fake police journalists arrested :ನಕಲಿ ಪೊಲೀಸ್, ಪತ್ರಕರ್ತರ ಖತರ್ನಾಕ್ ಗ್ಯಾಂಗ್ ಅಂದರ್

ಬೆಳಗಾವಿ : fake police journalists arrested : ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಕಲಿ ಪೊಲೀಸ್ ಮತ್ತು ನಕಲಿ ಪತ್ರಕರ್ತರ ಖತರ್ನಾಕ್ ಗ್ಯಾಂಗ್ ಒಂದು ಅಂದರ್ ಆಗಿದೆ. ಕಿತ್ತೂರು ಬಳಿಯ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ನಿಲ್ಲಿಸಿ ಹಣ ವಸೂಲಿ ಮಾಡುತ್ತಿದ್ದ ಈ ಗ್ಯಾಂಗ್ ನ್ನು ಕಿತ್ತೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತ ಆರೋಪಿಗಳನ್ನು ಸೆಹಲ್ ಅಹ್ಮದ್ ತರಸಗಾರ, ನಯೀಮ್ ಮುಲ್ಲಾ, ಸರ್ವೇಶ್ ತುಡುವೇಕರ, ಬಸವರಾಜ ಪಾಟೀಲ್, ಜಾಕೀರ ಹುಸೇನ್ ಮನಿಯಾರ ಎಂದು ಹೆಸರಿಸಲಾಗಿದೆ. ಈ ಖತರ್ನಾಕ್ ಖದೀಮರು ಕೋಳಿ ಮೊಟ್ಟೆ ಸಾಗಿಸುತ್ತಿದ್ದ ಬೆಳಗಾವಿ ನಿವಾಸಿ ಅತಾವುಲ್ಲಾ ಎಂಬನಿಂದ ಸುಲಿಗೆ ಮಾಡಿದ್ದರು. ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದೀಯಾ ಎಂದು ವಾಹನ ನಿಲ್ಲಿಸಿ ಬ್ಲ್ಯಾಕ್ ಮೇಲ್ ಮಾಡಿ 4 ಲಕ್ಷದ 79 ಸಾವಿರ ಹಣವನ್ನು ವಸೂಲಿ ಮಾಡಿದ್ದರು. ಈ ಬಗ್ಗೆ ಅತಾವುಲ್ಲಾ ಪೊಲೀಸ್ ದೂರು ನೀಡಿದ್ದು ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ.

ಬಂಧಿತರಿಂದ 70 ಸಾವಿರ ಹಣ, ಕೃತ್ಯಕ್ಕೆ ಬಳಸಿದ್ದ ಇಂಡಿಕಾ ಕಾರು, ನಕಲಿ ಪ್ರೆಸ್ ಗುರುತಿನ ಚೀಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನು ನಾಲ್ವರು ಭಾಗಿಯಾಗಿದ್ದು ಅವರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ. ವಸೂಲಿ ಮಾಡಿದ ಉಳಿದ ನಾಲ್ಕು ಲಕ್ಷ ರೂಪಾಯಿ, ಇತರ ನಕಲಿ ಗುರುತಿನ ಚೀಟಿಯ ಪತ್ತೆ ಕಾರ್ಯವನ್ನು ಪೊಲೀಸರು ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಮಾಡಬಾರದ ಕೆಲಸ ಮಾಡೋಕೆ ಹೋಗಿ ಖತರ್ನಾಕ್ ಗಳು ಅಂದರ್ ಆಗಿದ್ದಾರೆ.

clashes on live in relationship :ಲಿವ್​ ಇನ್​ ರಿಲೇಶನ್​ಶಿಪ್​​ನಲ್ಲಿ ಬಿರುಕು : ಸಂಗಾತಿಯಿಂದಲೇ ವ್ಯಕ್ತಿಗೆ ಶಾಕ್​ ಟ್ರೀಟ್​ಮೆಂಟ್​

ಬೆಂಗಳೂರು : clashes on live in relationship : ಲಿವ್​ ಇನ್​ ರಿಲೇಶನ್​ಶಿಪ್​ಗಳಲ್ಲಿ ನಂಬಿಕೆಯೊಂದನ್ನು ಬಿಟ್ಟು ಇನ್ಯಾವ ಆಧಾರವೂ ಇರೋದಿಲ್ಲ. ಇಷ್ಟವಿದ್ದಲ್ಲಿ ಇರಬಹುದು. ಇಲ್ಲ ಬಿಟ್ಟು ಹೋಗಬಹುದು ಎಂಬಂತಹ ಈ ಸಂಬಂಧಗಳನ್ನು ಯಾವ ಕಾನೂನು ಕೂಡ ರಕ್ಷಿಸುವುದಿಲ್ಲ. ಅದೇ ರೀತಿ ಬೆಂಗಳೂರಿನಲ್ಲಿಯೂ (Bengaluru ) ಒಂದು ಘಟನೆ ನಡೆದಿದ್ದು ಲಿವ್​​ ಇನ್​ ರಿಲೇಶನ್​ಶಿಪ್​ನಲ್ಲಿದ್ದ ಪ್ರಿಯತಮೆಯೇ ತನ್ನ ಪ್ರಿಯಕರನಿಗೆ ಶಾಕ್​ ಟ್ರೀಟ್​ಮೆಂಟ್​ ನೀಡಿ ಹಿಂಸೆ ನೀಡಿದ್ದಾರೆ. ಆಗಸ್ಟ್​ 16ರಂದು ನಡೆದಿರುವ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.

