ಚಿನ್ನಸ್ವಾಮಿ ಮೈದಾನದಲ್ಲೇ ಸೋತಿದ್ದ ನಾಯಕ, ಅದೇ ಮೈದಾನದಲ್ಲಿ ರಣಜಿ ಟ್ರೋಫಿ ಎತ್ತಿ ಹಿಡಿದ !


ಬೆಂಗಳೂರು: (Ranji Trophy Final) ಜಂಟಲ್”ಮ್ಯಾನ್ ಗೇಮ್ ಕ್ರಿಕೆಟ್ ಒಮ್ಮೊಮ್ಮೆ ಎಂತೆಂಥಾ ಅಚ್ಚರಿಗಳಿಗೆ ಸಾಕ್ಷಿಯಾಗುತ್ತದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ. 23 ವರ್ಷಗಳ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಣಜಿ ಟ್ರೋಫಿ ಗೆಲ್ಲಲಾಗದೇ ಚಡಪಡಿಸಿದ್ದ ನಾಯಕ, ಈಗ ತಂಡವೊಂದರ ಕೋಚ್ ಆಗಿ ಅದೇ ಮೈದಾನದಲ್ಲಿ ರಣಜಿ ಟ್ರೋಫಿ ಎತ್ತಿ ಹಿಡಿದಿದ್ದಾರೆ. ನಾವು ಹೇಳ ಹೊರಟಿರುವುದು ಮಧ್ಯಪ್ರದೇಶ ತಂಡದ ಕೋಚ್ ಚಂದ್ರಕಾಂತ್ ಪಂಡಿತ್ ಬಗ್ಗೆ (A great success story of Chandrakant Pandit Ranji Trophy Final).

1998-99ನೇ ಸಾಲಿನ ರಣಜಿ ಫೈನಲ್ ಪಂದ್ಯ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್”ನಲ್ಲಿ ಕರ್ನಾಟಕದ ಎದುರಾಳಿಯಾಗಿದ್ದದ್ದು ಇದೇ ಮಧ್ಯಪ್ರದೇಶ (Ranji Trophy final 1998-99 Karnataka Vs Madhya Pradesh). ಮಧ್ಯಪ್ರದೇಶ ತಂಡದ ನಾಯಕ ಈಗಿನ ಕೋಚ್ ಚಂದ್ರಕಾಂತ್ ಪಂಡಿತ್. ಆ ರೋಚಕ ಫೈನಲ್”ನಲ್ಲಿ ಮಧ್ಯಪ್ರದೇಶವನ್ನು 96 ರನ್”ಗಳಿಂದ ಸೋಲಿಸಿದ್ದ ಕರ್ನಾಟಕ, 6ನೇ ಬಾರಿ ರಣಜಿ ಟ್ರೋಫಿ ಎತ್ತಿ ಹಿಡಿದಿತ್ತು. ಪ್ರಥಮ ಇನ್ನಿಂಗ್ಸ್”ನಲ್ಲಿ ಕರ್ನಾಟಕ ತಂಡ 304 ರನ್ ಗಳಿಸಿದ್ರೆ, ಇದಕ್ಕೆ ಪ್ರತಿಯಾಗಿ 379 ರನ್ ಕಲೆ ಹಾಕಿದ್ದ ಮಧ್ಯಪ್ರದೇಶ 75 ರನ್”ಗಳ ಮಹತ್ವದ ಇನ್ನಿಂಗ್ಸ್ ಮುನ್ನಡೆ ಪಡೆದಿತ್ತು. ಅಲ್ಲಿಗೆ ಪಂದ್ಯ ಡ್ರಾಗೊಂಡ್ರೆ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಮಧ್ಯಪ್ರದೇಶ ಚಾಂಪಿಯನ್ ಆಗುವುದು ಪಕ್ಕಾ ಆಗಿತ್ತು. ಆದರೆ ನಡೆದದ್ದೇ ಬೇರೆ.

2ನೇ ಇನ್ನಿಂಗ್ಸ್”ನಲ್ಲಿ ಜೆ.ಆರುಣ್ ಕುಮಾರ್ ಬಾರಿಸಿದ ಭರ್ಜರಿ 147 ರನ್”ಗಳ ನೆರವಿನಿಂದ 321 ರನ್ ಕಲೆ ಹಾಕಿದ ಸುನಿಲ್ ಜೋಶಿ ನಾಯಕತ್ವದ ಕರ್ನಾಟಕ ತಂಡ, ಮಧ್ಯಪ್ರದೇಶಕ್ಕೆ 247 ರನ್’ಗಳ ಗೆಲುವಿನ ಗುರಿ ನಿಗದಿ ಪಡಿಸಿತು. ಗುರಿ ಬೆನ್ನಟ್ಟಿದ್ದ ಮಧ್ಯಪ್ರದೇಶ ಒಂದು ಹಂತದಲ್ಲಿ 4 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿ ರಣಜಿ ಚಾಂಪಿಯನ್ ಪಟ್ಟದತ್ತ ದಾಪುಗಾಲು ಹಾಕಿತ್ತು. ಕೊನೆಯ 20 ಓವರ್”ಗಳ ಆಟವಷ್ಟೇ ಬಾಕಿ. ಕರ್ನಾಟಕ ಗೆಲ್ಬೇಕು ಅಂದ್ರೆ ಮಧ್ಯಪ್ರದೇಶವನ್ನು ಆಲೌಟ್ ಮಾಡ್ಲೇಬೇಕು. ಮಧ್ಯಪ್ರದೇಶಕ್ಕೆ ಪಂದ್ಯ ಡ್ರಾಗೊಂಡ್ರೂ ಸಾಕಿತ್ತು. ಡ್ರಾಗೊಳಿಸಲು ಕ್ರೀಸ್ ಕಚ್ಚಿ ನಿಂತಿದ್ದವರು 204 ಎಸೆತಗಳಲ್ಲಿ 47 ರನ್ ಗಳಿಸಿ ಆಡುತ್ತಿದ್ದ ಮಧ್ಯಪ್ರದೇಶದ ಮಧ್ಯಮ ಕ್ರಮಾಂಕದ ಬ್ಯಾಟ್ಸ್”ಮನ್ ಅಬ್ಬಾಸ್ ಅಲಿ.

