GST Price : ಜುಲೈ 18ರಿಂದ ದುಬಾರಿಯಾಗಲಿರುವ ದಿನಬಳಕೆ ವಸ್ತುಗಳು! ಯಾವುದು ಎಷ್ಟು ಹೆಚ್ಚಾಗಲಿದೆ ಗೊತ್ತಾ?

ನವದೆಹಲಿ : ಜುಲೈ 18 (July 18) ರಿಂದ ಜನಸಾಮಾನ್ಯರು ಮನೆಬಳಕೆಯ ಅಗತ್ಯ ವಸ್ತುಗಳು, ಬ್ಯಾಂಕ್‌ ಸೇವೆ, ಆಸ್ಪತ್ರೆ ಮತ್ತು ಹೊಟೇಲ್‌ ಗಳಿಗೆ ಹೆಚ್ಚಿನ ಹಣ ಪಾವತಿಸಬೇಕಾಗುವುದು (GST Price). ಫೈನಾನ್ಸ್‌ ಮಿನಿಸ್ಟರ್‌ ನಿರ್ಮಲಾ ಸೀತಾರಾಮನ್‌ (FM Nirmala Sitharaman) ಅವರ ಅಧ್ಯಕ್ಷತೆಯಲ್ಲಿ ನಡೆದ 47 ನೇ GST ಸಭೆಯಲ್ಲಿ ಅಗತ್ಯ ವಸ್ತುಗಳ ಮೇಲಿನ GST ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರ ಪರಿಣಾಮವಾಗಿ ಹಲವಾರು ಅಗತ್ಯ ವಸ್ತುಗಳು ಮತ್ತು ಸೇವೆಗಳ ಬೆಲೆ ಹೆಚ್ಚಾಗಲಿದೆ.

ಮೊದಲೇ ಪ್ಯಾಕ್‌ ಮಾಡಿದ ದಿನಬಳಕೆಯ ವಸ್ತುಗಳಾದ ಚೀಸ್‌, ಲಸ್ಸಿ, ಪ್ಯಾಕ್‌ ಮಾಡಿದ ಮೊಸರು, ಗೋಧಿ ಹಿಟ್ಟು, ಇತರ ಧಾನ್ಯಗಳು, ಜೇನುತುಪ್ಪ, ಹಪ್ಪಳ, ಬೇಳೆಕಾಳು, ಮಾಂಸ ಮತ್ತು ಶೀತಲೀಕರಿಸದ ಮೀನು, ಬೆಲ್ಲ ಮುಂತಾದ ಕೃಷಿ ಉತ್ಪನ್ನಗಳ ಬೆಲೆಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಗಿದೆ. ಇದರ ಪರಿಣಾಮ ದಿನಬಳಕೆಯ ಈ ವಸ್ತುಗಳು ದುಬಾರಿಯಾಗಲಿದೆ. ಪ್ರಸ್ತುತ ಬ್ರ್ಯಾಂಡೆಡ್‌ ಮತ್ತು ಪ್ಯಾಕ್‌ ಮಾಡಿದ ಆಹಾರ ಪದಾರ್ಥಗಳ ಮೇಲೆ ಶೇಕಡಾ 5ರಷ್ಟು GST ವಿಧಿಸಲಾಗುತ್ತಿದೆ. ಪ್ಯಾಕ್‌ಗಳಿಲ್ಲದ ಮತ್ತು ಲೇಬಲ್‌ ಗಳಿಲ್ಲದ ಉತ್ಪನ್ನಗಳು ತೆರಿಗೆ ಮುಕ್ತವಾಗಿದೆ.

