ಮಂಗಳವಾರ, ಏಪ್ರಿಲ್ 29, 2025
HomeSportsCricketRahul Dravid : ಆ ಆಟಗಾರನ ಪರ ನಿಂತಿದ್ದಕ್ಕೆ ಕೋಚ್ ದ್ರಾವಿಡ್ ವಿರುದ್ಧ ಫ್ಯಾನ್ಸ್ ಕೆಂಡಾಮಂಡಲ

Rahul Dravid : ಆ ಆಟಗಾರನ ಪರ ನಿಂತಿದ್ದಕ್ಕೆ ಕೋಚ್ ದ್ರಾವಿಡ್ ವಿರುದ್ಧ ಫ್ಯಾನ್ಸ್ ಕೆಂಡಾಮಂಡಲ

- Advertisement -

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ (Team India coach Rahul Dravid) ವಿರುದ್ಧಕ್ರಿಕೆಟ್ ಪ್ರಿಯರು ಕೆಂಡಾಮಂಡಲರಾಗಿದ್ದಾರೆ. ದ್ರಾವಿಡ್ ಆಡಿದ ಅದೊಂದು ಮಾತಿನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರುತ್ತಿದ್ದಾರೆ.

ವಿವಾದಗಳಿಂದ ರಾಹುಲ್ ದ್ರಾವಿಡ್ ಸದಾ ದೂರ. ತಮ್ಮ 16 ವರ್ಷಗಳ ಕ್ರಿಕೆಟ್ ವೃತ್ತಿಬದುಕಿನಲ್ಲಿ ದ್ರಾವಿಡ್ ಯಾವ ವಿವಾದಗಳಿಗೂ ಗುರಿಯಾದವರಲ್ಲ. ಅನಾವಶ್ಯಕ ಮಾತುಗಳಿಂದ ವಿವಾದಗಳನ್ನು ಮೇಮೇಲೆ ಎಳೆದುಕೊಂಡವರೂ ಅಲ್ಲ. ಆದರೆ ಈಗ ದ್ರಾವಿಡ್ ಆಡಿರುವ ಮಾತೊಂದು ಕ್ರಿಕೆಟ್ ಅಭಿಮಾನಿಗಳ ಕೋಪಕ್ಕೆಕಾರಣವಾಗಿದೆ. ಹಾಗಾದ್ರೆ ದ್ರಾವಿಡ್ ಅಂಥದ್ದು ಏನ್ ಹೇಳಿದ್ರು? ಅಭಿಮಾನಿಗಳ ಸಿಟ್ಟಿಗೆ ಕಾರಣವಾಗುವಂತಹ ಹೇಳಿಕೆಯನ್ನು ದ್ರಾವಿಡ್ ಯಾಕೆ ನೀಡಿದ್ರು? ಅಸಲಿಗೆ ದ್ರಾವಿಡ್ ಹೇಳಿದ್ದೇನು? ಯಾರ ಬಗ್ಗೆ ಗೊತ್ತಾ.. ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್”ಮನ್ ರಿಷಭ್ ಪಂತ್ ಬಗ್ಗೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದ ನಾಯಕತ್ವ ವಹಿಸಿದ್ದ ರಿಷಭ್ ಪಂತ್ ದಯನೀಯ ವೈಫಲ್ಯ ಎದುರಿಸಿದ್ದರು. 4 ಇನ್ನಿಂಗ್ಸ್”ಗಳಲ್ಲಿ 105ರ ಸ್ಟ್ರೈಕ್”ರೇಟ್”ನಲ್ಲಿ ಕೇವಲ 58 ರನ್ ಗಳಿಸಿದ್ದ ರಿಷಭ್ ಪಂತ್ ಕ್ರಿಕೆಟ್ ಪ್ರಿಯರಿಂದ, ಮಾಜಿ ಕ್ರಿಕೆಟಿಗರಿಂದ ಭಾರೀ ಟೀಕೆಗೆ ಗುರಿಯಾಗಿದ್ದರು. ಆದರೆ ಕೋಚ್ ದ್ರಾವಿಡ್ ಮಾತ್ರ ರಿಷಭ್ ಪಂತ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ 5ನೇ ಟಿ20 ಪಂದ್ಯ ಮಳೆಯಿಂದ ರದ್ದಾದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ್ರಾವಿಡ್, ರಿಷಭ್ ಪಂತ್ ಬೆಂಬಲಕ್ಕೆ ನಿಂತಿದ್ದಾರೆ (Coach Dravid backs Rishabh Pant).

“ಸರಣಿಯಲ್ಲಿ ಇನ್ನೂ ಹೆಚ್ಚಿನ ರನ್ ಗಳಿಸಬೇಕೆಂಬುದು ಆತನ ಇರಾದೆಯಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆದರೂ ಮುಂದಿನ ಕೆಲ ತಿಂಗಳುಗಳವರೆಗೆ ನಮ್ಮ ಯೋಜನೆಗಳಲ್ಲಿ ರಿಷಬ್ ಪಂತ್ ಪ್ರಮುಖ ಮತ್ತು ಅವಿಭಾಜ್ಯ ಅಂಗವಾಗಿರುತ್ತಾರೆ. ಇನ್ನಿಂಗ್ಸ್ ಮಧ್ಯದ ಓವರ್”ಗಳಲ್ಲಿ ಆಕ್ರಮಣಕಾರಿಯಾಗಿ ಆಡುವ ಆಟಗಾರರು ನಮಗೆ ಬೇಕು. ಕೆಲ ಸಂದರ್ಭಗಳಲ್ಲಿ ಎರಡು ಅಥವಾ ಮೂರು ಪಂದ್ಯಗಳ ಪ್ರದರ್ಶನ ಆಧಾರದ ಮೇಲೆ ಒಬ್ಬ ಆಟಗಾರನ ಸಾಮರ್ಥ್ಯ ಅಳೆಯುವುದು ಕಷ್ಟ”.
ರಾಹುಲ್ ದ್ರಾವಿಡ್, ಭಾರತ ಕ್ರಿಕೆಟ್ ತಂಡದ ಕೋಚ್.

ಹೀಗಂತ ಹೇಳುವ ಮೂಲಕ ಮುಂದಿನ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರಿಷಭ್ ಪಂತ್ ಆಡುವುದು ಖಚಿತ ಎಂಬ ಸಂದೇಶವನ್ನು ಕೋಚ್ ದ್ರಾವಿಡ್ ರವಾನಿಸಿದ್ದಾರೆ. ಇದು ಕ್ರಿಕೆಟ್ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಕಾರಣಗಳಿಂದ ಭಾರತ ತಂಡ ವಿಶ್ವಕಪ್ ಗೆಲ್ಲಲು ವಿಫಲವಾಗುತ್ತಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಕಿಡಿ ಕಾರಿದ್ದಾರೆ.

ಕಳಪೆ ಫಾರ್ಮ್”ನಲ್ಲಿರುವ ರಿಷಭ್ ಪಂತ್ ಅವರನ್ನು ಟಿ20 ವಿಶ್ವಕಪ್”ನಲ್ಲಿ ಆಡಿಸುವುದೇ ಒಂದು ದೊಡ್ಡ ದುರಂತ. ಭಾರತ ಖಂಡಿತಾ ಸೆಮಿಫೈನಲ್ ತಲುಪುದಿಲ್ಲ ಎಂದು ಕ್ರಿಕೆಟ್ ಫ್ಯಾನ್ಸ್ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ : Exclusive : KSCA ಆಯ್ಕೆ ಸಮಿತಿಯೊಂದಿಗೆ ಮನಸ್ತಾಪ ; ಕರ್ನಾಟಕ ತೊರೆಯಲು ಕೆ.ಗೌತಮ್ ನಿರ್ಧಾರ ?

ಇದನ್ನೂ ಓದಿ : Ashwin tests Covid Positive : ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್‌ಗೆ ಕೋವಿಡ್ ಪಾಸಿಟಿವ್

Fans left furious as Rahul Dravid backs 24-year-old star Rishabh pant

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular