mango with a zipper : ಜಿಪ್​​ ಶೈಲಿಯಲ್ಲಿ ತಯಾರಾಯ್ತು ಮಾವಿನ ಹಣ್ಣು : ವಿಡಿಯೋ ವೈರಲ್​

mango with a zipper : ಮಾವಿನ ಹಣ್ಣು ಕೇವಲ ಬೇಸಿಗೆ ಕಾಲದಲ್ಲಿ ಮಾತ್ರ ಸಿಗುವ ಹಣ್ಣಾಗಿದ್ದರೂ ಸಹ ಮಾವಿನ ಹಣ್ಣನ್ನು ಇಷ್ಟಪಡುವವರ ಸಂಖ್ಯೆ ಎಷ್ಟಿದೆ ಅಂದರೆ ಮಾವು ಹಣ್ಣುಗಳ ರಾಜ ಎಂಬ ಬಿರುದನ್ನೇ ಪಡೆದುಬಿಟ್ಟಿದೆ. ಬೇಸಿಗೆ ಸಂದರ್ಭದಲ್ಲಿ ನೀವು ಮಾರುಕಟ್ಟೆಗಳಿಗೆ ಬಂದರೆ ಸಾಕು ಮಾವಿನ ಹಣ್ಣು ಕಾಣದೇ ಇರುವ ಸ್ಥಳಗಳೇ ಇಲ್ಲ. ಮಾವಿನ ಹಣ್ಣು ಮಾತ್ರವಲ್ಲದೇ ಮಾವಿನ ಮಿಲ್ಕ್​ ಶೇಖ್​, ಉಪ್ಪಿನ ಕಾಯಿ, ಐಸ್​ಕ್ರೀಂ, ಕೇಕ್​​ ಹೀಗೆ ನಾನಾ ರೂಪದಲ್ಲಿ ನೀವು ಮಾವನ್ನು ಸವಿಯಬಹುದಾಗಿದೆ.


ಆದರೆ ಇತ್ತೀಚಿಗೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಮಾವಿನ ಹಣ್ಣಿನ ವಿಡಿಯೋವೊಂದು ನೆಟ್ಟಿಗರು ತಲೆ ಕೆರೆದುಕೊಳ್ಳುವಂತೆ ಮಾಡ್ತಿದೆ. ಈ ಮಾವಿನ ಹಣ್ಣು ಜಿಪ್​ನ್ನು ಹೊಂದಿದೆ. ಅಚ್ಚರಿ ಎನಿಸಿದ್ರೂ ಸಹ ಇದು ಸತ್ಯ. ಮೇಲ್ನೋಟಕ್ಕೆ ಇದೊಂದು ಪರ್ಸ್​ನಂತೆ ಕಾಣುತ್ತದೆ. ಆದರೆ ಜಿಪ್​ನ್ನು ತೆರೆದು ನೋಡಿದಾಗ ಅದರೊಳಗೆ ಮಾವಿನ ಹಣ್ಣಿನ ತಿರುಳು ಹಾಗೂ ಗೊರಟೆ ಇವೆಲ್ಲವೂ ಇರೋದನ್ನು ಕಾಣಬಹುದಾಗಿದೆ. ಇದು ನೈಸರ್ಗಿಕವಾದ ಮಾವನ ಹಣ್ಣಂತೂ ಅಲ್ಲ. ಆದರೆ ಇಂತಹದ್ದೊಂದು ಪ್ರಯೋಗ ಏಕೆ ಮಾಡಿದ್ರು? ಅನ್ನೋದಕ್ಕೆ ಕಾರಣ ಮಾತ್ರ ತಿಳಿದಿಲ್ಲ.


@beautifulearth ಹೆಸರಿನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಹಂಚಿಕೊಂಡಿರುವ ರೀಲ್‌ಗೆ, “ಅದು ಪರ್ಸ್ ಎಂದು ನಾನು ಭಾವಿಸಿದೆ” ಎಂದು ಶೀರ್ಷಿಕೆ ನೀಡಲಾಗಿದೆ. ಕ್ಲಿಪ್‌ನಲ್ಲಿ, ಮಾವಿನ ಹಣ್ಣಿನಲ್ಲಿ ಮಾಡಿದ ಪರ್ಸ್​ನ್ನು ನೋಡಬಹುದು. ನೀವು ಜಿಪ್​ನ್ನು ತೆರೆದು ಮಾವಿನ ಹಣ್ಣನ್ನು ಸವಿಯಬಹುದಾಗಿದೆ.


ಈ ವಿಡಿಯೋ ನೋಡಿದ ನೆಟ್ಟಿಗರು ಇನ್ನೂ ಈ ಕಣ್ಣಲ್ಲಿ ಏನೇನು ನೋಡೋದು ಬಾಕಿ ಇದೆ ಅಂತಾ ಮಾತನಾಡಿಕೊಳ್ತಿದ್ದಾರೆ. ಇನ್ನೂ ಕೆಲವರು ಈ ರೀತಿಯಲ್ಲಿ ಮಾವಿನ ಹಣ್ಣು ಸವಿಯಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಮೆದುಳಿನಲ್ಲಿರುವ ಕೊನೆಯ ಜೀವಕೋಶವನ್ನು ಬಳಸಿಕೊಳ್ಳುವ ಪರಿಸ್ಥಿತಿ ಬಂದಾಗ ಈ ರೀತಿ ಆಗುತ್ತೆ ಅಂತಾ ಕುಟುಕಿದ್ದಾರೆ.

ಇದನ್ನು ಓದಿ : ಶಾಸಕರೊಬ್ಬರ ಮರ್ಸಿಡಿಸ್ ಕಾರಿನಲ್ಲಿ ಬಾಲಕಿಯ ಮೇಲೆ ಬಾಲಕರಿಂದ ಸಾಮೂಹಿಕ ಅತ್ಯಾಚಾರ

ಇದನ್ನೂ ಓದಿ : Prashath : ಹಾಸನದಲ್ಲಿ ಡಾ.ರಾಜ್ ಅಭಿಮಾನಿ ಕುಟುಂಬದ ಸದಸ್ಯನ ಬರ್ಬರ ಹತ್ಯೆ: ಪ್ರತಿಕಾರಕ್ಕಾಗಿ ನಡೆಯಿತಾ ಪ್ರಶಾಂತ್ ಹತ್ಯೆ

Fruit or purse? Bizarre video of mango with a zipper leaves netizens confused | WATCH

Comments are closed.