯಕ್ಕೆ ಕಂಗಲಾಗಿದ್ದಾರೆ. ವಾತಾವರಣದಲ್ಲಿ ನ ತೇವಾಂಶ ಕೊರತೆ ಹಾಗೂ ದಕ್ಷಿಣದತ್ತ ಬೀಸುತ್ತಿರುವ ಬಿಸಿ ಗಾಳಿಯಿಂದಾಗಿ ರಾಜ್ಯದಲ್ಲಿ ಹವಾಮಾನ ನಿಧಾನಕ್ಕೆ ಬಿಸಿಯಾಗುತ್ತಿದೆ.

ರಾಜ್ಯದ ಕರಾವಳಿ ಸೇರಿದಂತೆ ಮಲೆನಾಡು ಭಾಗದಲ್ಲೂ ಈ ಭಾರಿ ಬಿಸಿಗಾಳಿ ಎಫೆಕ್ಟ್ ನಿಂದ ತಾಪಮಾನ ಹೆಚ್ಚಿದ. ಇದುವರೆಗೂ ಅತಿ ಹೆಚ್ಚಿನ ತಾಪಮಾನ ಬುಧವಾರ ಕಲ್ಬುರ್ಗಿಯಲ್ಲಿ ದಾಖಲಾಗಿದ್ದು, 41.6 ಡಿಗ್ರಿಯಷ್ಟಿದೆ ತಾಪಮಾನ. ಇನ್ನೂ ಕಳೆದ ಒಂದು ವಾರದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ದಾಖಲಾದ ತಾಪಮಾನವನ್ನು ಗಮನಿಸೋದಾದರೇ, ರಾಯಚೂರು 39.4, ವಿಜಯಪುರ 37.9, ಗದಗ 38.4, ಬೆಂಗಳೂರು 35.0, ಬೆಳಗಾವಿ 36.5, ಬಳ್ಳಾರಿ 39.4 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿದೆ.

ಇನ್ನೂ ಹವಾಮಾನ ಇಲಾಖೆ ವರದಿ ಪ್ರಕಾರ ಏಪ್ರಿಲ್ 30 ರವರೆಗೂ ರಾಜ್ಯದಲ್ಲಿ ತಾಪಮಾನ ಏರಿಕೆಯಾಗಲಿದೆ ಎನ್ನಲಾಗಿದ್ದು 40 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ನೀರಿಕ್ಷಿಸಲಾಗುತ್ತಿದೆ. ಇನ್ನೂ ಸಾಮಾನ್ಯವಾಗಿ ಬೇಸಿಗೆಯಲ್ಲೂ ತಕ್ಕಮಟ್ಟಿಗೆ ತಂಪಾಗಿರುವ ದಕ್ಷಿಣ ಕರ್ನಾಟಕದ ಭಾಗಗಳಾದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಕೋಲಾರ, ಚಾಮರಾಜನಗರ,ಹಾಸನದಲ್ಲೂ 35 ರಿಂದ 38 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದೆ.

ಈ ವರ್ಷ ಬೇಸಿಗೆ ಕಾಲ ಅಧಿಕವಾದಂತಿದ್ದು, ಫೆ.15 ರಿಂದಲೇ ಕಾಣಿಸಿಕೊಂಡ ಬೇಸಿಗೆ ಜೂನ್ 15 ರವರೆಗೆ ಇರಲಿದೆ ಎಂದು ನೀರಿಕ್ಷಿಸಲಾಗುತ್ತಿದೆ. ಪೂರ್ವ ಮುಂಗಾರು ಸುರಿದ ಪರಿಣಾಮ ಕೆಲವು ಜಿಲ್ಲೆಯಲ್ಲಿ ಭಾರಿ ಮಳೆ ಕೂಡ ಸುರಿದಿದ್ದು ಕೂಡ ಈಗ ಬಿಸಿಲಿನ ಝಳ ಹೆಚ್ಚಲು ಕಾರಣವಾಗಿದೆ ಎನ್ನಲಾಗಿದೆ. ಒಂದೆಡೆ ಕೊರೋನಾ ನಾಲ್ಕನೆ ಅಲೆ ಕಾರಣಕ್ಕೆ ಜನರು ಮಾಸ್ಕ್ ಹಾಕಿ ಓಡಾಡೋದು ಕಡ್ಡಾಯ ವಾಗಿದ್ದು ಸರ್ಕಾರ ಮತ್ತೊಮ್ಮೆ ಮಾಸ್ಕ್ ಕಡ್ಡಾಯ ಆದೇಶ ಹೊರಡಿಸಿದೆ.

ಹೀಗಾಗಿ ಜನರು ಕೊರೋನಾ ಹಾಗೂ ಏರುತ್ತಿರುವ ಬಿಸಿಲಿನ ತಾಪಕ್ಕೆ ಕಂಗಾಲಾಗಿ ಹೋಗಿದ್ದಾರೆ. ಇನ್ನೂ ನಾಲ್ಕೈದು ದಿನಗಳ ಕಾಲ ತಾಪಮಾನ ಹೆಚ್ಚಲಿದ್ದು ಮೇ 1 ರ ವೇಳೆಗೆ ರಾಜ್ಯದಲ್ಲಿ ಗರಿಷ್ಟ ತಾಪಮಾನ ದಾಖಲಾಗಲಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಿಸಿದ್ದಾರೆ.

ಇದನ್ನೂ ಓದಿ : ಆಧಾರ್‌ ಕಾರ್ಡ್‌ ಗೊತ್ತು : ಆದರೆ ನೀಲಿ ಆಧಾರ್‌ ಕಾರ್ಡ್‌ ಬಗ್ಗೆ ನಿಮಗೆ ಗೊತ್ತಾ ?

ಇದನ್ನೂ ಓದಿ : Heatwave Delhi : ದೆಹಲಿಗೆ ಶಾಖದ ಅಲೆಯ ಭೀತಿ : ಹಳದಿ ಅಲರ್ಟ್‌ ಘೋಷಣೆ

corona 4th wave and Heatwave fear Karnataka

Comments are closed.