Digant’s health : ಗೋವಾದ ಬೀಚ್ನಲ್ಲಿ ಕುಟುಂಬಸ್ಥರ ಜೊತೆ ತೆರಳಿದ್ದ ನಟ ದಿಗಂತ್ ಅಪಘಾತ ಮಾಡಿಕೊಂಡಿದ್ದರು. ಸಮ್ಮರ್ ಸಾಲ್ಟ್ ಮಾಡಲು ಹೋಗಿ ಕುತ್ತಿಗೆಗೆ ಬಲವಾದ ಏಟನ್ನು ಮಾಡಿಕೊಂಡಿದ್ದ ನಟ ದಿಗಂತ್ ಶಸ್ತ್ರಚಿಕಿತ್ಸೆ ಬಳಿಕ ಮಣಿಪಾಲ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪತಿಯ ಆರೋಗ್ಯದ ಬಗ್ಗೆ ಖುದ್ದು ನಟಿ ಐಂದ್ರಿತಾ ರೇ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ನಟಿ ಐಂದ್ರಿತಾ ರೇ ನಿನ್ನೆ ದಿಗಂತ್ಗೆ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂಬ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸವಾಗುತ್ತಿದೆ. ದಿಗಂತ್ ಈಗ ಶೀಘ್ರ ಗುಣಮುಖದ ಹಾದಿಯಲ್ಲಿದ್ದಾರೆ. ಎಲ್ಲಾ ಅಭಿಮಾನಿಗಳು, ಹಿತೈಷಿಗಳು, ಮಾಧ್ಯಮದ ಎಲ್ಲಾ ಸ್ನೇಹಿತರು ಹಾಗೂ ಕನ್ನಡ ಸಿನಿಮಾ ಇಂಡಸ್ಟ್ರಿಯ ಪ್ರತಿಯೊಬ್ಬರಿಗೂ ನಿಮ್ಮೆಲ್ಲರ ಹಾರೈಕೆಗಳಿಗಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
Happy to let you all know that Diganth’s surgery went well yesterday and he is on the road to a speedy recovery!
— Aindrita Ray (@AindritaR) June 23, 2022
Heartfelt thanks to all the fans, well wishers, friends in the media and KFI for their prayers and best wishes!🙏🏼 pic.twitter.com/f2rgyZRIpk
ದೂದ್ಪೇಡ ಖ್ಯಾತಿಯ ನಟ ದಿಗಂತ್ ಗೋವಾ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಸಮುದ್ರ ತೀರದಲ್ಲಿ ಪಲ್ಟಿ ಮಾಡಲು ಹೋಗಿ ಕತ್ತಿಗೆ ಬಲವಾದ ಏಟನ್ನು ಮಾಡಿಕೊಂಡಿದ್ದರು. ಇದಾದ ಬಳಿಕ ಅವರಿಗೆ ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ತ್ವರಿತವಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಗಿತ್ತು .ದಿಗಂತ್ಗೆ ಅಪಘಾತವಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಸಿನಿಮಾ ಇಂಡಸ್ಟ್ರಿಯ ಸ್ನೇಹಿತರು ಹಾಗೂ ಅಭಿಮಾನಿಗಳು ದಿಗಂತ್ ಶೀಘ್ರ ಚೇತರಿಕೆಗೆ ಹಾರೈಸಿದ್ದರು.
ಗೋವಾದಿಂದ ಸ್ವಲ್ಪ ದೂರದಲ್ಲಿದ್ದ ರೆಸಾರ್ಟ್ನಲ್ಲಿದ್ದ ಐಂದ್ರಿತಾ ಹಾಗೂ ದಿಗಂತ್ ಸ್ಪೋರ್ಟ್ಸ್ ಆ್ಯಕ್ಟಿವಿಟಿಯಲ್ಲಿ ಭಾಗಿಯಾಗಿದ್ದರು. ಇಲ್ಲೇ ಸೋಮರ್ ಸಾಲ್ಟ್ ಮಾಡುತ್ತಿದ್ದ ವೇಳೆಯಲ್ಲಿ ಆಯತಪ್ಪಿದ ಪರಿಣಾಮ ನಟ ದಿಗಂತ್ ಕತ್ತಿಗೆ ಬಲವಾದ ಏಟು ಬಿದ್ದಿತ್ತು.
ಇದನ್ನು ಓದಿ : ಮಾನ್ಸೂನ್ ಪ್ರವಾಸಕ್ಕೆ ಹೇಳಿ ಮಾಡಿದ ಸ್ಥಳ : ಭಾರತದ ಜಲಪಾತಗಳ ಗ್ರಾಮ ಕೊಡಗಿನ ಕರಿಕೆ
ಇದನ್ನೂ ಓದಿ : BCCI warnings : ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಬಿಸಿಸಿಐ ವಾರ್ನಿಂಗ್
Aindrita, his wife, who informed about Digant’s health