ಆದರೆ ಕೊನೇ ಕ್ಷಣದಲ್ಲಿ ನಾಯಕ ಸುನಿಲ್ ಜೋಶಿ ಯಾವಾಗ ವಿಜಯ್ ಭಾರದ್ವಾಜ್ ಕೈಗೆ ಚೆಂಡಿತ್ತರೋ, ಅಲ್ಲಿಂದ ಪಂದ್ಯದ ಚಿತ್ರಣವೇ ಬದಲಾಯಿತು. ಕೇವಲ 18 ರನ್ ಅಂತರ ದಲ್ಲಿ ಮಧ್ಯಪ್ರದೇಶದ 5 ವಿಕೆಟ್’ಗಳನ್ನು ಉರುಳಿಸಿದ ಭಾರದ್ವಾಜ್, ಕೈ ತಪ್ಪಿ ಹೋಗಿದ್ದ ಗೆಲುವನ್ನು ಕರ್ನಾಟಕದ ಕಡೆ ಎಳೆದು ತಂದ್ರು. 24 ರನ್”ಗಳಿಗೆ 6 ವಿಕೆಟ್ ಉರುಳಿಸಿದ್ದ ಭಾರದ್ವಾಜ್, ಕರ್ನಾಟಕಕ್ಕೆ ರಣಜಿ ಟ್ರೋಫಿ ಗೆದ್ದುಕೊಟ್ಟಿದ್ರು.

ರಣಜಿ ಟ್ರೋಫಿ ಫೈನಲ್ 1998-99ರ ಸ್ಕೋರ್ ಕಾರ್ಡ್ ಲಿಂಕ್:

A great success story of Chandrakant Pandit Ranji Trophy Final
IMAGE CREDIT : Cricinfo

23 ವರ್ಷಗಳ ಹಿಂದೆ ನಾಯಕನಾಗಿ ರಣಜಿ ಟ್ರೋಫಿ ಗೆಲ್ಲಿಸಲು ವಿಫಲರಾಗಿದ್ದ ಚಂದ್ರಕಾಂತ್ ಪಂಡಿತ್, ಈಗ ಮಧ್ಯಪ್ರದೇಶ ತಂಡದ ಕೋಚ್ ಆಗಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಮುಂಬೈ ವಿರುದ್ಧ ಫೈನಲ್ ಪಂದ್ಯದಲ್ಲಿ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಮಧ್ಯಪ್ರದೇಶ ಚಾಂಪಿಯನ್ ಪಟ್ಟಕ್ಕೇರಿದೆ. ವಿಶೇಷ ಏನಂದ್ರೆ ಕೋಚ್ ಆಗಿ ಇದು ಚಂದ್ರಕಾಂತ್ ಪಂಡಿತ್ ಗೆದ್ದ 6ನೇ ರಣಜಿ ಟ್ರೋಫಿ. ಮುಂಬೈ ತಂಡದ ಕೋಚ್ ಆಗಿ ಮೂರು ಬಾರಿ, ವಿದರ್ಭ ಕೋಚ್ ಆಗಿ ಎರಡು ಬಾರಿ ಮತ್ತು ಈಗ ಮಧ್ಯಪ್ರದೇಶ ತಂಡದ ಕೋಚ್ ಆಗಿ ಚಂದ್ರಕಾಂತ್ ಪಂಡಿತ್ ರಣಜಿ ಟ್ರೋಫಿ ಗೆದ್ದಿದ್ದಾರೆ.

ರಣಜಿ ಟ್ರೋಫಿ ವಿನ್ನಿಂಗ್ ಕೋಚ್: ಚಂದ್ರಕಾಂತ್ ಪಂಡಿತ್
ಮುಂಬೈ: 2002-03, 2003-04, 2015-16
ವಿದರ್ಭ: 2017-18, 2018-19
ಮಧ್ಯಪ್ರದೇಶ: 2021-22

https://twitter.com/Cric_Resanth/status/1540581288616177664?s=20&t=UVDyRAfjXMxDVqCdZrzWiw

ಇದನ್ನೂ ಓದಿ : Rohit Sharma Tests Covid Positive : ಟೀಂ ಇಂಡಿಯಾಕ್ಕೆ ಆಘಾತ, ರೋಹಿತ್‌ ಶರ್ಮಾ ಗೆ ಕೋವಿಡ್‌ ಪಾಸಿಟಿವ್‌

ಇದನ್ನೂ ಓದಿ : Madhya Pradesh Clinched maiden Ranji Trophy : ಚೊಚ್ಚಲ ರಣಜಿ ಟ್ರೋಫಿ ಮುಡಿಗೇರಿಸಿಕೊಂಡ ಮಧ್ಯಪ್ರದೇಶ

A great success story of Chandrakant Pandit Ranji Trophy Final

Comments are closed.