ಸೋಮವಾರ, ಏಪ್ರಿಲ್ 28, 2025
HomebusinessMukesh Ambani : ರಿಲಯನ್ಸ್​ ರೀಟೇಲ್​ ವ್ಯವಹಾರಗಳ ಮುಖ್ಯಸ್ಥೆಯಾಗಿ ಮುಕೇಶ್​ ಅಂಬಾನಿ ಪುತ್ರಿ ಇಶಾ ನೇಮಕ

Mukesh Ambani : ರಿಲಯನ್ಸ್​ ರೀಟೇಲ್​ ವ್ಯವಹಾರಗಳ ಮುಖ್ಯಸ್ಥೆಯಾಗಿ ಮುಕೇಶ್​ ಅಂಬಾನಿ ಪುತ್ರಿ ಇಶಾ ನೇಮಕ

- Advertisement -

ಮಹಾರಾಷ್ಟ್ರ : Mukesh Ambani : ಕೋಟ್ಯಾಧಿಪತಿ ಮುಕೇಶ್​ ಅಂಬಾನಿ ಇಂದು ರಿಲಯನ್ಸ್​ ರಿಟೇಲ್​ ವ್ಯವಹಾರಕ್ಕೆ ತಮ್ಮ ಪುತ್ರಿ ಇಶಾರನ್ನು ಮುಖ್ಯಸ್ಥೆಯನ್ನಾಗಿ ನೇಮಿಸಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ. ಜೂನ್​ ತಿಂಗಳಲ್ಲಿ ಮುಕೇಶ್​ ಅಂಬಾನಿ ತಮ್ಮ ಪುತ್ರ ಆಕಾಶ್​ ಅಂಬಾನಿಯನ್ನು ರಿಲಾಯನ್ಸ್​ ಗುಂಪಿನ ಟೆಲಿಕಾಂ ಘಟಕದ ಅಧ್ಯಕ್ಷನನ್ನಾಗಿ ಘೋಷಣೆ ಮಾಡಿದ್ದರು.


ರಿಲಯನ್ಸ್​ ರಿಟೇಲ್​ ವ್ಯವಹಾರಗಳ ಮುಖ್ಯಸ್ಥೆಯಾಗಿ ಆಯ್ಕೆಯಾದ ಬಳಿಕ ರಿಲಯನ್ಸ್​ ಇಂಡಸ್ಟ್ರೀಸ್​ನ 45ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಇಶಾ ಅಂಬಾನಿ, ವಾಟ್ಸಾಪ್​ ಬಳಕೆ ಮಾಡಿಕೊಂಡು ಕಿರಾಣಿ ಸಾಮಗ್ರಿಗಳನ್ನು ಖರೀದಿ ಮಾಡುವ ಹಾಗೂ ಹಣ ಪಾವತಿ ಮಾಡುವ ಬಗ್ಗೆ ಮಾಹಿತಿಯನ್ನು ನೀಡಿದರು. ಈ ವ್ಯವಹಾರದ ಉದ್ದೇಶವು ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವುದು ಮತ್ತು ತಲುಪಿಸುವುದು ಮತ್ತು ಪ್ರತಿಯೊಬ್ಬ ಭಾರತೀಯನ ದೈನಂದಿನ ಅಗತ್ಯಗಳನ್ನು ಪೂರೈಸುವುದು, ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡುತ್ತದೆ ಎಂದು ಇಶಾ ಹೇಳಿದರು.


ಭಾರತದಲ್ಲಿರುವ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯನ್ನು ಇನ್ನಷ್ಟು ಪೋಷಿಸುವ ಬದ್ಧತೆಯನ್ನು ನಮ್ಮ ವ್ಯವಾಹರದಲ್ಲಿಟ್ಟುಕೊಂಡು ಶೀಘ್ರದಲ್ಲಿಯೇ ನಾವು ದೇಶಾದ್ಯಂತ ಆದಿವಾಸಿಗಳು ಹಾಗೂ ಇತರೆ ಬಡುಕಟ್ಟು ಜನಾಂಗಗಳು ಉತ್ಪಾದಿಸುವ ಸರಕುಗಳನ್ನು ಮಾರಾಟ ಮಾಡಲು ಆರಂಭಿಸಲಿದ್ದೇವೆ ಎಂದು ಇಶಾ ಅಂಬಾನಿ ಹೇಳಿದ್ದಾರೆ.


ಇದರಿಂದ ಉದ್ಯೋಗ ಹಾಗೂ ಉದ್ಯಮಶೀಲತೆಗೆ ಲಾಭದಾಯಕ ಅವಕಾಶಗಳು ಸಿಗುವುದರ ಜೊತೆಯಲ್ಲಿ ಭಾರತೀಯ ಕುಶಲ ಕರ್ಮಿಗಳು ಅದರಲ್ಲೂ ವಿಶೇಷವಾಗಿ ಮಹಿಳೆಯರ ಪ್ರತಿಭೆ , ಕೌಶಲ್ಯ ಹಾಗೂ ಜ್ಞಾನದ ಮೂಲವನ್ನು ರಕ್ಷಿಸಲು ಸಹಾಯವಾಗುತ್ತದೆ ಎಂದು ಇಶಾ ಅಂಬಾನಿ ಹೇಳಿದ್ದಾರೆ.

ರಿಲಯನ್ಸ್​ ರಿಟೇಲ್​ ಈ ವರ್ಷ 2500 ಮಳಿಗೆಗಳನ್ನು ತೆರೆದಿದ್ದು ಈ ಸಂಖ್ಯೆಯನ್ನು 15 ಸಾವಿರಕ್ಕೆ ಏರಿಕೆ ಮಾಡುವ ಗುರಿಯನ್ನು ಹೊಂಇದೆ. “ವರ್ಷದಲ್ಲಿ, ಸ್ಟೇಪಲ್ಸ್, ಹೋಮ್, ಪರ್ಸನಲ್ ಕೇರ್ ಮತ್ತು ಜನರಲ್ ಮರ್ಚಂಡೈಸ್ ವಿಭಾಗಗಳಲ್ಲಿ ಹಲವಾರು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ನಾವು ನಮ್ಮದೇ ಬ್ರ್ಯಾಂಡ್‌ಗಳ ಉಪಸ್ಥಿತಿಯನ್ನು ಬಲಪಡಿಸಿದ್ದೇವೆ. ಇದಲ್ಲದೆ, ನಾವು ನಮ್ಮ WhatsApp-JioMart ಪಾಲುದಾರಿಕೆಯನ್ನು ಪ್ರಾರಂಭಿಸಿದ್ದೇವೆ” ಎಂದು ಇಶಾ ಹೇಳಿದರು.

ಇದನ್ನು ಓದಿ :Vijay Deverakonda : ವಿರಾಟ್​ ಕೊಹ್ಲಿ ಜೀವನಾಧಾರಿತ ಸಿನಿಮಾದಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ ವಿಜಯ್​ ದೇವರಕೊಂಡ

ಇದನ್ನೂ ಓದಿ : BIG BREAKING NEWS : ಜಿಯೋ ಗ್ರಾಹಕರಿಗೆ ಗುಡ್‌ ನ್ಯೂಸ್‌ : ‘ಜಿಯೋ 5G ಸೇವೆ’ ಘೋಷಿಸಿದ ಮುಕೇಶ್ ಅಂಬಾನಿ |Reliance AGM 2022

Mukesh Ambani Introduces Daughter Isha As Leader Of Reliance’s Retail Business

RELATED ARTICLES

Most Popular