acid attack : ಆಸಿಡ್‌ ಪ್ರೇಮಿ ನಾಗೇಶ್‌ ಬಂಧನಕ್ಕೆ ಮೂರು ತಂಡ : #hangnagesh ಅಭಿಯಾನಕ್ಕೆ ಬಾರೀ ಬೆಂಬಲ

ಬೆಂಗಳೂರು : ಪ್ರೀತಿಸಲು ನಿರಾಕರಿಸಿದ ಕಾರಣಕ್ಕೆ ಯುವತಿಯೋರ್ವಳ ಮೇಲೆ ಆಸಿಡ್‌ ದಾಳಿ (acid attack) ನಡೆಸಿರುವ ಪಾಗಲ್‌ ಪ್ರೇಮಿ ನಾಗೇಶ್‌ ನಾಪತ್ತೆಯಾಗಿದ್ದಾನೆ. ನಾಗೇಶ್‌ ಪತ್ತೆಗೆ ಬಲೆ ಬೀಸಿರುವ ಪೊಲೀಸರು ಈಗಾಗಲೇ ಮೂರು ತಂಡಗಳನ್ನು ರಚಿಸಿದ್ದು, ಹುಡುಕಾಟ ಆರಂಭಿಸಿದ್ದಾರೆ. ಇನ್ನೊಂದೆಡೆಯಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ #hangnagesh ಅಭಿಯಾನಕ್ಕೆ ಬಾರೀ ಬೆಂಬಲ ವ್ಯಕ್ತವಾಗುತ್ತಿದೆ.

ನಾಗೇಶ್‌ ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್‌ನಲ್ಲಿಯೇ ಕೆಲಸ ಮಾಡುತ್ತಿದ್ದ ಯುವತಿಯನ್ನು ಕಳೆದ ಏಳು ವರ್ಷಗಳಿಂದಲೂ ಪ್ರೀತಿಸುತ್ತಿದ್ದ. ಆದೆ ಇಬ್ಬರ ನಡುವೆ ಲವ್‌ ಬ್ರೇಕ್‌ ಅಪ್‌ ಆಗಿತ್ತು. ಆದರೆ ನಾಗೇಶ್‌ ಯುವತಿಯನ್ನು ಪದೇ ಪದೇ ಪೀಡಿಸುವುದಕ್ಕೆ ಶುರು ಮಾಡಿದ್ದಾನೆ. ಯುವತಿಯ ಅಕ್ಕನಿಗೆ ಮದುವೆ ನಿಶ್ಚಯವಾಗಿದ್ದು, ಯುವತಿಗೆ ಮದುವೆ ನಿಶ್ಚಯಿಸಲು ಮನೆಯವರು ಸಿದ್ದತೆ ಮಾಡಿಕೊಂಡಿದ್ದರು. ಇದರಿಂದ ಕೆರಳಿದ ಭಗ್ನ ಪ್ರೇಮಿ ನಾಗೇಶ್‌ ಯುವತಿಯ ಮೇಲೆ ಆಸಿಡ್‌ ಎರಚಿದ್ದಾನೆ.

ನಿನ್ನೆ ತಂದೆಯ ಬೈಕ್‌ ನಲ್ಲಿ ಡ್ರಾಪ್‌ ತೆಗೆದುಕೊಂಡು ಕೆಲಸದ ಸ್ಥಳಕ್ಕೆ ಬಂದಿದ್ದಾಳೆ. ತಂದೆ ಬಿಟ್ಟು ಹೋದ ಕೆಲವೇ ಹೊತ್ತಲೇ ನಾಗೇಶ್‌ ಸೇಡು ತೀರಿಸಿಕೊಂಡಿದ್ದಾನೆ. ಕೂಡಲೇ ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಯುವತಿಯ ಸ್ಥಿತಿ ಚಿಂತಾಜನಕವಾಗಿದೆ. ಘಟನೆ ನಡೆಯುತ್ತಲೇ ಆರೋಪಿ ನಾಗೇಶ್‌ ಸ್ಥಳದಿಂದ ಪರಾರಿಯಾಗಿದ್ದಾನೆ. ಇದೀಗ ಪ್ರಕರಣ ದಾಖಲು ಮಾಡಿಕೊಂಡಿರುವ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಮೂರು ತಂಡಗಳನ್ನು ರಚಿಸಿಕೊಂಡು ನಾಗೇಶ್‌ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ : ಕಣ್ಣಾ ಮುಚ್ಚಾಲೆ ಆಡುತ್ತಾ ಐಸ್​ಕ್ರೀಂ ಬಾಕ್ಸಿನಲ್ಲಿ ಅವಿತುಕೊಳ್ಳಲು ಹೋದ ಬಾಲಕಿಯರು ಸಾವು

ಇದನ್ನೂ ಓದಿ : ಕಾಲಿಗೆ ಬಿದ್ದು ಬೇಡಿಕೊಂಡರೂ ಬಿಡದ ಕಾಮುಕರು : ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

Bangalore acid attack hangnagesh Campaign in Social Media

Comments are closed.