ಸೋಮವಾರ, ಏಪ್ರಿಲ್ 28, 2025
HomeeducationRohith Chakrathirtha Reaction : ನಾನು ಬ್ರಾಹ್ಮಣ ಎಂಬ ಕಾರಣಕ್ಕೆ ಟಾರ್ಗೆಟ್: ಸಮಿತಿ ವಿಸರ್ಜನೆ ಬಳಿಕ...

Rohith Chakrathirtha Reaction : ನಾನು ಬ್ರಾಹ್ಮಣ ಎಂಬ ಕಾರಣಕ್ಕೆ ಟಾರ್ಗೆಟ್: ಸಮಿತಿ ವಿಸರ್ಜನೆ ಬಳಿಕ ರೋಹಿತ್ ಚಕ್ರತೀರ್ಥ ಆರೋಪ

- Advertisement -

ಬೆಂಗಳೂರು : ಕಳೆದೊಂದು ತಿಂಗಳಿನಿಂದ ರಾಜ್ಯದಾದ್ಯಂತ ವಿವಾದ ಸೃಷ್ಟಿಸಿದ್ದ ಪಠ್ಯಪುಸ್ತಕ ವಿಚಾರಕ್ಕೆ ನಿನ್ನೆ ಒಂದು ತಾರ್ತಿಕ ಅಂತ್ಯ ಹಾಡುವಲ್ಲಿ ಸರ್ಕಾರ ಸಫಲವಾಗಿದೆ. ಹೋರಾಟಗಳಿಗೆ ತಲೆಬಾಗಿದ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ಮುಗಿದಿದೆ ಎಂಬ ಕಾರಣ ಮುಂದಿಟ್ಟುಕೊಂಡು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಸಮಿತಿ ಯನ್ನು ವಿಸರ್ಜಿಸಿದೆ. ಇದಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರೋಹಿತ್ ಚಕ್ರತೀರ್ಥ (Rohith Chakrathirtha Reaction) ತಮ್ಮ ವಿರುದ್ಧದ ಆರೋಪಗಳಿಗೆ ತಿರುಗೇಟು ನೀಡಿದ್ದು ನಾನು ಬ್ರಾಹ್ಮಣ ಎಂಬ ಕಾರಣಕ್ಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಒಂದು ಜಾತಿಯನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂದಿರುವ ರೋಹಿತ್ ಚಕ್ರತೀರ್ಥ (Rohith Chakrathirtha) ಒಕ್ಕಲಿಗರಿಗೆ, ಲಿಂಗಾಯತರಿಗೆ ಅವಮಾನ ಆಯ್ತು ಅಂತ ಅಯಾಯ ಸಮೂದಾಯಗಳವರು ಹೇಳ್ತಿದ್ದಾರೆ.ಆದ್ರೆ ಈ ಸಮಿತಿಯನ್ನ ಟಾರ್ಗೆಟ್ ಮಾಡ್ತಿರುವ ಜೊತೆಗೆ ಬ್ರಾಹ್ಮಣ ಸಮುದಾಯವನ್ನು ಟಾರ್ಗೆಟ್ ಮಾಡ್ತಾ ಇದ್ದಾರೆ. ಬ್ರಾಹ್ಮಣರಿಗೆ ಅವಹೇಳನ ಪದಗಳನ್ನು ಯೂಸ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ಯಾವತ್ತು ಕೂಡ ಬ್ರಾಹ್ಮಣ ಪರ, ಬ್ರಾಹ್ಮಣ ವಿರುದ್ಧ ಮಾತಾಡಿಲ್ಲ. ನಾನು ಬ್ರಾಹ್ಮಣ ಅಂತ ಸಿಂಪತಿ ತೆಗೆದುಕೊಂಡಿಲ್ಲ. ಆದರೆ ಜಾತಿ ಕಾರಣಕ್ಕೆ ನಮ್ಮನ್ನು ಟಾರ್ಗೇಟ್ ಮಾಡ್ತಿದ್ದಾರೆ ಎಂದಿದ್ದಾರೆ.

