DK Shivakumar hug Siddaramaiah : ಸಿದ್ದರಾಮಯ್ಯ ತಬ್ಬಿಕೊಳ್ಳಲು ಡಿಕೆ ಶಿವಕುಮಾರ್‌ಗೆ ರಾಹುಲ್ ಕೊಟ್ರಾ ಸಲಹೆ : ವೈರಲ್ ವಿಡಿಯೋದಲ್ಲಿ ಬಯಲಾಯ್ತು ಸತ್ಯ

ಬೆಂಗಳೂರು : (DK Shivakumar hug Siddaramaiah) ರಾಜ್ಯದಲ್ಲಿ ಬಹುದಿನಗಳಿಂದ‌ ಚರ್ಚೆಗೆ ಗ್ರಾಸವಾಗಿದ್ದ ಸಿದ್ಧರಾಮೋತ್ಸವ ಅದ್ದೂರಿಯಾಗಿ‌‌ನಡೆದಿದೆ. ಲಕ್ಷಾಂತರ ಜನರು ಭಾಗಿಯಾಗಿದ್ದ ಕಾರ್ಯಕ್ರಮ ಕಾಂಗ್ರೆಸ್ ನ ಒಗ್ಗಟ್ಟಿನ ಶಕ್ತಿಪ್ರದರ್ಶನದಂತೆ ಭಾಸವಾಗಿದ್ದು ಸುಳ್ಳಲ್ಲ. ಆದರೆ ಕಾರ್ಯಕ್ರಮದ ವೇದಿಕೆಯಲ್ಲಿ ಸಿದ್ಧು ಹಾಗೂ ಡಿಕೆಶಿ ಕೈ ಕೈ ಹಿಡಿದು ನಾವೆಂದೂ ಒಂದೇ ಎಂಬಂತೆ ಪೋಸ್ ಕೊಟ್ಟ ವಿಡಿಯೋ ನೋಡಿದ ಜನರು ಆಹಾ ಕಾಂಗ್ರೆಸ್ ನ ಎರಡು ಧ್ರುವ್ ಗಳು ಒಂದಾಗಿವೆ. ಇನ್ನೇನು ಕೈಪಾಳಯದಲ್ಲಿ ಭಿನ್ನಮತದ ಮಾತೇ ಇಲ್ಲ ಎಂದುಕೊಂಡಿದ್ದಾರೆ. ಇಂಥಹ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಕ್ಕೆ ನೀರೆರೆಚುವಂತ ವಿಡಿಯೋವೊಂದು ರಿಲೀಸ್ ಆಗಿದ್ದು, ವೈರಲ್ ವಿಡಿಯೋ ನೋಡಿದ ಜನ ಅಯ್ಯೋ ಹಿಂಗಾ ಅಂತ ನಗ್ತಿದ್ದಾರೆ.

ಹೌದು ಕಾಂಗ್ರೆಸ್ ನ ಹಿರಿಯ ನಾಯಕ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಹಾಲಿ ಅಧ್ಯಕ್ಷ ಡಿಕೆಶಿವಕುಮಾರ್ ನಡುವೆ ಶೀತಲ‌ಸಮರವಿದೆ. ಇಬ್ಬರೂ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರೋದರಿಂದ ಹಾಗೂ ಸಿದ್ಧರಾಮಯ್ಯನವರು ಆರಂಭದಿಂದಲೂ ಡಿಕೆ ರಾಜಕಾರಣ ವನ್ನು ವಿರೋಧಿಸುತ್ತ ಬಂದವರಾಗಿರೋದರಿಂದ ಇಬ್ಬರೂ ಎರಡು ಧ್ರುವಗಳಂತೆ ಒಂದೇ ಪಕ್ಷದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಪರೋಕ್ಷವಾಗಿ ಇದು ನನ್ನ ಕೊನೆಯ ಎಲೆಕ್ಷನ್ ನಂಗೇ ಸಿಎಂ ಸ್ಥಾನ ಕೊಡಿ ಎಂಬರ್ಥದಲ್ಲಿ ಸಿದ್ಧರಾಮಯ್ಯನವರು ಮಾತನಾಡುತ್ತಿದ್ದರೇ, ನಾನು ಸಮರ್ಥನಿದ್ದೇನೆ. ನನಗೂ ಸಿಎಂ ಆಗೋ ಆಸೆ ಇದೆ. ಆಶೀರ್ವಾದ ಮಾಡಿ ಎಂದು ಡಿಕೆಶಿ ಹೋದಲ್ಲಿ ಬಂದಲ್ಲಿ ಚುನಾವಣಾ ಪೂರ್ವ ತಯಾರಿ ಭಾಷಣ ಆರಂಭಿಸಿದ್ದಾರೆ.

