Fastest Ball in Cricket History : ಶೋಯೆಬ್ ಅಖ್ತರ್ ವಿಶ್ವದಾಖಲೆ ಉಡೀಸ್ ಮಾಡಿದನಾ ಜಮ್ಮು ಎಕ್ಸ್‌ಪ್ರೆಸ್

ದೆಹಲಿ: ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಎಸೆತವನ್ನು (Fastest ball in cricket History)ಎಸೆದ ವಿಶ್ವದಾಖಲೆ ಪಾಕಿಸ್ತಾನದ ಶರವೇಗದ ಸರದಾರ ಶೋಯೆಬ್ ಅಖ್ತರ್ (Shoaib Akhtar) ಹೆಸರಿನಲ್ಲಿದೆ. ರಾವಲ್ಪಿಂಡಿ ಎಕ್ಸ್’ಪ್ರೆಸ್ ಶೋಯೆಬ್ ಅಖ್ತರ್ 2002ರಲ್ಲಿ ಲಾಹೋರ್’ನ ಗದ್ದಾಫಿ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಗಂಟೆಗೆ 161.3 ಕಿ.ಮೀ ವೇಗದ ಎಸೆತವನ್ನು ಎಸೆದು ವಿಶ್ವದಾಖಲೆ ನಿರ್ಮಿಸಿದ್ದರು. ಕಳೆದ 20 ವರ್ಷಗಳಿಂದ ಅಖ್ತರ್ ದಾಖಲೆಯನ್ನು ಯಾರೂ ಮುರಿದಿಲ್ಲ.

ಇದೀಗ ಭಾರತದ ಯುವ ಶರವೇಗದ ಬೌಲರ್, ಜಮ್ಮು ಎಕ್ಸ್’ಪ್ರೆಸ್ ಉಮ್ರಾನ್ ಮಲಿಕ್ (Umran Malik), ಪಾಕಿಸ್ತಾನದ ಶೋಯೆಬ್ ಅಖ್ತರ್’ಗಿಂತ ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡಿರುವ ಕುರಿತು ಸುದ್ದಿ ಹರಿದಾಡುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ದೆಹಲಿಯ ಅರುಣ್ ಜೈಟ್ಲಿ ಮೈದಾನದಲ್ಲಿ ಅಭ್ಯಾಸ ನಡೆಸುವ ಸಂದರ್ಭದಲ್ಲಿ ಉಮ್ರಾನ್ ಮಲಿಕ್ ಗಂಟೆಗೆ 163.7 ಕಿ.ಮೀ ವೇಗದ ಎಸೆತವೊಂದನ್ನು ಎಸೆದಿರುವ ಬಗ್ಗೆ ಸುದ್ದಿಯಾಗಿದೆ. ಆದರೆ ಇದನ್ನು ತಂಡದ ಆಡಳಿತ ಮಂಡಳಿ ಇಲ್ಲಿಯವರೆಗೆ ಸ್ಪಷ್ಟ ಪಡಿಸಿಲ್ಲ. ಸೋಷಿಯನ್ ಮೀಡಿಯಾದಲ್ಲಿ ಈ ಸುದ್ದಿ ಭಾರೀ ವೈರಲ್ ಆಗಿದೆ.

ಜಮ್ಮು ರಾಜಧಾನಿ ಶ್ರೀನಗರ ನಿವಾಸಿಯಾಗಿರುವ 22 ವರ್ಷದ ಉಮ್ರಾನ್ ಮಲಿಕ್ ಸದ್ಯ ಭಾರತದ ಅತ್ಯಂತ ವೇಗದ ಬೌಲರ್. ಕಳೆದ ಐಪಿಎಲ್ ಟೂರ್ನಿಯ ಪಂದ್ಯವೊಂದರಲ್ಲಿ ಉಮ್ರಾನ್ ಗಂಟೆಗೆ 157 ಕಿ.ಮೀ ವೇಗದ ಎಸೆತವೊಂದನ್ನು ಎಸೆದಿದ್ದರು. ಐಪಿಎಲ್ ಟೂರ್ನಿಯಲ್ಲಿ ಉಮ್ರಾನ್ ಮಲಿಕ್ ಅವರ ವೇಗದ ಬೌಲಿಂಗ್ ಕ್ರಿಕೆಟ್ ದಿಗ್ಗಜರ ಪ್ರಶಂಸೆಗೆ ಪಾತ್ರವಾಗಿತ್ತು. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್ ಪಡೆದು ಮಿಂಚಿದ್ದ ಮಲಿಕ್, ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದರು.

ಐಪಿಎಲ್’ನಲ್ಲಿ (IPL 2022) ಸನ್ ರೈಸರ್ಸ್ ಹೈದರಾಬಾದ್ ಪರ 14 ಪಂದ್ಯಗಳನ್ನಾಡಿದ್ದ ಉಮ್ರಾನ್ ಮಲಿಕ್ 22 ವಿಕೆಟ್ ಪಡೆದಿದ್ದರು. ಈ ಅಮೋಘ ಪ್ರದರ್ಶನ ಉಮ್ರಾನ್ ಮಲಿಕ್”ಗೆ ಭಾರತ ತಂಡದ ಬಾಗಿಲು ತೆರೆಸಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನಾಡುತ್ತಿರುವ ಭಾರತ ತಂಡದಲ್ಲಿ ಉಮ್ರಾನ್ ಮಲಿಕ್ ಸ್ಥಾನ ಪಡೆದಿದ್ದು, ಅಂತಾರಾಷ್ಟ್ರೀಯ ಪದಾರ್ಪಣೆಯನ್ನು ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ : Star Sports ನಲ್ಲಿ ಪ್ರಸಾರವಾಗಲ್ಲ ಐಪಿಎಲ್ ! ಹೊಸ ಬ್ರಾಡ್ ಕಾಸ್ಟಿಂಗ್ ರೈಟ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತೀರಿ

ಇದನ್ನೂ ಓದಿ : ರಣಜಿ ಟ್ರೋಫಿಯಲ್ಲಿ ಶತಕ ಬಾರಿಸಿದ ಪಶ್ಚಿಮ ಬಂಗಾಳ ಮಿನಿಸ್ಟರ್ !

Fastest Ball in Cricket History Umran Mallik Break Shoaib Akhtar Record

Comments are closed.