CM Uddhav Leaves Official Home : ಸಿಎಂ ಅಧಿಕೃತ ನಿವಾಸದಿಂದ ನಿರ್ಗಮಿಸಿದ ಉದ್ಧವ್​ ಠಾಕ್ರೆ

ಮಹಾರಾಷ್ಟ್ರ : CM Uddhav Leaves Official Home : ಮಹಾರಾಷ್ಟ್ರ ಸರ್ಕಾರದ ಸ್ಥಿರತೆಯ ಮೇಲೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನೇ ಹುಟ್ಟು ಹಾಕಿರುವ ಶಿವಸೇನೆಯ ನಾಯಕ ಏಕನಾಥ್​ ಶಿಂಧೆ ಬಂಡಾಯದ ನಡುವೆಯೇ ಸಿಎಂ ಉದ್ಧವ್​ ಠಾಕ್ರೆ ಬುಧವಾರ ರಾತ್ರಿ ದಕ್ಷಿಣ ಮುಂಬೈನಲ್ಲಿರುವ ಅಧಿಕೃತ ಸಿಎಂ ನಿವಾಸವಾದ ‘ವರ್ಷ’ವನ್ನು ತೊರೆದು ತಮ್ಮ ಖಾಸಗಿ ನಿವಾಸ ‘ಮಾತೋಶ್ರೀ’ಗೆ ಶಿಫ್ಟ್​ ಆಗಿದ್ದಾರೆ. ಬಾಂದ್ರಾದಲ್ಲಿರುವ ಮಾತೋಶ್ರೀ ನಿವಾಸಕ್ಕೆ ಕುಟುಂಬಸ್ಥರ ಸಮೇತ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ತಡರಾತ್ರಿ ಶಿಫ್ಟ್​ ಆಗಿದ್ದಾರೆ.

ಉದ್ಧವ್​ ಠಾಕ್ರೆ ಸಿಎಂ ಅಧಿಕೃತ ನಿವಾಸವನ್ನು ತೊರೆಯುವ ಸಂದರ್ಭದಲ್ಲಿ ಅವರ ಬೆಂಬಲಿಗರಿಂದ ಉದ್ಧವ್​ ನೀವು ಮುನ್ನುಗ್ಗಿ, ನಾವೆಲ್ಲ ನಿಮ್ಮ ಜೊತೆ ಇದ್ದೇವೆ ಎಂಬ ಘೋಷಣೆಗೆಳು ಕೇಳಿ ಬಂದವು. ತಮ್ಮ ಕುಟುಂಬಸ್ಥರ ಸಮೇತ ವರ್ಷ ನಿವಾಸವನ್ನು ತೊರೆದು ಖಾಸಗಿ ನಿವಾಸ ಮಾತೋಶ್ರೀಗೆ ಆಗಮಿಸಿದ ವೇಳೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮಾತೋಶ್ರೀ ನಿವಾಸದ ಹೊರಗೆ ಜಮಾಯಿಸುವ ಮೂಲಕ ತಮ್ಮ ಬೆಂಬಲವನ್ನು ಸೂಚಿಸಿದರು. ಉದ್ಧವ್​ ಠಾಕ್ರೆ ಖಾಸಗಿ ನಿವಾಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಶಿವಸೇನೆ ಕಾರ್ಯಕರ್ತರು ರಸ್ತೆ ತಡೆ ನಡೆಸಿದ ದೃಶ್ಯಗಳು ಸಹ ಕಂಡು ಬಂದವು. ಕಾರಿನಿಂದ ಕೆಳಗಿಳಿದ ಉದ್ಧವ್​ ಠಾಕ್ರೆ ಪೊಲೀಸ್​ ಭದ್ರತೆಯಲ್ಲಿ ತಮ್ಮ ನಿವಾಸಕ್ಕೆ ಶಿಫ್ಟ್​ ಆಗಿದ್ದಾರೆ.

ಶಿವಸೇನೆಯ ಮುಖ್ಯಸ್ಥರೂ ಆಗಿರುವ ಉದ್ಧವ್​ ಠಾಕ್ರೆ ಸಿಎಂ ಅಧಿಕೃತ ನಿವಾಸದಿಂದ ನಿರ್ಗಮಿಸುವ ಸಂದರ್ಭದಲ್ಲಿ ಶಿವಸೇನಾ ನಾಯಕರಾದ ನೀಲಂ ಗೋರ್ಹೆ ಹಾಗೂ ಚಂದ್ರಕಾಂತ್​ ಖೈರೆ ವರ್ಷ ನಿವಾಸದಲ್ಲಿ ಉಪಸ್ಥಿತರಿದ್ದರು. ಕಾರುಗಳಲ್ಲಿ ತಮ್ಮ ವೈಯಕ್ತಿಕ ವಸ್ತುಗಳನ್ನು ಲೋಡ್​ ಮಾಡುತ್ತಿದ್ದ ದೃಶ್ಯಗಳು ಈ ಹಿಂದೆ ಕಂಡು ಬಂದಿದ್ದವು.

ತಮ್ಮ ಅಧಿಕೃತ ನಿವಾಸದಿಂದ ನಿರ್ಗಮಿಸುವ ಕೆಲವೇ ಗಂಟೆಗಳ ಮೊದಲು ಉದ್ಧವ್​ ಠಾಕ್ರೆ ತಾವು ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದಿದ್ದಾರೆ. ಅಲ್ಲದೇ ಶೀವಸೇನೆಯ ಯಾವುದೇ ನಾಯಕ ಮುಂದಿನ ಸಿಎಂ ಆದರೆ ನಾನು ಖುಷಿಪಡುತ್ತೇನೆ ಎಂದು ಹೇಳಿದ್ದಾರೆ. 18 ನಿಮಿಷಗಳ ಕಾಲ ನಡೆದ ಲೈವ್​ ವೆಬ್​​ಕಾಸ್ಟ್​​ನಲ್ಲಿ ಬಂಡಾಯ ನಾಯಕ ಹಾಗೂ ತಮ್ಮನ್ನು ಬೆಂಬಲಿಸುತ್ತಿಉವ ಶಾಸಕರು, ಬಿಜೆಪಿ ಆಡಳಿತದ ಅಸ್ಸಾಂನ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಯಾವುದೇ ಶಾಸಕರು ನಾನು ಸಿಎಂ ಆಗಿ ಮುಂದುವರಿಯುವುದು ಬೇಡ ಎಂದು ಹೇಳಿದರೆ ನಾನು ಈ ಸ್ಥಾನದಿಂದ ಕೆಳಗಿಳಿಯಲು ಸಿದ್ಧ ಎಂದು ಹೇಳಿದ್ದರು.

ಇದನ್ನು ಓದಿ : Copper Vessel Benefits: ತಾಮ್ರದ ಪಾತ್ರೆಯ ಬಹುಪಯೋಗಿ ಗುಣಗಳೇನು ಗೊತ್ತ?

ಇದನ್ನೂ ಓದಿ : ಲಂಡನ್‌ನಲ್ಲಿ ಕ್ರಿಸ್ ಗೇಲ್ ಭೇಟಿ ಮಾಡಿದ ಆರ್‌ಸಿಬಿ ಮಾಜಿ ಓನರ್ ವಿಜಯ್ ಮಲ್ಯ

Amid Maha Potboiler, CM Uddhav Leaves Official Home Varsha With Family for Matoshree

Comments are closed.