OnePlus 10T 5G : ಭಾರತಕ್ಕೆ ಕಾಲಿಟ್ಟ OnePlus 10T 5G ಸ್ಮಾರ್ಟ್‌ಫೋನ್‌ ! ಆಗಸ್ಟ್‌6 ರಿಂದ ಮಾರಾಟ ಪ್ರಾರಂಭ

ಸ್ಮಾರ್ಟ್‌ಫೋನ್‌ (Smartphone) ಗಳ ಜಗತ್ತಿನಲ್ಲಿ ಆಕರ್ಷಕ ಫೋನ್‌ಗಳನ್ನು ಪರಿಚಯಿಸಿದ ಒನ್‌ಪ್ಲಸ್‌ ಇದೀಗ OnePlus 10T ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಖರೀದಿದಾರರು ಇಂದಿನಿಂದಲೇ ಫೋನ್‌ಗಾಗಿ ಮುಂಗಡ ಬುಕಿಂಗ್‌ ಪ್ರಾರಂಭಿಸಬಹುದಾಗಿದೆ. OnePlus 10T ಇತ್ತೀಚಿನ ಸ್ನಾಪ್‌ಡ್ರಾಗನ್ 8 ಜನ್ ಚಿಪ್‌ಸೆಟ್ ಅನ್ನು ಬಳಸಿಕೊಂಡು ತಯಾರಾಗಿರುವುದು ಪ್ರಮುಖವಾಗಿದೆ. ಅಸ್ತಿತ್ವದಲ್ಲಿರುವ ಪ್ರಮುಖ ಮಾದರಿಯಾದ OnePlus 10 Pro ಗೆ ಹೋಲಿಸಿದರೆ ಹೊಸ ಸುಧಾರಣೆಗಳನ್ನು ಮಾಡಿಕೊಂಡು ಮಾರಾಟಕ್ಕೆ ಸಿದ್ಧವಾಗಿದೆ.

OnePlus ಈ ಸ್ಮಾರ್ಟಫೋನ್‌ನಲ್ಲಿ ಚಾರ್ಜಿಂಗ್ ತಂತ್ರಜ್ಞಾನವನ್ನು ಅಪ್‌ಗ್ರೇಡ್ ಮಾಡಿದೆ. ಆಂಡ್ರಾಯ್ಡ್‌ 13 ಆಪರೇಟಿಂಗ್ ಸಿಸ್ಟಮ್ ಆಧಾರಿತ ಹೊಸ ಆಕ್ಸಿಜನ್‌ ಓಎಸ್‌ 13 ಆವೃತ್ತಿಯನ್ನು ಸಹ ಪರಿಚಯಿಸಿದೆ. ಇದು ಈ ವರ್ಷದ ಕೊನೆಯಲ್ಲಿ OnePlus 10 ಫೋನ್‌ಗಳಿಗೆ ಬರಲಿದೆ.

ಭಾರತದಲ್ಲಿ ONEPLUS 10T 5G ಬೆಲೆ :
ಮೂರು ರೂಪಾಂತರಗಳಲ್ಲಿ OnePlus 10T 5G ಖರೀದಿಗೆ ಲಭ್ಯವಿರುತ್ತದೆ. 8GB + 128GB ಮೊದಲ ಮಾದರಿಯ ಆರಂಭಿಕ ಬೆಲೆ 49,999 ರೂ. ಆದರೆ, ಎರಡನೆಯದು 12GB ಮತ್ತು 16GB RAM ಮಾದರಿಯ ಬೆಲೆ 54,999 ರೂ. ಮತ್ತು ಕೊನೆಯ ರೂಪಾಂತರ 256GB ಸಂಗ್ರಹಣೆಯ ಸ್ಮಾರ್ಟ್‌ಫೋನ್‌ ಬೆಲೆ 55,999 ರೂ. ಗಳಾಗಿದೆ. ಭಾರತದಲ್ಲಿ OnePlus 10T ಅನ್ನು Amazon ಮತ್ತು OnePlus ವೆಬ್‌ಸೈಟ್ ಮೂಲಕ ಖರೀದಿಸಬಹುದಾಗಿದೆ.

