River Linking Project : ಏನಿದು ನದಿ ಜೋಡಣೆ ಯೋಜನೆ; ಇಲ್ಲಿದೆ ಸಂಪೂರ್ಣ ಮಾಹಿತಿ

ನದಿ ಜೋಡಣೆ ಯೋಜನೆಯು (River Linking Project)ಕಳೆದ ಕೆಲವು ದಿನಗಳಿಂದ ಭಾರಿ ಸುದ್ದಿಯಲ್ಲಿದೆ. ೨೦೨೨ರ ಕೇಂದ್ರ ಬಜೆಟ್ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitaraman) ಕಾವೇರಿ ಸೇರಿದಂತೆ ಐದು ನದಿಗಳ ಜೋಡಣೆಗೆ(River Linking ) ಕೇಂದ್ರ ಸರಕಾರ ಸಮ್ಮತಿ ಸೂಚಿಸಿದೆ ಎಂದು ಹೇಳಿದ್ದರು. ಕೃಷ್ಣಾ-ಪೆನ್ನಾರ್, ನರ್ಮದಾ-ಗೋದಾವರಿ, ಗೋದಾವರಿ-ಕೃಷ್ಣ ನದಿಗಳ ಜೋಡಣೆಗೂ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಇದಕ್ಕಾಗಿ 44605 ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ತಿಳಿಸಿದ್ದಾರೆ. ಕನ್ನಡಿಗರ ಜೀವನದಿ ಕಾವೇರಿಯೂ ನದಿ ಜೋಡಣೆ ಯೋಜನೆಯಲ್ಲಿ ಸೇರಿರುವುದು ಅಸಮಾಧಾನ ಉಂಟುಮಾಡಿದೆ.

ನದಿ ಜೋಡಣೆ ಯೋಜನೆ ಎಂದರೇನು ?

ಭಾರತದಲ್ಲಿ ಒಂದು ಭಾಗದಲ್ಲಿ ಅತೀವ ಮಳೆಯಾದರೆ, ಇನ್ನೊಂದೆಡೆ ಅತೀವ ಸೆಕೆ ಹಾಗೂ ಬರಗಾಲ ಕಂಡು ಬರುತ್ತದೆ. ಈ ಅಸಮತೋಲನ ನಿಲ್ಲಿಸಲು ನದಿ ಜೋಡಣೆ ಯೋಜನೆ ಹುಟ್ಟಿಕೊಂಡಿದೆ.ಈ ಯೋಜನೆಯ ಮುಖ್ಯ ಗುರಿ ಎಂದರೆ, ನದಿಗಳನ್ನು ಕಾಲುವೆ ಮತ್ತು ಜಲಾಶಯಗಳ ಮೂಲಕ ಮತ್ತೊಂದು ಭಾಗದ ನದಿಗಳ ಜೊತೆ ಜೋಡಿಸುವುದು. ಇದರಿಂದ ಅತಿವೃಷ್ಟಿ ಹಾಗು ಅನಾವೃಷ್ಟಿ ತಡೆಯಬಹುದು ಎಂಬುದು ತಜ್ಞರ ಅಭಿಪ್ರಾಯ. ಬಂಗಾಳಕೊಲ್ಲಿ ಸೇರುವ ಹೆಚ್ಚುವರಿ ೨೪೭ ಟಿಎಂಸಿ ಗೋದಾವರಿ ನದಿ ನೀರನ್ನು ಕೃಷ್ಣ,ಕಾವೇರಿ ಹಾಗು ಪೆನ್ನಾರ್ ಜೋಡಣೆ ಮೂಲಕ ದಕ್ಷಿಣ ದಿಕ್ಕಿಗೆ ಹರಿಸುವುದು ಉದ್ದೇಶವಾಗಿದೆ. ಈ ನೀರನ್ನು ಕೃಷಿ ಹಾಗು ಕುಡಿಯಲು ಬಳಸಬಹುದು.

ಕರ್ನಾಟಕಕ್ಕೆ ಏನಾದ್ರು ಪ್ರಯೋಜನ ಇದೆಯೇ?

ಪೆನ್ನಾರ್ ನದಿಯನ್ನು ಸೇರುವ ನೀರು ಸ್ಟಿಲ್ ಕೊಳವೆ ಮೂಲಕವೇ ಹರಿಯಲಿದೆ. ಹಾಗಾಗಿ ನೀರು ಹಾನಿಯಾಗಾಗುವುದು ಸಹ ತಪ್ಪುತ್ತದೆ. ಕಾವೇರಿ ನದಿಗೆ ಈ ಮೂಲಕ ಹೆಚ್ಚುವರಿ ನೂರು ಟಿಎಂಸಿ ನೀರು ಸೇರಲಿದೆ. ಇದರಿಂದಾಗಿ ಕರ್ನಾಟಕ ಹಾಗು ತಮಿಳುನಾಡು ನೀರಿಗಾಗಿ ಜಗಳ ಆಡುವುದು ತಪ್ಪುತ್ತದೆ. ಅಷ್ಟೇ ಅಲ್ಲದೆ, ಹಳ್ಳಿ ಹಾಗು ಪಟ್ಟಣಗಳಿಗೂ ಕುಡಿಯುವ ನೀರು ಪೂರೈಕೆ ಆಗಲಿದೆ.

ಅಷ್ಟೇ ಅಲ್ಲದೆ, ಮೇಕೆದಾಟು ಸೇರಿದಂತೆ ಇತರ ಯೋಜನೆಗಳಿಗೂ ಇದು ಅವಕಾಶ ಕಲ್ಪಿಸಲಿದೆ.ಇಷ್ಟೆಲ್ಲಾ ಅನುಕೂಲಗಳಿದ್ದರೂ ಪಕ್ಷಗಳ ರಾಜಕೀಯದಿಂದಾಗಿ ನದಿ ಯೋಜನೆ ಮುಂದೂಡಲಾಗುತ್ತಿದೆ.

ನದಿ ಜೋಡಣೆ ಅಪಾಯವೇನು

ಈ ನದಿ ಜೋಡಣೆ ವ್ಯವಸ್ಥೆಯಿಂದ ಅಪಾರ ಕೃಷಿ ಭೂಮಿ ನಾಶ ಆಗಬಹುದು. ಇದರೊಂದಿಗೆ ಆಹಾರ ಕ್ಷಾಮವೂ ಎದುರಾಗುವ ಸಾಧ್ಯತೆ ಇದೆ.ಅರಣ್ಯ ನಾಶ, ಪ್ರಕೃತಿಯಲ್ಲಿ ಅಸಮತೋಲನ ಮತ್ತಷ್ಟು ಹೆಚ್ಚುತ್ತದೆ. ಯೋಜನೆ ಜಾರಿಯಾದರೇ, ಸುತ್ತಲಿನ ಜನರು ಸೂರು ಕಳೆದುಕೊಳ್ಳಬೇಕಾಗುತ್ತದೆ. ಅವರಿಗೆ ಶಾಶ್ವತ ಸೂರು ಕಲ್ಪಿಸುವುದು ದೊಡ್ಡ ಸವಾಲೇ ಸರಿ.

ಇದನ್ನೂ ಓದಿ: Parvez Musharraf: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಕುರಿತು ಇಲ್ಲಿದೆ ಒಂದಿಷ್ಟು ಕುತೂಹಲಕಾರಿ ಸಂಗತಿಗಳು

(River Linking Project know more about river linking project )

Comments are closed.