ಬೆಂಗಳೂರು : man killed for bar bill : ಮದ್ಯದ ಅಂಗಡಿಗಳಲ್ಲಿ ಕುಡಿದ ಅಮಲಿನಲ್ಲಿ ಜಗಳಗಳು ನಡೆದ ಸಾಕಷ್ಟು ಘಟನೆಗಳ ಬಗ್ಗೆ ನಾವು ಕೇಳಿದ್ದೇವೆ. ಪಾನಮತ್ತರಾದ ಬಳಿಕ ದೇಹದ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಪರಿಣಾಮ ಇಂತಹ ಅನೇಕ ಘಟನೆಗಳು ಬಾರ್ಗಳಲ್ಲಿ ಜರಗುತ್ತಲೇ ಇರುತ್ತದೆ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಾರ್ನಲ್ಲಿ ಬಿಲ್ ಕಟ್ಟುವ ವಿಚಾರಕ್ಕೆ ನಡೆದ ಗಲಾಟೆಯೊಂದು ಕೊಲೆಯಲ್ಲಿ ದಾರುಣ ಅಂತ್ಯವನ್ನು ಕಂಡಿದೆ. ಕೊಲೆಯಾದ ವ್ಯಕ್ತಿಯನ್ನು ಪ್ರಕಾಶ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಕಾರ್ಯಪೃವತ್ತರಾದ ಇಂದಿರಾ ನಗರ ಠಾಣಾ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಅಂದ ಹಾಗೆ ಈ ಘಟನೆ ನಡೆದಿದ್ದು ಜುಲೈ29ರಂದು. ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಪ್ರಕಾಶ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮೃತಪಟ್ಟಿದ್ದಾರೆ. ಈ ಸಂಬಂಧ ಪೊಲೀಸರು ಜೈಕುಮಾರ್ ಎಂಬಾತನನ್ನು ಬಂಧಿಸಿದ್ದು ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಜುಲೈ 29ರಂದು ಇಂದಿರಾ ನಗರದ ಡಬಲ್ ರೋಡ್ನಲ್ಲಿರುವ ಟೆಂಪ್ಟೇಶನ್ ಬಾರ್ & ರೆಸ್ಟಾರೆಂಟ್ನಲ್ಲಿ ಪ್ರಕಾಶ್ ಮದ್ಯಪಾನ ಮಾಡುತ್ತಿದ್ದರು. ಇದೇ ಬಾರ್ಗೆ ಬಂಧಿತ ಆರೋಪಿ ಜೈ ಕುಮಾರ್ ಹಾಗೂ ಆತನ ಸ್ನೇಹಿತರು ಆಗಮಿಸಿದ್ದರು. ಮದ್ಯಪಾನ ಮಾಡಿದ ಬಳಿಕ ಬಿಲ್ ಕೊಡುವ ವಿಚಾರ ಎದುರಾದಾಗ ಜಗಳ ಉಂಟಾಗಿತ್ತು. ಬಾರ್ನ ಕ್ಯಾಶಿಯರ್ ಜೊತೆಯಲ್ಲಿ ಜೈಪ್ರಕಾಶ್ ಹಾಗೂ ಆತನ ಸ್ನೇಹಿತರು ಗಲಾಟೆ ಮಾಡುತ್ತಿದುದನ್ನು ಗಮನಿಸಿದ ಪ್ರಕಾಶ್ ಮಧ್ಯಸ್ಥಿಕೆ ವಹಿಸಿ ಹಣ ಪಾವತಿ ಮಾಡುವಂತೆ ಮಾಡಿದ್ದರು ಇದಾದ ಬಳಿಕ ಪ್ರಕಾಶ್ ಬಾರ್ನಿಂದ ಹೊರಗೆ ನಡೆದು ತನ್ನ ಸ್ನೇಹಿತರನ್ನು ಡ್ರಾಪ್ ಮಾಡಿ ಮನೆಗೆ ಹಿಂತಿರುಗಬೇಕಾದಾಗ ರಸ್ತೆಯಲ್ಲಿ ಜೈ ಪ್ರಕಾಶ್ ಹಾಗೂ ಆತನ ಸ್ನೇಹಿತರು ಅಡ್ಡಗಟ್ಟಿದ್ದರು.
ಬಾರ್ನಲ್ಲಿ ಬಿಲ್ ಪಾವತಿ ಮಾಡುವಾಗ ಮಧ್ಯಸ್ಥಿಕೆ ವಹಿಸಲು ನಿನ್ನನ್ನು ಕರೆದವರು ಯಾರು ಎಂದು ಪ್ರಶ್ನಿಸಿದ ಜೈ ಪ್ರಕಾಶ್ ಮತ್ತಾತನ ಸ್ನೇಹಿತರು ಅವಾಚ್ಯ ಶಬ್ದಗಳಿಂದ ಪ್ರಕಾಶ್ಗೆ ನಿಂದಿಸಿದ್ದರು. ಇದಾದ ಬಳಿಕ ಪ್ರಕಾಶ್ ಹೊಟ್ಟೆಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಪ್ರಕಾಶ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
a man killed for bar bill by friends in bengaluru