Rashmika Mandanna : ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಗಳಿಸಿರುವ ರಶ್ಮಿಕಾ ಮಂದಣ್ಣ ಮಿಷನ್ ಮಜ್ನು ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶ ಮಾಡಲಿದ್ದಾರೆ. ಇದರ ಜೊತೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ನಟ ರಣಬೀರ್ ಕಪೂರ್ ಜೊತೆಯಲ್ಲಿ ಅನಿಮಲ್ ಸಿನಿಮಾದಲ್ಲಿಯೂ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ನಟ ರಣಬೀರ್ ಕಪೂರ್ ಜೊತೆಯಲ್ಲಿ ಕೆಲಸ ಮಾಡಿರುವ ಅನುಭವವನ್ನು ಹಂಚಿಕೊಂಡಿದ್ದಾರೆ. ರಣಬೀರ್ ಕಪೂರ್ ಅತ್ಯಂತ ಸರಳ ವ್ಯಕ್ತಿ ಎಂದು ನಟಿ ರಶ್ಮಿಕಾ ಹಾಡಿ ಹೊಗಳಿದ್ದಾರೆ. ಫಿಲಂ ಫೇರ್ನಲ್ಲಿ ಮಾತನಾಡುವ ವೇಳೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ನನ್ನನ್ನು ಮೇಡಂ ಎಂದು ಕರೆಯುವ ಏಕೈಕ ನಟ ಎಂದರೆ ಅದು ರಣಬೀರ್ ಕಪೂರ್ ಎಂದು ಹೇಳಿದ್ದಾರೆ. ರಣಬೀರ್ರನ್ನು ಹೊಗಳಿದ ನಟಿ ರಶ್ಮಿಕಾ ನಾವು ಒಬ್ಬರಿಗೊಬ್ಬರು ಉತ್ತಮ ಸಮಯವನ್ನು ಕಳೆದಿದ್ದೇವೆ ಎಂದು ಹೇಳಿದ್ದಾರೆ .
ರಣಬೀರ್ ಕಪೂರ್ ಅತ್ಯಂತ ಪ್ರೀತಿದಾಯಕ ಗುಣವನ್ನು ಹೊಂದಿದ್ದಾರೆ. ಮೊದಲ ಬಾರಿಗೆ ರಣಬೀರ್ರನ್ನು ಭೇಟಿಯಾಗಿದ್ದಾಗ ನಾನು ಸಹಜವಾಗಿಯೇ ಭಯಭೀತಳಾಗಿದ್ದೆ. ಆದರೆ ಅವರು ತುಂಬಾ ಸರಳ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ. ಅಲ್ಲದೇ ಇಡೀ ಸಿನಿಮಾ ಇಂಡಸ್ಟ್ರಿಯಲ್ಲಿಯೇ ನನ್ನನ್ನು ಮೇಡಂ ಎಂದು ಕರೆಯುವ ಏಕೈಕ ನಟನೆಂದರೆ ಅದು ರಣಬೀರ್ ಕಪೂರ್. ಆದರೆ ನಾನು ಅವರಿಂದ ಮೇಡಂ ಎಂದು ಕರೆಯಿಸಿಕೊಳ್ಳಲು ಇಷ್ಟ ಪಡುವುದಿಲ್ಲ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ .
ರಶ್ಮಿಕಾ ಮಂದಣ್ಣ ಹಾಗೂ ರಣಬೀರ್ ಕಪೂರ್ ನಟಿಸುತ್ತಿರುವ ಅನಿಮಲ್ ಸಿನಿಮಾ ಒಂದು ಕ್ರೈಂ ಸ್ಟೋರಿಯಾಗಿದೆ. ಇದರಲ್ಲಿ ಅನಿಲ್ ಕಪೂರ್ ಹಾಗೂ ಬಾಬಿ ಡಿಯೋಲ್ ಸೇರಿದಂತೆ ಪ್ರಮುಖ ತಾರಾಗಣವಿದೆ. ಮೊದಲು ಪರಿಣಿತಿ ಚೋಪ್ರಾ ಈ ಪಾತ್ರವನ್ನು ನಿರ್ವಹಿಸಲಿದ್ದರು.
ಇದನ್ನು ಓದಿ : British Tourist Raped : ಮಸಾಜ್ ನೆಪದಲ್ಲಿ ವಿದೇಶಿ ಮಹಿಳೆ ಮೇಲೆ ಗೋವಾದಲ್ಲಿ ಅತ್ಯಾಚಾರ : ಆರೋಪಿ ಬಂಧನ
ಇದನ್ನೂ ಓದಿ : KL Rahul : ಟೀಮ್ ಇಂಡಿಯಾದಿಂದ ಹೊರ ಬಿದ್ದ ಕೆ.ಎಲ್.ರಾಹುಲ್ ಬಾವುಕ ಸಂದೇಶ
Ranbir Kapoor is the only actor who calls me ma’am, says Rashmika Mandanna