Karnataka Bank : ಬ್ಯಾಂಕ್ ಖಾತೆಯನ್ನು ತೆರೆಯಬೇಕು ಅಂದರೆ ನೀವು ಏನು ಮಾಡುತ್ತೀರಿ..? ಯಾವ ಬ್ಯಾಂಕ್ನಲ್ಲಿ ಖಾತೆ ತೆರೆಯಬೇಕು ಎಂದುಕೊಂಡಿದ್ದೀರೋ ಆ ಶಾಖೆಗೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ಫೋಟೋಗಳನ್ನು ನೀಡಿ ಅಲ್ಲಿನ ಸಿಬ್ಬಂದಿಯ ಸಹಾಯದಿಂದ ಖಾತೆಯನ್ನು ತೆರೆಯುತ್ತೀರಿ. ಆದರೆ ಕರ್ಣಾಟಕ ಬ್ಯಾಂಕ್ನಲ್ಲಿ ನೀವು ಖಾತೆಯನ್ನು ತೆರೆಯಬೇಕು ಎಂದುಕೊಂಡಿದ್ದರೆ ಇನ್ಮುಂದೆ ನೀವು ಬ್ಯಾಂಕ್ಗೆ ಅಲೆದಾಡಬೇಕು ಎಂಬ ಪ್ರಮೇಯ ಇರೋದಿಲ್ಲ. ಏಕೆಂದರೆ ಕರ್ಣಾಟಕ ಬ್ಯಾಂಕ್ ಆನ್ಲೈನ್ ಉಳಿತಾಯ ಬ್ಯಾಂಕ್ ಖಾತೆ ತೆರೆಯುವ ಸೌಲಭ್ಯವನ್ನು ವಿಡಿಯೋ ಆಧಾರಿತ ಗ್ರಾಹಕರ ಗುರುತಿಸುವಿಕೆ ಪ್ರಕ್ರಿಯೆಯಾದ ವಿ – ಸಿಐಪಿ ಮೂಲಕ ಆರಂಭಿಸಿದೆ. ಅಂದರೆ ನೀವು ಇನ್ಮುಂದೆ ನೀವಿದ್ದ ಸ್ಥಳದಲ್ಲಿಯೇ ಕುಳಿತು ವಿಡಿಯೋ ಕಾಲ್ ಮಾಡುವ ಮೂಲಕ ಖಾತೆಯನ್ನು ತೆರೆಯಬಹುದಾಗಿದೆ.
ಕರ್ಣಾಟಕ ಬ್ಯಾಂಕ್ನ ಕಾರ್ಪೋರೇಟ್ ವೆಬ್ಸೈಟ್ಗಳಲ್ಲಿ ಈ ಸೌಲಭ್ಯವನ್ನು ಸಕ್ರಿಯಗೊಳಿಸಲಾಗಿದ್ದು ಆನ್ಲೈನ್ ಪ್ರಕ್ರಿಯೆ ಮೂಲಕ ಎಸ್ಬಿ ಖಾತೆಯನ್ನು ತೆರೆಯಲು ನೀವು ಅನುಕೂಲಕರ ಸ್ಥಳದಲ್ಲಿ ಕುಳಿತು ಬ್ಯಾಂಕ್ ಸಿಬ್ಬಂದಿ ಜೊತೆಯಲ್ಲಿ ವಿಡಿಯೋ ಕಾಲ್ ಮಾಡುವ ಮೂಲಕ ನಿಮ್ಮ ಕೆವೈಸಿ ಪೂರ್ಣಗೊಳಿಸಿ ಬ್ಯಾಂಕ್ ಖಾತೆಯನ್ನು ಹೊಂದಬಹುದಾಗಿದೆ. ಇಂದು ಸಂಪೂರ್ಣ ಕಾಗದ ರಹಿತ ಪ್ರಕ್ರಿಯೆಯಾಗಿದ್ದು ಕರ್ಣಾಟಕ ಬ್ಯಾಂಕ್ನ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ ನಿಯಂತ್ರಣದಲ್ಲಿ ನೀವು ಬ್ಯಾಂಕ್ ಖಾತೆಯನ್ನು ತೆರೆಯಲಿದ್ದೀರಿ. ಇದು ನೀವು ಖಾತೆ ತೆರೆಯಬೇಕಾದ ಅರ್ಜಿಯನ್ನು ಸ್ವಯಂ ತುಂಬಿಕೊಳ್ಳುತ್ತದೆ.
ನಿಮ್ಮ ಪಾನ್ ಕಾರ್ಡ್ ಹಾಗೂ ಆಧಾರ್ ಸಂಖ್ಯೆಗಳನ್ನು ಪ್ರೋಗ್ರಾಮಿಂಗ್ ಇಂಟರ್ಫೇಸ್ ನಿಯಂತ್ರಣವು ತಕ್ಷಣವೇ ಮೌಲ್ಯೀಕರಿಸಲಿದೆ. ಹಾಗೂ ವಿಡಿಯೋ ಕಾಲ್ ಮಾಡುವ ಮೂಲಕ ನಿಮ್ಮ ಕೆವೈಸಿ ಮಾಹಿತಿಯನ್ನು ಪೂರ್ಣಗೊಳಿಸುತ್ತದೆ. ಇದಾದ ಬಳಿಕ ಕೆಲವೇ ಕ್ಷಣಗಳಲ್ಲಿ ನಿಮ್ಮ ಬ್ಯಾಂಕ್ ಖಾತೆ ತೆರೆಯಲಿದೆ. ‘
ವಿ – ಸಿಐಪಿ ಮೂಲಕ ಆನ್ಲೈನ್ ಎಸ್ಬಿ ಖಾತೆ ತೆರೆಯುವ ಸೌಕರ್ಯವು ಗ್ರಾಹಕರ ಬ್ಯಾಂಕಿಂಗ್ ಅನುಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ನಾವು ನಂಬಿದ್ದೇವೆಂದು ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಬಲೇಶ್ವರ ಎಂಎಸ್ ಹೇಳಿದ್ದಾರೆ.
ಇದನ್ನು ಓದಿ : ಲಂಡನ್ನಲ್ಲಿ ಕ್ರಿಸ್ ಗೇಲ್ ಭೇಟಿ ಮಾಡಿದ ಆರ್ಸಿಬಿ ಮಾಜಿ ಓನರ್ ವಿಜಯ್ ಮಲ್ಯ
ಇದನ್ನೂ ಓದಿ : Karnataka cricket team : ಕರ್ನಾಟಕ ಕ್ರಿಕೆಟನ್ನು ಹಳ್ಳ ಹಿಡಿಸಿದ್ದು ಇದೇ ವ್ಯಕ್ತಿನಾ ?
Karnataka Bank launches video-based customer identification process for account opening