ಜುಲೈ 18ರಿಂದ ಅಧಿಕ GST ಗೆ ಒಳಪಡುವ ವಸ್ತುಗಳು:

  • ಟೆಟ್ರಾ ಪ್ಯಾಕ್‌ ಮಾಡಿದ ಮೊಸರು, ಲಸ್ಸಿ ಮತ್ತು ಮಜ್ಜಿಗೆ ಗಳಿಗೆ ಈ ಮೊದಲು GST ಅನ್ವಯವಾಗುತ್ತಿರಲಿಲ್ಲ. ಆದರೆ ಜುಲೈ 18ರಿಂದ ಇವುಗಳಿಗೆ ಶೇಕಡಾ 5 ರಷ್ಟು GST ವಿಧಿಸಲಾಗುವುದು.
  • ಆಸ್ಪತ್ರೆಗಳಲ್ಲಿ ಐಸಿಯು ಅಲ್ಲದ 5,000 ರೂ. ಕ್ಕಿಂತ ಹೆಚ್ಚಿನ ಮೌಲ್ಯದ ಕೊಠಡಿಗಳ ಬಾಡಿಗೆಗೆ 5% GST ವಿಧಿಸಲಾಗುವುದು.
  • ಚೆಕ್‌ಬುಕ್‌ಗಳನ್ನು ನೀಡಲು ಬ್ಯಾಂಕ್‌ ಮೊದಲು ವಿಧಿಸುತ್ತಿದ್ದ ಸೇವಾ ತೆರಿಗೆಯು ಇನ್ನು 18% GST ಗೆ ಒಳಪಡುವುದು.
  • ಅಟ್ಲಾಸ್‌ಗಳನ್ನು ಹೊಂದಿರುವ ನಕ್ಷೆ(Map)ಗಳಿಗೆ ಶೇಕಡಾ 12 ರ ದರದಲ್ಲಿ GST ವಿಧಿಸಲಾಗುವುದು.
  • ಒಂದು ದಿನಕ್ಕೆ 1,000 ರೂ. ಗಿಂತ ಕಡಿಮೆ ಇರುವ ಹೋಟೆಲ್‌ ಕೊಠಡಿಗಳಿಗೆ ಇನ್ನು ಮುಂದೆ 12% GST.
  • ಈ ಮೊದಲು GST ಇಲ್ಲದ ಎಲ್‌ಇಡಿ ಲೈಟ್‌, ಎಲ್‌ಇಡಿ ಲ್ಯಾಂಪ್‌ಗಳಿಗೆ ಜುಲೈ 18ರಿಂದ ಶೇಕಡಾ 18 ರಷ್ಟು GST ವಿಧಿಸಲಾಗುವುದು.
  • ಇವಲ್ಲದೆ ಬ್ಲೇಡ್‌, ಪೇಪರ್‌ ಕತ್ತಿರಿಸುವ ಕತ್ತರಿ, ಪೆನ್ಸಿಲ್‌ ಶಾರ್ಪನರ್‌, ಚಮಚ, ಫೊರ್ಕ್‌, ಸ್ಕಿಮ್ಮರ್‌ ಮತ್ತು ಕೇಕ್‌–ಸರ್ವರ್‌ಗಳು ಈ ಹಿಂದೆ ಶೇಕಡಾ 12ರಷ್ಟು GST ಹೊಂದಿದ್ದವು. ಆದರೆ ಅವುಗಳು ಜುಲೈ 18ರಿಂದ ಶೇಕಡಾ 18 ರಷ್ಟು GST ಗೆ ಒಳಪಡುವುದು.

ಇದನ್ನೂ ಓದಿ : Mangrove Forest : ಪರಿಸರ ಸುಸ್ಥಿರತೆಗೆ ಪೂರಕ ಕಾಂಡ್ಲ ಕಾಡು

ಇದನ್ನೂ ಓದಿ : LIC Policy : ಎಲ್‌ಐಸಿ ಯ ವಿಮಾ ಬಚತ್‌ ಪಾಲಿಸಿ ನಿಮಗೆ ಗೊತ್ತಾ? ಒಂದೇ ಸಲ ಪ್ರೀಮಿಯಂ ಪಾವತಿಸಿ ಹೆಚ್ಚಿನ ಲಾಭ ಗಳಿಸಬಹುದು!!

(GST Price will hike from Monday July 18 here is a list of items that will become expensive)

Comments are closed.