groom marries 2 women : ಒಂದೇ ಮುಹೂರ್ತದಲ್ಲಿ ಇಬ್ಬರನ್ನು ಮದುವೆಯಾದ ಯುವಕ: ಅದರ ಹಿಂದಿದೆ ಈ ಕಾರಣ

ಜಾರ್ಖಂಡ್​ : groom marries 2 women : ಹಿಂದೆಲ್ಲ ರಾಜ ಮಹಾರಾಜರ ಕಾಲದಲ್ಲಿ ಬಹುಪತ್ನಿತ್ವ ಪದ್ಧತಿ ಜಾರಿಯಲ್ಲಿತ್ತು. ಕಾಲ ಕಳೆದಂತೆ ಕಾನೂನುಗಳು ಕಠಿಣವಾದವು ಹಾಗೂ ದೇಶದಲ್ಲಿ ಬಹುಪತ್ನಿತ್ವ ಪದ್ಧತಿಯನ್ನು ನಿಷೇಧಿಸಲಾಯ್ತು. ಏಕ ಪತ್ನಿತ್ವ ಪದ್ಧತಿ ಮಾತ್ರ ಪ್ರಸ್ತುತ ಭಾರತದಲ್ಲಿ ಜಾರಿಯಲ್ಲಿದೆ. ಆದರೂ ಸಹ ಅನೇಕ ಕುಗ್ರಾಮಗಳಲ್ಲಿ ಈಗಲೂ ಕೂಡ ಕೆಲವರು ದ್ವಿಪತ್ನಿತ್ವ ಪದ್ಧತಿಯನ್ನು ಪಾಲಿಸುತ್ತಿದ್ದಾರೆ. ಕೆಲವರು ಅಕ್ಕ ತಂಗಿಯನ್ನೇ ವಿವಾಹವಾದರೆ ಇನ್ನೂ ಕೆಲವರು ಮದುವೆಯ ಬಳಿಕ ಅಕ್ರಮ ಸಂಬಂಧ ಹೊಂದಿ ಕೊನೆಗೆ ಅವರನ್ನೂ ವಿವಾಹವಾಗುವ ಅನೇಕ ಘಟನೆಗಳು ಜಾರಿಯಲ್ಲಿದೆ.


ಈ ಎಲ್ಲಾ ವಿಚಾರಗಳ ಬಗ್ಗೆ ಇಲ್ಲಿ ಹೇಳಲು ಕಾರಣವೊಂದಿದೆ. ಅದೇನೆಂದರೆ ಜಾರ್ಖಂಡ್​​ನ ಗ್ರಾಮವೊಂದವರಲ್ಲಿ ಯುವಕನೊಬ್ಬ ತಾನು ಪ್ರೀತಿಸಿದ ಇಬ್ಬರು ಯುವತಿಯರನ್ನು ಮದುವೆಯಾದ ಘಟನೆಯೊಂದು ವರದಿಯಾಗಿದೆ. ಕುಸುಮ್​ ಲಕ್ರಾ ಹಾಗೂ ಸ್ವಾತಿ ಕುಮಾರಿ ಎಂಬ ಇಬ್ಬರು ಮಹಿಳೆಯರು ತಾವು ಪ್ರೀತಿಸಿದವನನ್ನು ಒಟ್ಟಿಗೆ ಮದುವೆಯಾಗಿದ್ದಾರೆ. ಜಾರ್ಖಂಡ್​ನ ಲೋಹರ್ದಾಗ ಜಿಲ್ಲೆಯ ಬಂದಾ ಗ್ರಾಮದಲ್ಲಿ ಇಂತಹದ್ದೊಂದು ವಿಚಿತ್ರ ಘಟನೆ ವರದಿಯಾಗಿದೆ.