ಎಲೆಕ್ಟ್ರಾನಿಕ್ಸ್​ಉಪಕರಣಗಳ ಸರಬರಾಜು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹದೇವ್​ ಪ್ರಸಾದ್​ ಹಾಗೂ ಮೊಬೈಲ್​ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಕ್ಲಾರಾ ನಾಲ್ಕು ವರ್ಷಗಳ ಹಿಂದೆ ಭೇಟಿಯಾಗಿದ್ದರು. ಇಬ್ಬರ ನಡುವೆ ಪ್ರೀತಿ ಮೂಡಿದ ಬಳಿಕ ಪತಿಯನ್ನು ತೊರೆದಿದ್ದ ಕ್ಲಾರಾ ಮಹದೇವ ಪ್ರಸಾದ್​ ಜೊತೆಯಲ್ಲಿ ಲಿವ್​ ಇನ್​ ಸಂಬಂಧದಲ್ಲಿದ್ದಳು.

ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಕ್ರಮೇಣ ಮಹದೇವ ಪ್ರಸಾದ್​ ಕ್ಲಾರಾ ಶೀಲವನ್ನು ಶಂಕಿಸಲು ಆರಂಭಿಸಿದ್ದಾನೆ. ಈ ಮಧ್ಯದಲ್ಲಿ ಪತಿಯ ಜೊತೆಗಿನ ಸಂಬಂಧ ಸರಿಮಾಡಿಕೊಂಡ ಕ್ಲಾರಾ ವಾಪಸ್​ ತನ್ನ ಪತಿಯ ಜೊತೆ ತೆರಳಿದ್ದಾಳೆ. ಇದನ್ನು ಸಹಿಸದ ಮಹದೇವ ಪ್ರಸಾದ್​ ನೀನು ನನ್ನೊಂದಿಗೆ ಇರಬೇಕು ಎಂದು ಕ್ಲಾರಾಳನ್ನು ಪೀಡಿಸಲು ಆರಂಭಿಸಿದ್ದ.

ಮಹದೇವ ಪ್ರಸಾದ್​ ನೀಡುತ್ತಿರುವ ಕಿರುಕುಳದ ಬಗ್ಗೆ ಕ್ಲಾರಾ ತನ್ನ ಸ್ನೇಹಿತೆ ಹೇಮಾವತಿ ಬಳಿ ಹೇಳಿಕೊಂಡಿದ್ದಾಳೆ. ಹೇಗಾದರೂ ಮಾಡಿ ಮಹದೇವ್​ಗೆ ಪಾಠ ಕಲಿಸಬೇಕೆಂದು ಆರೋಪಿಗಳು ಪ್ಲಾನ್​ ರೂಪಿಸಿದ್ದರು. ಅದರಂತೆ ಆಗಸ್ಟ್​ 16ರಂದು ಕ್ಲಾರಾ ಮಹದೇವ್​ ಪ್ರಸಾದ್​ಗೆ ಕರೆ ಮಾಡಿದ್ದಾಳೆ. ನಿನ್ನನ್ನು ಭೇಟಿ ಮಾಡಬೇಕೆಂದು ಕರೆಸಿಕೊಂಡಿದ್ದಾಳೆ.

ಕ್ಲಾರಾಳನ್ನು ನೋಡಲು ಬಂದ ಮಹದೇವ ಪ್ರಸಾದ್​ನನ್ನು ಕ್ಲಾರಾ, ಆಕೆಯ ಪತಿ ಮಧು, ಹೇಮಾವತಿ ಹಾಗೂ ಆಕೆಯ ಪತಿ ಸಂತೋಷ್​ ಸೇರಿ ಕಿಡ್ನಾಪ್​ ಮಾಡಿ ಗೋದಾಮಿಗೆ ಕರೆದೊಯ್ದಿದ್ದಾರೆ. ಇಲ್ಲಿ ಈತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಮಾತ್ರವಲ್ಲದೇ ವಿದ್ಯುತ್​ ಶಾಕ್​ ನೀಡಿದ್ದಾರೆ. ಇದರಿಂದ ಆಸ್ಪತ್ರೆ ಸೇರಿದ್ದ ಮಹದೇವ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆಯೇ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ. ಮಹದೇವ ಪ್ರಸಾದ್​ ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ಹನುಮಂತನಗರ ಠಾಣಾ ಪೊಲೀಸರು ಕ್ಲಾರಾ, ಹೇಮಾವತಿ, ಮಧು, ಸಂತೋಷ್‌ ಗೌಡ ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನು ಓದಿ : Student Kills Friend : ಶಾಲೆ ಹೋಗುವುದರಿಂದ ತಪ್ಪಿಸಿಕೊಳ್ಳಲು ಸ್ನೇಹಿತನನ್ನೇ ಕೊಂದು ಜೈಲು ಸೇರಿದ ಬಾಲಕ

ಇದನ್ನೂ ಓದಿ : POLICE COMPLAINT ON WOMAN : ಪತಿಯ ಮನೆಯ 10 ಲಕ್ಷ ರೂ. ದೋಚಿ ತವರು ಮನೆಗೆ ಎಸ್ಕೇಪ್​ ಆದ ಪತ್ನಿ

Khatarnak gang of fake police, journalists arrested

Comments are closed.