exercise : ಮಹಿಳೆಯರು ಬೆಳಗ್ಗೆ, ಪುರುಷರು ಸಂಜೆ ವ್ಯಾಯಾಮ ಮಾಡುವುದು ಉತ್ತಮ : ಅಧ್ಯಯನ

exercise : ಬೆಳಗ್ಗಿನ ಜಾವ ವ್ಯಾಯಾಮವನ್ನು ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂಬ ನಂಬಿಕೆ ಅನೇಕರಲ್ಲಿದೆ. ಆದರೆ ಇತ್ತೀಚಿಗೆ ನಡೆಸಲಾದ ಅಧ್ಯಯನವೊಂದರಲ್ಲಿ ವ್ಯಾಯಾಮ ಯಾವ ಹೊತ್ತಿನಲ್ಲಿ ಮಾಡಬೇಕು ಎನ್ನುವುದು ವ್ಯಕ್ತಿಯ ಲಿಂಗದ ಮೇಲೆ ಆಧಾರವಾಗಿರುತ್ತದೆ ಎಂದು ತಿಳಿದು ಬಂದಿದೆ. ಫ್ರಾಂಟರೀಸ್​ನಲ್ಲಿ ಪ್ರಕಟಿಸಲಾದ ಅಧ್ಯಯನದಲ್ಲಿ ಮಹಿಳೆಯರು ಬೆಳಗ್ಗಿನ ಜಾವ ಹಾಗೂ ಪುರುಷರು ಸಂಜೆಯ ಅವಧಿಯಲ್ಲಿ ದೇಹವನ್ನು ದಂಡಿಸುವುದು ಉತ್ತಮ ಎಂದು ಹೇಳಲಾಗಿದೆ. ಯಾವುದೇ ಹೊತ್ತಿನಲ್ಲಿ ದೇಹ ದಂಡನೆ ಮಾಡಿದ ಮಹಿಳೆಯ ಹೊಟ್ಟೆ, ಭಾಗದ ಕೊಬ್ಬು ಹಾಗೂ ಸಂಪೂರ್ಣ ದೇಹದ ತೂಕ ಕರಗಿದೆ. ಆದರೆ ಬೆಳಗ್ಗಿನ ಜಾವ ವ್ಯಾಯಾಮ ಮಾಡಿದ ಮಹಿಳೆಯರಲ್ಲಿ ಈ ಫಲಿತಾಂಶ ಹೆಚ್ಚಾಗಿ ಕಂಡುಬಂದಿದೆ ಎಂದು ಈ ಅಧ್ಯಯನದಲ್ಲಿ ತಿಳಿದು ಬಂದಿದೆ .


ಇನ್ನು ಪುರುಷರ ವಿಚಾರಕ್ಕೆ ಬಂದರೆ ಅವರು ಸಂಜೆ ವೇಳೆಗೆ ವ್ಯಾಯಾಮ ಮಾಡುವುದರಿಂದ ಎಚ್​ಡಿಎಲ್​ ಕೊಲೆಸ್ಟ್ರಾಲ್​​, ರಕ್ತದೊತ್ತಡ, ಉಸಿರಾಟದ ವ್ಯವಸ್ಥೆ ಸುಧಾರಿಸುವುದರ ಜೊತೆಗೆ ಕಾರ್ಬೋಹೈಡ್ರೇಟ್​ ಪ್ರಮಾಣ ಕೂಡ ಇಳಿಕೆಯಾಗುತ್ತದೆ.


ಮಹಿಳೆಯರಿಗೆ ಬೆಳಿಗ್ಗೆ ವ್ಯಾಯಾಮವು ಹೊಟ್ಟೆಯ ಕೊಬ್ಬು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂಬುದನ್ನು ತೋರಿಸುತ್ತದೆ, ಆದರೆ ಮಹಿಳೆಯರಲ್ಲಿ ಸಂಜೆಯ ವ್ಯಾಯಾಮವು ಮೇಲಿನ ದೇಹದ ಸ್ನಾಯುವಿನ ಶಕ್ತಿ, ಶಕ್ತಿ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ ಮತ್ತು ಒಟ್ಟಾರೆ ಮನಸ್ಥಿತಿ ಮತ್ತು ಪೌಷ್ಟಿಕಾಂಶದ ಅತ್ಯಾಧಿಕತೆಯನ್ನು ಸುಧಾರಿಸುತ್ತದೆ ಎಂದು ಡಾ. ಪೌಲ್ ಜೆ ಆರ್ಸಿಯೆರೊ, ನ್ಯೂಯಾರ್ಕ್‌ನ ಸ್ಕಿಡ್‌ಮೋರ್ ಕಾಲೇಜಿನ ಆರೋಗ್ಯ ಮತ್ತು ಮಾನವ ಶರೀರ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹೇಳಿದ್ದಾರೆ.


ಪುರುಷರಿಗೆ, ಸಂಜೆಯ ವ್ಯಾಯಾಮವು ರಕ್ತದೊತ್ತಡ, ಹೃದ್ರೋಗದ ಅಪಾಯ ಮತ್ತು ಆಯಾಸದ ಭಾವನೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಬೆಳಗಿನ ವ್ಯಾಯಾಮಕ್ಕೆ ಹೋಲಿಸಿದರೆ ಹೆಚ್ಚು ಕೊಬ್ಬನ್ನು ಕರಗಿಸುತ್ತದೆ ಎಂದು ಡಾ. ಪೌಲ್​ ಜೆ ಆರ್ಸಿಯೆರೋ ಹೇಳಿದರು.

ಇದನ್ನು ಓದಿ : ಶಾಸಕರೊಬ್ಬರ ಮರ್ಸಿಡಿಸ್ ಕಾರಿನಲ್ಲಿ ಬಾಲಕಿಯ ಮೇಲೆ ಬಾಲಕರಿಂದ ಸಾಮೂಹಿಕ ಅತ್ಯಾಚಾರ

ಇದನ್ನೂ ಓದಿ : Prashath : ಹಾಸನದಲ್ಲಿ ಡಾ.ರಾಜ್ ಅಭಿಮಾನಿ ಕುಟುಂಬದ ಸದಸ್ಯನ ಬರ್ಬರ ಹತ್ಯೆ: ಪ್ರತಿಕಾರಕ್ಕಾಗಿ ನಡೆಯಿತಾ ಪ್ರಶಾಂತ್ ಹತ್ಯೆ

Women should exercise in the morning, men in evening: Study

Comments are closed.