rocking star Yash Radhika : ಯಶ್ ರಾಧಿಕಾ ಸ್ವಾತಂತ್ರ್ಯ ಸಂಭ್ರಮ : ಫ್ಯಾಮಿಲಿ ಜೊತೆ ಧ್ವಜಾರೋಹಣ ನಡೆಸಿದ ರಾಕಿಂಗ್ ಸ್ಟಾರ್

Rocking star Yash Radhika : ಸೆಲೆಬ್ರೆಟಿಗಳಾದ ಮೇಲೆ ಅವರ ಬದುಕು ಅಭಿಮಾನಿಗಳಿಗೆ, ಅನುಯಾಯಿಗಳಿಗೆ ಸದಾ ಕುತೂಹಲ‌ಹುಟ್ಟಿಸುವಂತೇ ಇರುತ್ತೆ. ಹೀಗಾಗಿ ಜವಾಬ್ದಾರಿಯಿಂದ ನಡೆದು ಕೊಳ್ಳೋ ಅಗತ್ಯವಿರುತ್ತೆ. ಇದಕ್ಕೆ ಯಶ್ ಕುಟುಂಬವೂ ಹೊರತಲ್ಲ. ಹೀಗಾಗಿ ಯಶ್ ಮತ್ತು ರಾಧಿಕಾ ಸದಾ ಅನುಕರಣೀಯವಾದ ಆದರ್ಶ ವನ್ನೇ ಅಭಿಮಾನಿಗಳಿಗೆ ನೀಡುತ್ತ ಬಂದಿದ್ದಾರೆ. ದೇಶದ ಸ್ವಾತಂತ್ರ್ಯೋತ್ಸವದ ಅಮೃತ‌ ಮಹೋತ್ಸವ ಸಂಭ್ರಮದಲ್ಲೂ ಯಶ್ ಮತ್ತು ರಾಧಿಕಾ ಜೊತೆಯಾಗಿ ಧ್ವಜಾರೋಹಣ ನೆರವೇರಿಸಿ ದೇಶಕ್ಕೆ ಗೌರವ ಸಲ್ಲಿಸಿದ್ದಾರೆ.

ಹೌದು ಸ್ಯಾ‌ಂಡಲ್ ವುಡ್ ನ ಮೋಸ್ಟ್ ರಾಕಿಂಗ್ ಜೋಡಿ ಯಶ್ ಮತ್ತು ರಾಧಿಕಾ ಸದಾ ಅಭಿಮಾನಿಗಳಿಗೆ ಪ್ರೋತ್ಸಾಹದಾಯಕವಾದ ಕಾರ್ಯಗಳನ್ನೇ ಮಾಡುತ್ತ ಬಂದಿದ್ದಾರೆ. ದೇಶದ ಸ್ವಾತಂತ್ರ್ಯ ಸಂಭ್ರಮದಲ್ಲಿ ಶೃದ್ಧೆಯಿಂದ ಭಾಗಿಯಾದ ಈ ಸ್ಟಾರ್ ಫ್ಯಾಮಿಲಿ ಮನೆಯ ಟೆರೇಸ್ ನಲ್ಲಿ ಧ್ವಜ ಹಾರಿಸಿ ದೇಶದ ಅಮೃತ ಗಳಿಗೆಯಲ್ಲಿ ಪಾಲ್ಗೊಂಡಿದೆ. ಮಲ್ಲೇಶ್ವರಂ ನಲ್ಲಿರೋ ತಮ್ಮ ಐಷಾರಾಮಿ ನಿವಾಸದಲ್ಲಿ ಯಶ್ ಮತ್ತು ರಾಧಿಕಾ ಮಕ್ಕಳಾದ ಆರ್ಯಾ ಹಾಗೂ ಯಥರ್ವ್ ಜೊತೆ ಧ್ವಜಾರೋಹಣ ಮಾಡಿದ್ದಾರೆ. ಮಾತ್ರವಲ್ಲ ಇಬ್ಬರೂ ಮಕ್ಕಳಿಗೆ ಒಂದೊಂದು ಧ್ವಜ ನೀಡಿ ಪೋಟೋಗೆ ಪೋಸ್ ಕೊಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ನಟಿ ರಾಧಿಕಾ ಈ ಪೋಟೋಗಳನ್ನು ಅಭಿಮಾನಿಗಳಿಗಾಗಿ ಅಪ್ಡೇಟ್ ಮಾಡಿದ್ದಾರೆ. ಈ ಸುಂದರ ಸ್ಟಾರ್ ದಂಪತಿಗಳು ದೇಶಭಕ್ತಿಯಿಂದ ಧ್ವಜಾರೋಹಣ ನಡೆಸಿದ ಪೋಟೋ ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ. ಪೋಟೋಸ್ ಕೂಡ ಸಖತ್ ವೈರಲ್ ಆಗಿದೆ. ರಾಧಿಕಾ ಸ್ಯಾಂಡಲ್ ವುಡ್ ನಟಿಯಾಗಿದ್ದರೂ ತಮ್ಮ ಯಾವುದೇ ಸಂಪ್ರದಾಯವನ್ನು ಬಿಟ್ಟಿಲ್ಲ. ಗೌಡ ಸಂಪ್ರದಾಯದಂತೆ ವರಮಹಾಲಕ್ಷ್ಮೀ ವ್ರತ ಹಾಗೂ ತಾಯಿ ಮನೆಯ ಕೊಂಕಣಿ ಸಂಪ್ರದಾಯದಂತೆ ತುಳಸಿ ಪೂಜೆಯ ವ್ರತವನ್ನು ನೆರವೇರಿಸುತ್ತಾರೆ.