ನಾವು ಪಠ್ಯಪುಸ್ತಕದಲ್ಲಿ 1 ರಿಂದ 10ನೇ ತರಗತಿಯವರೆಗೆ ಮಾತ್ರ ಪರಿಷ್ಕರಣೆ ಮಾಡಿದ್ದೇವೆ. ಪ್ರಥಮ, ದ್ವೀತಿಯ, ತೃತೀಯ, ಭಾಷೆಗಳು ಮಾತ್ರ ಪರಿಷ್ಕರಣೆ ಮಾಡಿದ್ದೇವೆ. ಅದು ಬಿಟ್ಟರೇ ನಲಿಕಲಿ ಪಠ್ಯ ಪರಿಷ್ಕರಣೆ ನಮ್ಮ ಸಮಿತಿ ಮಾಡಿಲ್ಲ. ಈ ವಿಚಾರದಲ್ಲಿ ಸುಳ್ಳು ಸುದ್ದಿಗಳು ಹಬ್ಬಿಸ್ತಿದ್ದಾರೆ. ಪಠ್ಯ ಪರಿಷ್ಕರಣೆ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗ್ತಿದೆ. ಬಸವಣ್ಣ ವಿಚಾರವಾಗಿ ಪರಿಷ್ಕೃತ ಪಠ್ಯದಲ್ಲಿ ಬರಗೂರು ರಾಮಚಂದ್ರಪ್ಪ ಪುಸ್ತಕ ಬಂದಿತ್ತು. ಅದರಲ್ಲಿ ಇರುವ ಅಷ್ಟು ವಿಚಾರಗಳು ಹಾಗೆ ಉಳಿಸಿದ್ದೇವೆ. ಆದ್ರೆ ಈಗ ನಮ್ಮ ವಿರುದ್ಧ ಹೋರಾಟ, ಆಂದೋಲನ ಮಾಡ್ತಿದ್ದಾರೆ.

ಇವರು ಯಾರು ಕೂಡ ಬರಗೂರು ಏನು ಮಾಡಿದ್ರು ಅಂತ ನೋಡಲ್ಲ, ಕೇಳಲ್ಲ. ಇದರ ಹಿಂದೆ ಕಾಣದ ಕೈಗಳು ಇವೆ. ಬರಗೂರು ಪಠ್ಯ ಪರಿಷ್ಕರಣೆ ಹಾಗೂ ನಮ್ಮ ಸಮಿತಿ ಮಾಡಿದ ಪಠ್ಯ ಪರಿಷ್ಕರಣೆ ಬುಕ್ ಇಟ್ಟುಕೊಂಡು ನೋಡಿ ಎಲ್ಲಾ ವಿವರಗಳು ಗೊತ್ತಾಗಲಿದೆ ಎಂದು ವಿವರಣೆ ನೀಡಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಪಠ್ಯ ಪುಸ್ತಕ ವಿವಾದ ಸದ್ಯಕ್ಕೆ ತಣ್ಣಗಾಗಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಈ‌ ಮಧ್ಯೆ ರೋಹಿತ್ ಚಕ್ರತೀರ್ಥ (Rohith Chakrathirtha) ಸಮಿತಿ ವಿಸರ್ಜನೆ ಮಾತ್ರ ಈ ಸಮಸ್ಯೆಗೆ ಪರಿಹಾರವಲ್ಲ. ಪಠ್ಯಕ್ರಮವನ್ನು ಹಿಂಪಡೆಯಬೇಕು ಎಂದು ಮಾಜಿ ಸಿಎಂ ಸಿದ್ಧು ಒತ್ತಾಯಿಸುತ್ತಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಪಠ್ಯಕ್ರಮ ವಿವಾದ ಈಗ ಜಾತಿ ಸ್ವರೂಪ ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ : Karnataka CET 2022 Hall Ticket  : ಸಿಇಟಿ ಹಾಲ್ ಟಿಕೆಟ್ ಬಿಡುಗಡೆ : ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ : Rohith Chakrathirtha : ರೋಹಿತ್ ಚಕ್ರತೀರ್ಥಗೆ ಭಾರಿ ಹಿನ್ನಡೆ : ಪಠ್ಯಪುಸ್ತಕ ಸಮಿತಿ ವಿಸರ್ಜಿಸಿದ ಸರ್ಕಾರ

Rohith Chakrathirtha Reaction after Dismissal Text Book Committee

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular