ಭಾನುವಾರ, ಏಪ್ರಿಲ್ 27, 2025
HomeNationalDraupadi Murmu Village : ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಹುಟ್ಟೂರಿಗೆ ವಿದ್ಯುತ್‌ ಭಾಗ್ಯ

Draupadi Murmu Village : ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಹುಟ್ಟೂರಿಗೆ ವಿದ್ಯುತ್‌ ಭಾಗ್ಯ

- Advertisement -

ನವದೆಹಲಿ : ಬುಡಕಟ್ಟು ಜನಾಂಗದ ಹೆಣ್ಣುಮಗಳು ದ್ರೌಪದಿ ಮುರ್ಮು (Draupadi Murmu) ರಾಷ್ಟ್ರಪತಿ ಅಭ್ಯರ್ಥಿಯಾಗುತ್ತಿದ್ದಂತೆ ಅವರ ಹುಟ್ಟೂರಿನ Draupadi Murmu Village) ಚಿತ್ರಣ ಬದಲಾಗಿದೆ. ಜಾರ್ಖಂಡ ಅತ್ಯಂತ ಕುಗ್ರಾಮದಿಂದ ಬಂದ ದ್ರೌಪದಿ ಮುರ್ಮು ಈಗ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದಾರೆ. ಈ ಬೆಳವಣಿಗೆ ಬಳಿಕ ದ್ರೌಪದಿ ಮುರ್ಮು ಹುಟ್ಟೂರು ವಿದ್ಯುತ್ ಬೆಳಕು ಕಂಡಿದ್ದು ಜನರು ಸಂಭ್ರಮಿಸುತ್ತಿದ್ದಾರೆ. ಒಡಿಸ್ಸಾದ ಮಾಯರ್ಭಾಂಜ ಜಿಲ್ಲೆಯ ಉಪರಬೇಡ ಗ್ರಾಮದ ದ್ರೌಪದಿ ಮುರ್ಮು ಈಗ ರಾಷ್ಟ್ರಪತಿ ಅಭ್ಯರ್ಥಿ. ದ್ರೌಪದಿ ರಾಷ್ಟ್ರಪತಿ ಅಭ್ಯರ್ಥಿಯಾಗುತ್ತಿದ್ದಂತೆ ಅವರ ಬದುಕು, ಹಿನ್ನೆಲೆ ಹಾಗೂ ಸಾಧನೆ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿದ್ದವು.

ಈ ವೇಳೆ ದ್ರೌಪದಿ ಹುಟ್ಟೂರು ಉಪರಬೇಡ ಗ್ರಾಮಕ್ಕೆ ಇನ್ನೂ ವಿದ್ಯುತ್ ಸಂಪರ್ಕವೇ ಇಲ್ಲ ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಈಗ ಆ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಸೀಮೆಎಣ್ಣೆ ದೀಪದಿಂದ ಮುಕ್ತಿದೊರಕಿಸಲಾಗಿದೆ. ದ್ರೌಪದಿ ಮುರ್ಮು ಮಾಯರ್ಭಾಂಜ್ ಜಿಲ್ಲೆಯ ಉಪರಬೇಡ ಗ್ರಾಮದಲ್ಲಿ ಜನಿಸಿದ್ದು, ಅತ್ಯಂತ ಬಡತನದ ಕುಟುಂಬದಲ್ಲಿ ಬೆಳೆದು ಬಂದಿದ್ದಾರೆ. 3500 ಜನಸಂಖ್ಯೆ ಹೊಂದಿರುವ ಈ ಹಳ್ಳಿಯಲ್ಲಿ ಬಡಾ ಶಾಹಿ‌ ಮತ್ತು ಡುಂಗ್ರಿ ಶಾಹಿ.‌ಬಡಾ ಶಾಹಿಯಲ್ಲಿ ವಿದ್ಯುತ್ ಸಂಪರ್ಕವಿತ್ತು. ಆದರೆ ಡುಂಗ್ರಿ ಶಾಹಿಯಲ್ಲಿ ವಿದ್ಯುತ್ ಬೆಳಕನ್ನು ಜನರು ನೋಡೇ ಇರಲಿಲ್ಲ.

ಈಗ ಆ ಗ್ರಾಮಕ್ಕೆ ತ್ವರಿತವಾಗಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಒಡಿಸ್ಸಾ ಸರ್ಕಾರ ಈ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸವನ್ನು ಅತ್ಯಂತ ಅಗತ್ಯದ ಕೆಲಸವಾಗಿ ಪರಿಗಣಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾರಂಭಿಸಿದೆ. ದ್ರೌಪದಿ ಮುರ್ಮು ಸದ್ಯ ಡುಂಗ್ರಿಶಾಹಿ ಗ್ರಾಮದಲ್ಲಿ ವಾಸಿಸುತ್ತಿಲ್ಲ ಬದಲಾಗಿ, ಉಪರಬೇಡ,ಡುಂಗುರಶಾಹಿ ಸುಮಾರು 20 ಕಿಲೋಮೀಟರ್ ದೂರದ ರೈರಂಗಪುರ ಪಟ್ಟಣದಲ್ಲಿ ವಾಸಿಸುತ್ತಿದ್ದಾರೆ.

ದ್ರೌಪದಿ ಮುರ್ಮು ರಾಷ್ಟ್ರಪತಿ ಅಭ್ಯರ್ಥಿಯಾಗುತ್ತಿದ್ದಂತೆ ಅವರ ಹಿನ್ನೆಲೆ ಸಾಧನೆ ಮುನ್ನಲೆಗೆ ಬರುತ್ತಿದ್ದು, ಬುಡಕಟ್ಟು ಹೆಣ್ಣುಮಗಳನ್ನು ಇಂತಹದೊಂದು ಹುದ್ದೆಗೆ ಆಯ್ಕೆ ಮಾಡಿದ ಕಾರಣಕ್ಕೆ ಎನ್ ಡಿಎ ಶ್ಲಾಘನೆಗೆ ಪಾತ್ರವಾಗಿದೆ. ಬಿಜೆಪಿಯಿಂದ ರಾಜಕೀಯಕ್ಕಿಳಿದ ದ್ರೌಪದಿ ಮುರ್ಮು ಯಶಸ್ವಿಯಾಗಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದು, ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮಾತ್ರವಲ್ಲ 2015 -21 ರವರೆಗೆ ಝಾರ್ಖಂಡನ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ ದ್ರೌಪದಿ ಮುರ್ಮು ಯಶಸ್ವಿಯಾಗಿ ಐದು ವರ್ಷ ಪೊರೈಸಿದ ರಾಜ್ಯಪಾಲರು ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು, ದ್ರೌಪದಿ ಮುರ್ಮು ರಾಷ್ಟ್ರಪತಿ ಆಗೋದು ಬಹುತೇಕ ಖಚಿತ ಎನ್ನಲಾಗ್ತಿದೆ.

ಇದನ್ನೂ ಓದಿ : Ram Gopal Varma : ದ್ರೌಪದಿ ಮುರ್ಮು ಬಗ್ಗೆ ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕ ಟ್ವೀಟ್ : ಪ್ರಕರಣ ದಾಖಲು

ಇದನ್ನೂ ಓದಿ : God Found in Ramohalli : ಹುಡುಕಿದಾಗ ಸಿಕ್ಕ ದೇವರು…! ರಾಮೋಹಳ್ಳಿಯಲ್ಲೊಂದು ವಿಸ್ಮಯಕಾರಿ ಘಟನೆ

Draupadi Murmu Village in Odisha To Get Electricity Connection For First Time

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular