ಶಿವಮೊಗ್ಗ : Sarvakar photo in Shimoga : ಶಿವಮೊಗ್ಗದಲ್ಲಿ ವೀರ ಸಾರ್ವಕರ್ ಫೋಟೋ ಇಡುವ ವಿಚಾರವಾಗಿ ಮೊನ್ನೆ ಮೊನ್ನೆಯಷ್ಟೇ ಸೆಂಟ್ರಲ್ ಮಾಲ್ನಲ್ಲಿ ಎಸ್ಡಿಪಿಐ ಕಾರ್ಯಕರ್ತರು ಹಾಗೂ ಮಾಲ್ನ ಸಿಬ್ಬಂದಿ ನಡುವೆ ವಾಗ್ವಾದ ಏರ್ಪಟ್ಟಿತ್ತು . ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದ್ದ ಬಿಜೆಪಿ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಸಾರ್ವಕರ್ ಫೋಟೋವನ್ನು ಸ್ವಾತಂತ್ರ್ಯ ಹೋರಾಟಗಾರರ ಸಾಲಿನಿಂದ ತೆಗೆಯದಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಈ ಗಲಾಟೆಗಳ ಬೆನ್ನಲ್ಲೇ ಇದೀಗ ಮತ್ತೆ ಸಾರ್ವಕರ್ ಫೋಟೋ ವಿಚಾರವಾಗಿ ಶಿವಮೊಗ್ಗದಲ್ಲಿ ಮತ್ತೆ ಕಿರಿಕ್ ಉಂಟಾಗಿದೆ,
ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಎರಡು ಕೋಮಿನ ನಡುವೆ ಗಲಾಟೆ ಏರ್ಪಟ್ಟಿದ್ದು ಸಾರ್ವಕರ್ ಫೋಟೋವನ್ನು ತೆಗೆದು ಟಿಪ್ಪು ಸುಲ್ತಾನ್ರ ಫೋಟೋವನ್ನು ಇಡಲು ಒಂದು ಗುಂಪು ಮುಂದಾಗಿತ್ತು. ಸಾರ್ವಕರ್ ಫೋಟೋವನ್ನು ತೆಗೆಯಲು ಒಪ್ಪಿದ ಪೊಲೀಸರು ಟಿಪ್ಪು ಫೋಟೋವನ್ನು ಇಡಲು ನಿರಾಕರಿಸಿದ್ದರು. ಈ ವೇಳೆಯಲ್ಲಿ ಎರಡು ಕೋಮಿನ ಜೊತೆಯಲ್ಲಿ ಜಟಾಪಟಿ ಉಂಟಾಗಿದೆ.
ಎರಡೂ ಕೋಮಿನವರು ಶಾಂತವಾಗಿ ವರ್ತಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಹಿಂದೂ ಕಾರ್ಯಕರ್ತರು ಕೂಡ ಪ್ರತಿಭಟನೆಗೆ ಇಳಿದಿದ್ದಾರೆ, ಟಿಪ್ಪು ಫೋಟೋವನ್ನು ಇಡಲೇಬೇಕೆಂದು ಆಗ್ರಹಿಸಿ ಮುಸ್ಲಿಂ ಸಂಘಟನೆಯ ಯುವಕರು ಗಲಾಟೆ ಆರಂಭಿಸಿದ್ದರು. ಪೊಲೀಸರನ್ನೂ ಲೆಕ್ಕಿಸದೇ ಸಾರ್ವಕರ್ ಫ್ಲೆಕ್ಸ್ನ್ನು ಕಿತ್ತೆಸೆಯಲು ಮುಸ್ಲಿಂ ಯುವಕರು ಮುಂದಾಗಿದ್ದರು. ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಸಾರ್ವಕರ್ ಫೋಟೋದ ವಿಚಾರವಾಗಿ ಉಂಟಾದ ಗಲಾಟೆಯನ್ನು ತಹಬದಿಗೆ ತರಲು ಸಧ್ಯ ಶಿವಮೊಗ್ಗದ ನಗರ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೆ ತರಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ನಗರದಾದ್ಯಂತ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಅನ್ಯಕೋಮಿನ ಯುವಕನಿಗೆ ಚಾಕು ಇರಿತ :
ಸಾರ್ವಕರ್ ಫೋಟೋ ಗಲಾಟೆ ವಿಚಾರದ ನಡುವೆಯೇ ಶಿವಮೊಗ್ಗದಲ್ಲಿ ಅನ್ಯಕೋಮಿನ ತಂಡವು ಯುವಕನಿಗೆ ಚಾಕು ಇರಿದಿದ್ದು ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ. ಶಿವಮೊಗ್ಗ ಗಾಂಧಿ ಬಜಾರ್ನಲ್ಲಿ ಈ ಘಟನೆ ಸಂಭವಿಸಿದೆ. ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿಯಲಾಗಿದ್ದು ಈತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನು ಓದಿ : Minister Umesh Katthi : ಯಾರ ನೇತೃತ್ವದಲ್ಲಿ ಚುನಾವಣೆ ಎದುರಿಸಬೇಕೆಂಬುದಕ್ಕೆ ಕಾಂಗ್ರೆಸ್ನಲ್ಲಿ ಸ್ಪಷ್ಟತೆಯಿಲ್ಲ : ಕತ್ತಿ ವ್ಯಂಗ್ಯ
Riot over Sarvakar photo in Shimoga: A young man was stabbed