ಇನ್ನೂ ಸಿದ್ಧರಾಮೋತ್ಸವವನ್ನು ಆರಂಭದಿಂದಲೂ ಡಿಕೆ ಪರೋಕ್ಷವಾಗಿ ಎದುರಿಸುತ್ತಲೇ ಬಂದಿದ್ದರು. ಹೀಗಾಗಿ ಡಿಕೆ ಸಿದ್ಧರಾಮೋತ್ಸವದಲ್ಲಿ ಭಾಗವಹಿಸೋದು ಅನುಮಾನ ಎಂದೇ ಹೇಳಲಾಗಿತ್ತು. ಆದರೆ ಸಿದ್ಧರಾಮಯ್ಯನವರ ಹುಟ್ಟುಹಬ್ಬ ಆಚರಣೆ ವೇಳೆ ಡಿಕೆಶಿ ಹಾಜರಿದ್ದರು. ಮಾತ್ರವಲ್ಲ ಸಿದ್ಧರಾಮಯ್ಯನವರನ್ನು ಸನ್ಮಾನಿಸಿದರು. ತಬ್ಬಿಕೊಂಡು ಶುಭಕೋರಿದರು. ಕೈ ಕೈ ಹಿಡಿದುಕೊಂಡು ಸಾಮೂಹಿಕ ನಾಯಕತ್ವದ ಮಂತ್ರ ಜಪಿಸಿದರು. ಈ ವಿಡಿಯೋ ನೋಡಿದ ಜನರು ಅಬ್ಬಾ ಸಿದ್ಧು ಡಿಕೆಶಿ ಒಂದಾಗಿದ್ದರಪ್ಪಾ ಇನ್ನೂ ಕಾಂಗ್ರೆಸ್ ಹಿಡಿಯೋರಿಲ್ಲ ಎಂದು ಸಮಾಧಾನ ಪಟ್ಟಿದ್ದರು. ಆದರೆ ವೈರಲ್ ಆಗಿರೋ ವೀಡಿಯೋ ಈ ಸಂಭ್ರಮದ ಸತ್ಯ ಬಿಚ್ಚಿಟ್ಟಿದೆ.

ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಡಿಕೆಶಿ ಸಿದ್ಧರಾಮೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಕಾರ್ಯಕ್ರಮದ ಶಿಷ್ಟಾಚಾರದಂತೆ ಸಿದ್ಧರಾಮಯ್ಯ ಅವರನ್ನು ಸನ್ಮಾನಿಸಿದ್ದಾರೆ. ಆದರೆ ಅವರಿಗೆ ಸಿದ್ಧರಾಮಯ್ಯ ಅವರನ್ನು ಗೌರವದಿಂದ ತಬ್ಬಿಕೊಳ್ಳುವ ಯಾವ ಇರಾದೆಯೂ ಇದ್ದಂತಿರಲಿಲ್ಲ. ಆದರೆ ವೇದಿಕೆ ಮೇಲಿದ್ದ ರಾಹುಲ್ ಗಾಂಧಿ ಈ ಕಾರ್ಯಕ್ರಮದ ಮೂಲಕ ಪಕ್ಷದಲ್ಲಿನ ಆಂತರಿಕ ಕಲಹದ ವದಂತಿಗಳಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಡಿಕೆಶಿಗೆ ಸಿದ್ಧು ಅವರನ್ನು ಆಲಂಗಿಸಿಕೊಂಡು ಅಭಿನಂದಿಸುವಂತೆ ಸೂಚಿಸಿದ್ದಾರೆ. ಕೈಸನ್ನೆ ಮೂಲಕ ರಾಹುಲ್ ಡಿಕೆಗೆ ಸೂಚನೆ ನೀಡಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋ ನೋಡಿದ ಜನರು ಆಹಾ ರಾಹುಲ್ ಗಾಂಧಿ ಡೈರೈಕ್ಷನ್ ಸಿನಿಮಾ ಸಖತ್ತಾಗಿದೆ ಗುರು ಅಂತ ಕಾಲೆಳೆದಿದ್ದಾರೆ.

ಇದನ್ನೂ ಓದಿ : ಅನಂತ ಕುಮಾರ್ ಹೆಗಡೆ ಸಿಎಂ, ಯತ್ನಾಳ್ ಹೋಂ ಮಿನಿಸ್ಟರ್ : ಸದ್ದಿಲ್ಲದೇ ರೂಪುಗೊಳ್ತಿದೆ ಸ್ಟ್ರಾಂಗ್ ಜನಾಭಿಪ್ರಾಯ

ಇದನ್ನೂ ಓದಿ : Red alert Karnataka : ಕರಾವಳಿ, ಮಲೆನಾಡಲ್ಲಿ 2 ದಿನ ಭಾರೀ ಮಳೆ : ರೆಡ್ ಅಲರ್ಟ್ ಘೋಷಣೆ, ಶಾಲೆಗಳಿಗೆ ರಜೆ

Rahul Gandhi advises DK Shivakumar hug Siddaramaiah : Truth revealed in viral video

Comments are closed.