ಬೆಂಗಳೂರು : Rules for Public Ganesha Festival : ಗಣೇಶೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಸಾರ್ವಜನಿಕ ಗಣಪತಿಗಳನ್ನು ಕೂರಿಸಲು ಈಗಾಗಲೇ ಬಹುತೇಕ ತಯಾರಿಗಳು ಪೂರ್ಣಗೊಂಡಿದೆ. ಆದರೆ ಸಾರ್ವಜನಿಕ ಗಣೇಶೋತ್ಸವದ ನೆಪದಲ್ಲಿ ಸಾರ್ವಜನಿಕರಿಂದ ಬಲವಂತವಾಗಿ ಚಂದಾ ವಸೂಲಿ ಮಾಡುವವರಿಗೆ ನಗರ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ನಡೆಯಲಿರುವ ಗಣೇಶೋತ್ಸವದ ಪ್ರಯುಕ್ತ ಕಾರ್ಯಕ್ರಮ ಆಯೋಜಕರಿಗಾಗಿ ನಿಯಮಗಳನ್ನು ರೂಪಿಸಲು ನಗರ ಪೊಲೀಸ್ ವಿಭಾಗ ಸಭೆಯನ್ನು ನಡೆಸಿದೆ. ಈ ಸಭೆಯಲ್ಲಿ ಪೊಲೀಸರು ಗಣೇಶ ಪ್ರತಿಷ್ಠಾಪನೆ ಹೆಸರಿನಲ್ಲಿ ಸಾರ್ವಜನಿಕರಿಂದ ಬಲವಂತವಾಗಿ ಹಣ ವಸೂಲಿ ಮಾಡುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜಾರಿ ತರಬೇಕಾಗುತ್ತದೆ ಎಂದು ವಾರ್ನಿಂಗ್ ನೀಡಿದ್ದಾರೆ. ಅಲ್ಲದೇ ಗಣೇಶೋತ್ಸವದಲ್ಲಿ ಯಾವುದೇ ಕಾರಣಕ್ಕೂ ಕೋಮು ಸೌಹಾರ್ದವನ್ನು ಕೆಡವುವಂತಹ ಘಟನೆಗಳು ನಡೆಯುವಂತಿಲ್ಲ ಎಂದು ಹೇಳಲಾಗಿದೆ. ನಗರ ಪೊಲೀಸ್ ಆಯುಕ್ತ ಸಿ.ಎಚ್ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 8 ವಿಭಾಗದ ಡಿಸಿಪಿಗಳು, ಎಸಿಪಿ ಹಾಗೂ ಇನ್ಸ್‌ಪೆಕ್ಟರ್‌ಗಳು ಭಾಗಿಯಾಗಿದ್ದರು.
ಸಭೆಯಲ್ಲಿ ಜಾರಿ ಮಾಡಲಾದ ಗಣೇಶೋತ್ಸವ ನಿಯಮಗಳ ವಿವರಣೆ ಇಲ್ಲಿದೆ ನೋಡಿ :
- ವಿವಾದಿತ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಇರೋದಿಲ್ಲ.
- ಖಾಸಗಿ ಜಾಗಗಳಲ್ಲಿ ಮಾಲೀಕರ ಅನುಮತಿ ಪಡೆದು ಗಣೇಶನನ್ನು ಪ್ರತಿಷ್ಠಾಪನೆ ಮಾಡಬೇಕು
- ಬಿಬಿಎಂಪಿ ಏಕಗವಾಕ್ಷಿ ಪದ್ಧತಿಯಲ್ಲಿ ಅನುಮತಿ ಕಡ್ಡಾಯ
- ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ರವರೆಗೆ ಧ್ವನಿವರ್ದಕಗಳನ್ನು ಬಳಸುವಂತಿಲ್ಲ.
- ಗಣೇಶನನ್ನು ಪ್ರತಿಷ್ಠಾಪಿಸುವ ಮುನ್ನ ಸ್ಥಳೀಯ ಠಾಣೆಯ ಅನುಮತಿ ಪಡೆಯುವುದು ಕಡ್ಡಾಯ
- ಕಂಡ ಕಂಡಲ್ಲಿ ಫ್ಲೆಕ್ಸ್, ಬಂಟಿಂಗ್ಸ್, ಬ್ಯಾನರ್ ಕಟ್ಟುವಂತಿಲ್ಲ.
- ಬೆಂಕಿ ನಂದಿಸುವ ಬೆಂಕಿ ನಂದಕ, ಮರಳಿನ ವ್ಯವಸ್ಥೆ ಇರಬೇಕು
- ಗಣೇಶ ಪ್ರತಿಷ್ಢಾಪನೆ ಸ್ಥಳದಲ್ಲಿ ಸಿಸಿ ಕ್ಯಾಮರಾ ಕಡ್ಡಾಯ
- ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಆಯೋಜಕರ ಪರವಾಗಿ ಕಾರ್ಯಕರ್ತರ ನಿಗಾ
- ವಿದ್ಯುತ್ ವ್ಯವಸ್ಥೆ ಸಮರ್ಪಕವಾಗಿರಬೇಕು. ಎಲೆಕ್ಟ್ರಿಷಿಯನ್ ಸ್ಥಳದಲ್ಲಿ ಇರಬೇಕು.
- ಪೊಲೀಸರ ಅನುಮತಿ ಪಡೆದು ಸಾಂಸ್ಕೃತಿಕ ಕಾರ್ಯಕ್ರಮ
- ಗಣೇಶ ಮೂರ್ತಿ ವಿಸರ್ಜನಾ ವೇಳೆ ನಿಯಮಗಳು:
- ಹೆಣ್ಣು ಮಕ್ಕಳಿಗೆ ಕೀಟಲೆ ಮಾಡುವಂತಿಲ್ಲ.
- ಅಹಿತಕರ ಘಟನೆ ನಡೆಸುವಂತಿಲ್ಲ.
- ಲೇಸರ್ ಪ್ರಾಜೆಕ್ಷನ್ಗೆ ಅನುಮತಿ ಇಲ್ಲ.
- ಆಯೋಜಕರು ಹಾಗೂ ಸ್ವಯಂ ಸೇವಕರು ಐಡಿ ಕಾರ್ಡ್ ಧರಿಸಬೇಕು.
- ಸೂಕ್ಷ್ಮಸ್ಥಳಗಳಲ್ಲಿ ಸಿಡಿಮದ್ದು, ಪಟಾಕಿ ಸಿಡಿಸಬಾರದು.
ಇದನ್ನು ಓದಿ : POLICE COMPLAINT ON WOMAN : ಪತಿಯ ಮನೆಯ 10 ಲಕ್ಷ ರೂ. ದೋಚಿ ತವರು ಮನೆಗೆ ಎಸ್ಕೇಪ್ ಆದ ಪತ್ನಿ
ಇದನ್ನೂ ಓದಿ : Modi praised Karnataka’s lake : ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕರ್ನಾಟಕದ ಕೆರೆಯನ್ನು ಹೊಗಳಿದ ಪ್ರಧಾನಿ ಮೋದಿ
Rules for Public Ganesha Festival in Bangalore