ಏನಿದು ಘಟನೆ..?
ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಿದ್ದ ಸಂದೀಪ್​ ಕಳೆದ ಮೂರು ವರ್ಷಗಳಿಂದ ಕುಸುಮ್​ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಇವರಿಬ್ಬರಿಗೂ ಮದುವೆಯಾಗಿರಲಿಲ್ಲ. ಆದರೆ ಇಬ್ಬರೂ ಸಹ ಜೀವನ ಮಾಡಿದ ಫಲವಾಗಿ ಇವರಿಗೆ ಒಂದು ಮಗು ಕೂಡ ಇತ್ತು. ಆದರೆ ಕೆಲಸದ ನಿಮಿತ್ತ ಸಂದೀಪ್​ ಮಗು ಹಾಗೂ ಕುಸುಮ್​ಳನ್ನು ಮನೆಯಲ್ಲಿಯೇ ಬಿಟ್ಟು ಪಶ್ಚಿಮ ಬಂಗಾಳಕ್ಕೆ ತೆರಳಿದ್ದ. ಪಶ್ಚಿಮ ಬಂಗಾಳದ ಇಟ್ಟಿಗೆ ಗೂಡಿನಲ್ಲಿ ಕೆಲಸಕ್ಕೆ ಸೇರಿದ್ದ ಸಂದೀಪ್​ಗೆ ಇದೇ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಿದ್ದ ಸ್ವಾತಿ ಕುಮಾರಿ ಎಂಬವಳ ಪರಿಚಯವಾಗಿತ್ತು. ಕ್ರಮೇಣ ಈ ಪರಿಚಯ ಪ್ರೀತಿಗೆ ತಿರುಗಿತ್ತು. ಈ ವಿಚಾರ ಸ್ವಾತಿ ಕುಮಾರಿ ಮನೆಗೆ ತಿಳಿದು ದೊಡ್ಡ ಗಲಾಟೆಯೇ ನಡೆದು ಹೋಗಿದೆ.


ಇತ್ತ ಕುಸುಮ್​ ಅತ್ತ ಸ್ವಾತಿ ಕುಮಾರಿ ಪ್ರೀತಿಯಲ್ಲಿ ಸಂದೀಪ್​ ಇಕ್ಕಟ್ಟಿಗೆ ಸಿಲುಕಿದ್ದ . ಈ ಸಂಬಂಧ ಪಂಚಾಯ್ತಿ ಕರೆದ ಗ್ರಾಮದ ಹಿರಿಯರು ಸಂದೀಪ್​​ ಇಬ್ಬರನ್ನೂ ಮದುವೆಯಾಗಬೇಕು ಎಂದು ಆದೇಶ ನೀಡಿದ್ದಾರೆ. ಇದಕ್ಕೆ ಕುಸುಮ್​ ಹಾಗೂ ಸ್ವಾತಿ ಕುಮಾರಿ ಕುಟುಂಬಸ್ಥರು ಸಮ್ಮತಿ ಸೂಚಿಸಿದ್ದಾರೆ. ಹೀಗಾಗಿ ಸಂದೀಪ್​ ಒಂದೇ ಮುಹೂರ್ತದಲ್ಲಿ ತಾನು ಪ್ರೀತಿಸಿದ ಕುಸುಮ್​ ಹಾಗೂ ಸ್ವಾತಿ ಕುಮಾರಿ ಇಬ್ಬರಿಗೂ ತಾಳಿ ಕಟ್ಟಿದ್ದಾನೆ.

ಇದನ್ನು ಓದಿ : Exclusive : KSCA ಆಯ್ಕೆ ಸಮಿತಿಯೊಂದಿಗೆ ಮನಸ್ತಾಪ ; ಕರ್ನಾಟಕ ತೊರೆಯಲು ಕೆ.ಗೌತಮ್ ನಿರ್ಧಾರ ?

ಇದನ್ನೂ ಓದಿ : Ashwin tests Covid Positive : ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್‌ಗೆ ಕೋವಿಡ್ ಪಾಸಿಟಿವ್

jharkhand groom marries 2 women in 1 ceremony

Comments are closed.