Mark Zuckerberg : ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಣ ಗಳಿಸುವ ಹೊಸ ದಾರಿ ಹೇಳಿದ ಮಾರ್ಕ್‌ ಜುಕರ್‌ಬರ್ಗ್‌!!

ಸೋಶಿಯಲ್‌ ಮೀಡಿಯಾದ ದೈತ್ಯ ಕಂಪನಿ ಫೇಸ್‌ಬುಕ್‌ನ CEO ಮಾರ್ಕ್‌ ಜುಕರ್‌ಬರ್ಗ್‌(Mark Zuckerberg) ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ಕ್ರಿಯೇಟರ್‌ಗಳಿಗೆ ಕೆಲವು ಒಳ್ಳೆಯ ಸುದ್ದಿಗಳನ್ನು ನೀಡಿದ್ದಾರೆ. ಅವರು ತಮ್ಮ ಅಧಿಕೃತ ಖಾತೆಯ ಮೂಲಕ ವಿವರವಾದ ಪೋಸ್ಟ್‌ ಒಂದನ್ನು ಮಾಡಿದ್ದಾರೆ. ಅದರಲ್ಲಿ ಕಂಪನಿಯು 2024ರವರೆಗೆ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನ ಯಾವುದೇ ಆದಾಯ ಹಂಚಿಕೆಯನ್ನು ತಡೆಯಹಿಡಿಯುತ್ತದೆ ಎಂದು ಹೇಳಿದ್ದಾರೆ. “ನಾವು 2024ರವರೆಗೆ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನ ಯಾವುದೇ ಆದಾಯವನ್ನು ಹಂಚಿಕೆಯನ್ನು ತಡೆಹಿಡಿಯುತ್ತೇವೆ. ಪೇಡ್‌ ಆನ್‌ಲೈನ್‌ ಈವೆಂಟ್‌ಗಳು, ಸಬ್‌ಸ್ಕ್ರಿಪ್ಷನ್‌ಗಳು, ಬ್ಯಾಡ್ಜ್‌ಗಳು, ಮತ್ತು ಬುಲೆಟಿನ್‌ ಗಳು ಒಳಗೊಂಡಿದೆ.” ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದರ ಜೊತೆಗೆ, ಜುಕರ್‌ಬರ್ಗ್‌ ಎರಡು ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ಗಳಲ್ಲಿ ಹಣ ಸಂಪಾದಿಸಲು ಕ್ರಿಯೇಟರ್‌ಗಳಿಗೆ ಹೊಸ ಮಾರ್ಗಗಳನ್ನು ಸಹ ಹೇಳಿದ್ದಾರೆ. ಈ ಹೊಸ ಪಟ್ಟಿಯು ಡಿಜಿಟಲ್‌ ಸಂಗ್ರಹಣೆಗಳು, ಸ್ಟಾರ್‌ ಮತ್ತು ಇತರರ ನಡುವೆ ಇಂಟರ್‌ಆಪರೇಬಲ್‌ ಚಂದಾದಾರಿಕೆಗಳಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ವೈಶಿಷ್ಟ್ಯಗಳು ಮೆಟಾವರ್ಸ್‌ನ ರಚನಾಕಾರರಿಗೆ ಸಹಾಯ ಮಾಡುತ್ತದೆ’, ಎಂದು ಜ್ಯೂಕರ್‌ಬರ್ಗ್‌ ಹೇಳಿದರು.

ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಬರಲಿರುವ ಹೊಸ ವೈಶಿಷ್ಟ್ಯಗಳು :

ಇಂಟರ್‌ ಆಪರೇಬಲ್‌ ಸಬ್‌ಸ್ಕ್ರಿಪ್ಷನ್‌ಗಳು :
ಈ ವೈಶಿಷ್ಟ್ಯವು ಕ್ರಿಯೇಟರ್‌ಗಳು ತಮ್ಮ ಪಾವತಿಸುವ ಚಂದಾದಾರರಿಗೆ ಇತರೆ ಪ್ಲಾಟ್‌ಫಾರ್ಮನ ಚಂದಾದರಿಗೆ ಮಾತ್ರ ಫೇಸ್‌ಬುಕ್‌ ಗಂಪುಗಳಿಗೆ ಪ್ರವೇಶವನ್ನು ನೀಡುತ್ತದೆ.

ಫೇಸ್‌ಬುಕ್‌ ಸ್ಟಾರ್ಸ್‌ :
ಕಂ‍ಪನಿಯು ಎಲ್ಲಾ ಅರ್ಹ ಕ್ರಿಯೇಟರ್‌ಗಳಿಗೆ ಸ್ಟಾರ್ಸ್‌ ಎಂಬ ತನ್ನ ಟಿಪ್ಪಿಂಗ್‌ ವೈಶಿಷ್ಟ್ಯವನ್ನು ತೆರೆಯಲಿದೆ ಎಂದು ಜುಕರ್‌ಬರ್ಗ್‌ ಹೇಳಿದ್ದಾರೆ. ಇದರಿಂದ ಹೆಚ್ಚಿನ ಜನರು ತಮ್ಮ ರೀಲ್‌ಗಳಿಗೆ, ಲೀವ್‌ ಅಥವಾ VOD ವಿಡಿಯೋಗಳಿಂದ ಆದಾಯ ಗಳಿಸಲು ಪ್ರಾರಂಭಿಸಬಹುದು.

ಇದನ್ನೂ ಓದಿ : Crazy Structure : ಜಗತ್ತಿನ ವಿಚಿತ್ರ ಕಟ್ಟಡಗಳು ನಿಮಗೆ ಗೊತ್ತಾ? ಇದು ಆಗರ್ಭ ಶ್ರೀಮಂತರ ಆಲೋಚನೆಯಿಂದ ಹುಟ್ಟಿದ್ದು!!

ಹಣಗಳಿಸುವ ರೀಲ್‌ಗಳು :
ಹೆಚ್ಚುವರಿಯಾಗಿ, ಕಂಪನಿಯು ಫೇಸ್‌ಬುಕ್‌ನ ಹೆಚ್ಚಿನ ಕ್ರಿಯೇಟರ್‌ಗಳಿಗೆ ರೀಲ್ಸ್‌ ಪ್ಲೇ ಬೋನಸ್‌ ಪ್ರೋಗ್ರಾಂ ಅನ್ನು ತೆರೆಯುತ್ತಿದೆ. ಇದು ಕ್ರಿಯೇಟರ್‌ಗಳು ತಮ್ಮ ಇನ್‌ಸ್ಟಾಗ್ರಾಮ್‌ ರೀಲ್‌ಗಳನ್ನು ಫೇಸ್‌ಬುಕ್‌ಗೆ ಕ್ರಾಸ್‌–ಪೋಸ್ಟ್‌ ಮಾಡಲು ಮತ್ತು ಅಲ್ಲಿಯೂ ಹಣ ಗಳಿಸಲು ಅನುವು ಮಾಡಿಕೊಡುತ್ತದೆ.

ಕ್ರಿಯೇಟರ್‌ ಮಾರ್ಕೆಟ್‌ಪ್ಲೇಸ್‌:
ಮೆಟಾ ದ CEO ಕಂಪನಿಯು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಸೆಟ್‌ ಸ್ಥಳವನ್ನು ಪರೀಕ್ಷಿಸಲು ಪ್ರಾರಂಭಿಸಿದೆ ಎಂದು ಹೇಳಿದರು. ಇದರಿಂದ ಅಲ್ಲಿ ಕ್ರಿಯೇಟರ್‌ಗಳನ್ನು ಕಂಡುಹಿಡಿಯಬಹುದು ಮತ್ತು ಪಾವತಿಸಬಹುದು. ಅಲ್ಲಿ ಬ್ರ್ಯಾಂಡ್‌ಗಳು ಹೊಸ ಪಾಲುದಾರಿಕೆ ಅವಕಾಶಗಳನ್ನು ಹಂಚಿಕೊಳ್ಳಬಹುದು.

ಡಿಜಿಟಲ್ ಸಂಗ್ರಹಣೆಗಳು:
ಕೊನೆಯದಾಗಿ, ಹೆಚ್ಚಿನ ಕ್ರಿಯೇಟರ್‌ಗಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ NFT ಗಳ ಪ್ರದರ್ಶನಗಳಿಗೆ ಕಂಪನಿಯು ಬೆಂಬಲವನ್ನು ಎಕ್ಸಪಾಂಡ್‌ ಮಾಡುತ್ತದೆ ಎಂದು ಜುಕರ್‌ಬರ್ಗ್‌ ಹೇಳಿದರು. “ನಾವು ಶೀಘ್ರದಲ್ಲೇ ಫೇಸ್‌ಬುಕ್‌ಗೆ ಈ ವೈಶಿಷ್ಟ್ಯವನ್ನು ತರುತ್ತೇವೆ – ಯುಎಸ್‌ ಕ್ರಿಯೇಟರ್‌ಗಳ ಸಣ್ಣ ಗುಂಪಿನಿಂದ ಪ್ರಾರಂಭಿಸಿ– ಇದರಿಂದ ಜನರು ಇನ್‌ಸ್ಟಾಗ್ರಾಮ್‌ ಮತ್ತು ಫೇಸ್‌ಬುಕ್‌ನಲ್ಲಿ ಕ್ರಾಸ್‌–ಪೋಸ್ಟ್‌ ಮಾಡಬಹುದು” ನಾವು ಶೀಘ್ರದಲ್ಲೇ SparkAR ಜೊತೆಗೆ ಇನ್‌ಸ್ಟಾಗ್ರಾಮ್‌ ಕಥೆಗಳಲ್ಲಿ NFTಗಳನ್ನು ಸಹ ಪರೀಕ್ಷಿಸುತ್ತೇವೆ ಎಂದು ಜುಕರ್‌ಬರ್ಗ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ : Edible Oil Price : ಅಡುಗೆ ಎಣ್ಣೆಯ ಬೆಲೆಗಳಲ್ಲಿ ಇಳಿಕೆ! ಯಾವ ಎಣ್ಣೆ ಎಷ್ಟು ಇಳಿಕೆಯಾಗಿದೆ ಗೊತ್ತಾ?

(Mark Zuckerberg announces new ways to earn money on Facebook and Instagram)

Comments are closed.