ಸೋಮವಾರ, ಏಪ್ರಿಲ್ 28, 2025
HomeSportsCricketRobin Uthappa blessed with a baby girl : ರಾಬಿನ್ ಉತ್ತಪ್ಪಗೆ ಹೆಣ್ಣು ಮಗು,...

Robin Uthappa blessed with a baby girl : ರಾಬಿನ್ ಉತ್ತಪ್ಪಗೆ ಹೆಣ್ಣು ಮಗು, 2ನೇ ಮಗುವಿಗೆ ತಂದೆಯಾದ ಕೊಡಗಿನ ವೀರ

- Advertisement -

ಬೆಂಗಳೂರು: ಕರ್ನಾಟಕದ ಹಿರಿಯ ಕ್ರಿಕೆಟಿಗ, ಕೊಡಗಿನ ವೀರ ಖ್ಯಾತಿಯ ರಾಬಿನ್ ಉತ್ತಪ್ಪ, ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ರಾಬಿನ್ ಉತ್ತಪ್ಪ ಅವರ ಪತ್ನಿ ಶೀತಲ್ ಗೌತಮ್ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮನೆಗೆ ಹೊಸ ಆತಿಥಿಯ ಆಗಮನವನ್ನು ಸ್ವತಃ ಉತ್ತಪ್ಪ (Robin Uthappa blessed with a baby girl ) ಅವರೇ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ನಮ್ಮ ಜೀವನದಲ್ಲಿ ನೂತನ ದೇವತೆಯನ್ನುಪರಿಚಯಿಸುತ್ತಿದ್ದೇವೆ. ಟ್ರಿನಿಟಿ ಥಿಯೇ ಉತ್ತಪ್ಪ ಅವರನ್ನು ಪರಿಚಯಿಸುತ್ತಿದ್ದೇವೆ. ಜಗತ್ತಿಗೆ ಆಗಮಿಸಲು ನಮ್ಮನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ನಾವು ಕೃತಜ್ಞರಾಗಿದ್ದೇವೆ’’ ಎಂದು ರಾಬಿನ್‌ ಉತ್ತಪ್ಪ ಫೇಸ್ ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ರಾಬಿನ್ ಉತ್ತಪ್ಪ-ಶೀತಲ್ ದಂಪತಿಗೆ ಈಗಾಗಲೇ ಐದು ವರ್ಷದ ಮಗನಿದ್ದಾನೆ. ಹೆಸರು ನೀಲ್ ನೋಲನ್ ಉತ್ತಪ್ಪ. ತಮ್ಮ ಕಾಲೇಜು ದಿನಗಳ ಗೆಳತಿ ಶೀತಲ್ ಗೌತಮ್ ಅವರನ್ನು ರಾಬಿನ್ ಉತ್ತಪ್ಪ 2016ರಲ್ಲಿ ಮದುವೆಯಾಗಿದ್ದರು.

36 ವರ್ಷದ ರಾಬಿನ್ ಉತ್ತಪ್ಪ ಭಾರತ ಪರ 46 ಏಕದಿನ ಪಂದ್ಯಗಳನ್ನಾಡಿದ್ದು, 934 ರನ್ ಗಳಿಸಿದ್ದಾರೆ. 13 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನೂ ಆಡಿರುವ ಉತ್ತಪ್ಪ, 249 ರನ್ ಕಲೆ ಹಾಕಿದ್ದಾರೆ. ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಭಾರತ ಪರ ಮೊದಲ ಅರ್ಧಶತಕ ಬಾರಿಸಿದ ಆಟಗಾರನೆಂಬ ದಾಖಲೆ ರಾಬಿನ್ ಉತ್ತಪ್ಪ ಹೆಸರಲ್ಲಿದೆ. 2007ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉತ್ತಪ್ಪ ಈ ದಾಖಲೆ ಬರೆದಿದ್ದರು. ಪಾಕಿಸ್ತಾನ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಅಬ್ಬರಿಸಿದ್ದ ಉತ್ತಪ್ಪ 39 ಎಸೆತಗಳಲ್ಲಿ ಸ್ಫೋಟಕ 50 ರನ್ ಸಿಡಿಸಿ, ಟಿ 20 ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಭಾರತ ಪರ ಅರ್ಧಶತಕ ಸಿಡಿಸಿದ ಮೊದಲ ಬ್ಯಾಟ್ಸ್”ಮನ್ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಟೈನಲ್ಲಿ ಅಂತ್ಯಗೊಂಡಿದ್ದ ಆ ಪಂದ್ಯವನ್ನು ಭಾರತ ನಂತರ ಬಾಲ್ ಔಟ್’ನಲ್ಲಿ ಗೆದ್ದುಕೊಂಡಿತ್ತು.

ವೃತ್ತಿಜೀವನದಲ್ಲಿ ಒಟ್ಟು 142 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಉತ್ತಪ್ಪ, 22 ಶತಕಗಳ ಸಹಿತ 40ರ ಸರಾಸರಿಯಲ್ಲಿ 9,446 ರನ್ ಗಳಿಸಿದ್ದಾರೆ. 203 ಲಿಸ್ಟ್ ‘ಎ’ ಪಂದ್ಯಗಳಿಂದ 16 ಶತಕಗಳೊಂದಿಗೆ 6,534 ರನ್ ಕಲೆ ಹಾಕಿದ್ದಾರೆ. ಐಪಿಎಲ್”ನಲ್ಲೂ ಅಮೋಘ ದಾಖಲೆ ಹೊಂದಿರುವ ಉತ್ತಪ್ಪ 205 ಪಂದ್ಯಗಳಿಂದ 27 ಅರ್ಧಶತಕಗಳ ಸಹಿತ 3,799 ರನ್ ಗಳಿಸಿದ್ದಾರೆ. 2021ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗುವಲ್ಲಿ ಉತ್ತಪ್ಪ ಅವರ ಪಾತ್ರ ಮಹತ್ವದ್ದಾಗಿತ್ತು. 2014ರ ಟೂರ್ನಿಯಲ್ಲಿ 16 ಪಂದ್ಯಗಳಿಂದ 479 ರನ್ ಗಳಿಸಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಉತ್ತಪ್ಪ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

ಇದನ್ನೂ ಓದಿ : Kickboxer Nikhil Suresh Dies : ಕಿಕ್ ಬಾಕ್ಸಿಂಗ್ ಪಂದ್ಯಾವಳಿ ಎಡವಟ್ಟು: ಎದುರಾಳಿ ಪಂಚ್ ಗೆ ಪ್ರಾಣಬಿಟ್ಟ ಬಾಕ್ಸರ್‌

ಇದನ್ನೂ ಓದಿ : Sourav Ganguly backs Virat Kohli : ವಿರಾಟ್ ಬಗ್ಗೆ ಯಾರೂ ಕಮಕ್ ಕಿಮಕ್ ಅನ್ನಂಗಿಲ್ಲ,ಕೊಹ್ಲಿಗೆ ಸಿಕ್ತು ದಾದಾ ಸಪೋರ್ಟ್ !

Robin Uthappa blessed with a baby girl

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular