Independence Day: ವಿದ್ಯಾರ್ಥಿ ಜೀವನ ದಲ್ಲಿ   ಸ್ವಾತಂತ್ರ್ಯ ಹೋರಾಟಗಾರರನ್ನು  ಸ್ಮರಿಸಿ ಕೊಂಡು ದೇಶ ಪ್ರೇಮ ಬೆಳೆಸಿ ಕೊಳ್ಳಿ

Independence Day:” ವಿದ್ಯಾರ್ಥಿ ಜೀವನದಲ್ಲಿ  ನಾವೆಲ್ಲ  ದೇಶ ಪ್ರೇಮ ವನ್ನು  ಬೆಳೆಸಿಕೊಂಡು, ಸ್ವತಂತ್ರ ಹೋರಾಟ ದಲ್ಲಿ  ಭಾಗವಹಿಸಿ ವೀರ ಮರಣ ವನ್ನು ಹೊಂದಿದ  ವೀರ ಯೋಧರನ್ನು  ಸ್ಮರಿಸಿ ಕೊಂಡು  ನಾವು ಇಂದು  ಆದರ್ಶ ಜೀವನ ನೆಡೆಸ ಬೇಕೆಂದು”,ಬಾರಕೂರು  (Barkur) ವಿದ್ಯಾಭಿವೃದ್ಧಿನಿ ಸಂಘ  ಸದಸ್ಯ ರಾದ ಶ್ರೀ ವಿಶ್ವ ನಾಥ್ ಶೆಟ್ಟಿ ರವರು ಶ್ರೀ  ವಿಧ್ಯೇಶ ವಿದ್ಯಾ ಮಾನ್ಯ ನೇಷನಲ್  ಆಂಗ್ಲ ಮಾಧ್ಯಮ ಶಾಲೆ ಹೇರಾಡಿ  (Heradi English Medium School) ಬಾರಕೂರು ನಲ್ಲಿ(Barkur) 75ನೇ ಯ  ಸ್ವಾತಂತ್ರ್ಯ ದಿನಾಚರಣೆಯ (Independence Day) ಪ್ರಯುಕ್ತ  ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ,  ವಿದ್ಯಾರ್ಥಿ ಗಳಿಗೆ  ಕರೆ ಕೊಟ್ಟರು. 

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರಾಗಿರುವ Dr  B. M ಸೋಮಯಾಜಿ, ಶಾಲಾ ಮುಖ್ಯಸ್ಥ ರಾದ ಶ್ರೀ ಮತಿ  ಪ್ರೀತಿ ರೇಖಾ,ಶಾಲಾ ಮುಖಂಡ  ಸಮರ್ಥ್,  ಶಾಲೆಯ ಎಲ್ಲಾ  ಶಿಕ್ಷಕ, ಶಿಕ್ಷಕೇತರರು , ಪೋಷಕರು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು,,ಶಾಲಾ  ವಿದ್ಯಾರ್ಥಿ ಗಳು  ಸ್ವಾತಂತ್ರ್ಯ  ಹೋರಾಟಗಾರರ  ಉಡುಪನ್ನು  ಧರಿಸಿ ಕಾರ್ಯಕ್ರಮ ವನ್ನು  ಮೆರಗು ಗೊಳಿಸಿದರು.

ಈ ಕಾರ್ಯಕ್ರಮ ವನ್ನು  ಅವನಿ ನಿರೂಪಿಸಿ, ಸ್ಪೂರ್ತಿ ಶೆಟ್ಟಿ ಸ್ವಾಗತಿಸಿ, ಸ್ಪೂರ್ತಿ ಕೆ  ಬಹುಮಾನ  ವಿಜೇತರ ಪಟ್ಟಿಯನ್ನು  ವಾಚಿಸಿದರು, ಪ್ರಾರ್ಥನಾ  ಧನ್ಯವಾದ ಕಾರ್ಯಕ್ರಮ ನೆರೆವೇರಿಸಿ ಕೊಟ್ಟರು,   ಶಾಲಾ ವಿದ್ಯಾರ್ಥಿ ಗಳಿಗೆ   ಕೆನರಾ ಬ್ಯಾಂಕ್ ನ  ಸೀನಿಯರ್ ಮ್ಯಾನೇಜರ್ ಆಗಿರುವ  ವಜ್ರೇಶ್ವರಿ ರವರು   ಸಿಹಿತಿಂಡಿ  ಕೊಡುಗೆ ಯನ್ನು  ನೀಡಿದರು. ಈ ಕಾರ್ಯಕ್ರಮ ವನ್ನು  ಶಿಕ್ಷಕಿ  ಶ್ರೀಮತಿ ಜ್ಯೋತಿ ಶೆಟ್ಟಿ, ಶ್ರೀಮತಿ ರಾಧಿಕಾ,  ಶ್ರೀಮತಿ ಜ್ಯೋತಿ   ಸಂಯೋಜನೆ ಮಾಡಿದರು.

ಇದನ್ನು ಓದಿ :ನಮ್ಮ ಸರ್ಕಾರ ಚೆನ್ನಾಗಿಯೇ ನಡೆಯುತ್ತಿದೆ, ಮಾಧುಸ್ವಾಮಿ ಹೇಳಿಕೆ ಬಗ್ಗೆ ಗೊತ್ತಿಲ್ಲ : ಸಚಿವ ಶಿವರಾಮ ಹೆಬ್ಬಾರ್​​

Comments are closed.