ಮೊನ್ನೆಯಷ್ಟೇ ರಾಧಿಕಾ ಪಂಡಿತ್ ಅದ್ದೂರಿಯಾಗಿ ಮಕ್ಕಳೊಂದಿಗೆ ವರಮಹಾಲಕ್ಷ್ಮೀ ಪೂಜೆ ಮಾಡಿ ಪೋಟೋ ಶೇರ್ ಮಾಡಿದ್ದರು. ಈಗ ಸ್ವಾತಂತ್ರ್ಯೋತ್ಸವದ ಪೋಟೋ ಹಂಚಿ ಕೊಂಡಿದ್ದಾರೆ. ಸದ್ಯ ನಟ ಯಶ್ ಕೆಜಿಎಫ್-2 ಯಶಸ್ಸಿನ ಗೆಲುವಿನಲ್ಲಿ ತಮ್ಮ ಮುಂದಿನ ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ರಾಧಿಕಾ ಮಾತ್ರ ಇನ್ನೂ ತಾಯ್ತನದ ಬ್ರೇಕ್ ನಲ್ಲೇ ಇದ್ದು, ಮರಳಿ ಚಿತ್ರರಂಗಕ್ಕೆ ಬರೋ ಮನಸ್ಸು ಮಾಡಿಲ್ಲ. ಇನ್ನೂ ಸಾಮಾಜಿಕ ಕೆಲಸದ ವಿಚಾರಕ್ಕೆ ಬರೋದಾದರೇ ನಟ ಯಶ್ ತಮ್ಮ ಯಶೋಮಾರ್ಗ ಫೌಂಡೇಶನ್ ಮೂಲಕ ಇದುವರೆಗೂ ರಾಜ್ಯದ ಹಲವು ಕೆರೆಗಳಿಗೆ ನೀರು ತುಂಬಿಸಿದ್ದರು. ಈಗ ತಮ್ಮ ಫೌಂಡೆಶನ್ ಮೂಲಕ ಪುಷ್ಕರಣಿಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ : Bhojpuri actress Namrata Malla : ಬಿಕನಿಯಲ್ಲಿ ಯೋಗಾಭ್ಯಾಸ, ಮನಸೆಳೆದ ಭೋಜಪುರಿ ನಟಿ ನಮ್ರಿತಾ ಮಲ್ಲಾ

ಇದನ್ನೂ ಓದಿ : Aamir Khan joins Har Ghar Tiranga : ಮಿಸ್ಟರ್ ಫರ್ಪೆಕ್ಟ್ ಮನೆ ಮೇಲೆ ತ್ರಿವರ್ಣ ಧ್ವಜ : ಇದು ಸಿನಿಮಾ ಗೆಲ್ಲಿಸೋ ಗಿಮಿಕ್ ಎಂದ ಜನ

rocking star Yash Radhika was flag hoisted with her family during Independence Day celebrations

Comments are closed.