ONEPLUS 10T 5G ವೈಶಿಷ್ಟ್ಯಗಳು:
OnePlus 10T ನ ವಿನ್ಯಾಸ ಮತ್ತು ನಿರ್ಮಾಣ ಗುಣಮಟ್ಟವು OnePlus 10 Pro ನಲ್ಲಿನ ಪ್ರೀಮಿಯಂ ಟೇಕ್‌ಗಿಂತ ಸ್ವಲ್ಪ ಭಿನ್ನವಾಗಿದೆ. OnePlus 10T ಪೂರ್ಣ HD+ ರೆಸಲ್ಯೂಶನ್ ಮತ್ತು 60Hz, 90Hz ಮತ್ತು 120Hz ನಡುವೆ ಬದಲಾಯಿಸುವ ಅಡಾಪ್ಟಿವ್ 120Hz ರಿಫ್ರೆಶ್ ದರವನ್ನು ಬೆಂಬಲಿಸುವ 6.7-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಡಿಸ್ಪ್ಲೇ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ಹೊಂದಿದೆ. ಮತ್ತು ಪಿಕ್ಸೆಲ್ ಸಾಂದ್ರತೆಯು 394 PPI ಆಗಿರುತ್ತದೆ.

OnePlus 10T ಸ್ನಾಪ್‌ಡ್ರಾಗನ್ 8+ Gen 1 ಚಿಪ್‌ಸೆಟ್‌ನಿಂದ ಚಾಲನೆಗೊಳ್ಳುತ್ತದೆ. ಇದರ RAM ನ ಕೆಪಾಸಿಟಿ 16GB ಆಗಿದೆ. 128GB ಮತ್ತು 256GB ವರೆಗಿನ ಮೆಮೊರಿ ಸ್ಟೋರೇಜ್‌ ಹೊಂದಿದೆ. OnePlus 10T ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್ ಆಧಾರಿತ ಆಕ್ಸಿಜನ್‌ ಓಎಸ್‌ 12.1 ಆವೃತ್ತಿಯೊಂದಿಗೆ ಬರುತ್ತದೆ. OnePlus ಈ ವರ್ಷದ ನಂತರ ಆಕ್ಸಿಜನ್‌ಓಎಸ್‌ 13 ಅನ್ನು ಅಳವಡಿಸಿಕೊಳ್ಳಿದೆ.

ಕ್ಯಾಮರಾ ಮತ್ತು ಇತರ ವಿಶೇಷತೆಗಳು :
OnePlus 10T ಹ್ಯಾಸಲ್‌ಬ್ಲಾಡ್‌ ಬ್ರ್ಯಾಂಡಿಂಗ್ ಇಲ್ಲದೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಅಳವಡಿಸಿಕೊಂಡಿದೆ. OIS ಜೊತೆಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ IMX766 ಸಂವೇದಕ, 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸಂವೇದಕವನ್ನು ಹೊಂದಿಸಿಕೊಂಡಿದೆ. ಸೆಲ್ಫಿಗಾಗಿ 16-ಮೆಗಾಪಿಕ್ಸೆಲ್ ನ ಮುಂಭಾಗದ ಕ್ಯಾಮರಾವನ್ನು ಹೊಂದಿದೆ . ಹೊಸ OnePlus 10 ಸರಣಿಯ ಫೋನ್ 150W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುವ ದೊಡ್ಡ 4800mAh ಬ್ಯಾಟರಿಯನ್ನು ಹೊಂದಿದೆ.

ಇದನ್ನೂ ಓದಿ : Samsung Smartphone Launch :ಸ್ಯಾಮ್ ಸಂಗ್ ನಿಂದ ಮತ್ತೆರಡು ಸ್ಮಾರ್ಟ್ ಫೋನ್ ಬಿಡುಗಡೆ

ಇದನ್ನೂ ಓದಿ : Honda Dio Sports : ಹೊಸ ಅಪ್ಡೇಟ್‌ಗಳೊಂದಿಗೆ ಭಾರತದಲ್ಲಿ ಬಿಡುಗಡೆಯಾದ ಹೊಂಡಾ ಡಿಯೋ ಸ್ಪೋರ್ಟ್ಸ್‌! ಬೆಲೆ ಜಸ್ಟ್‌ ರೂ. 68,317 !

(OnePlus 10T 5G smartphone launched in India)

Comments are closed.