JDS MLA Shivlinge Gowda : ಬಿಜೆಪಿಗರ ಹೇಳಿಕೆ ವಿರುದ್ಧ ಅರಸಿಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ

ಮಂಗಳೂರು : JDS MLA Shivlinge Gowda : ಬಿ.ಜೆ.ಪಿಗರ ಹೇಳಿಕೆ ವಿರುದ್ಧ ಹಾಸನ ಜಿಲ್ಲೆಯ ಅರಸಿಕೆರೆ ಜೆ.ಡಿ.ಎಸ್ ಶಾಸಕ ಶಿವಲಿಂಗೇಗೌಡ ಇಂದು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ. ಇತ್ತಿಚೇಗೆ ಅರಸಿಕೆರೆಯಲ್ಲಿ ಶಿವಲಿಂಗೇಗೌಡ ವಿರುದ್ದ ಬಿ.ಜೆ.ಪಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಬಿ.ಜೆ.ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹಾಗೂ ಎನ್.ಆರ್ ಸಂತೋಷ್ ಶಿವಲಿಂಗೇಗೌಡ ಅವರನ್ನು ರಾಗಿಕಳ್ಳ ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಶಿವಲಿಂಗೇಗೌಡ ಪ್ರತಿಭಟನೆ ನಡೆಸಿ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲು ಸವಾಲು ಹಾಕಿದ್ದರು. ಮುಂದಿನ ಸೋಮವಾರವೇ ಹೋಗಿ ಪ್ರಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಇದು ಶಿವಲಿಂಗೇಗೌಡ ತನ್ನ ಬೆಂಬಲಿಗರ ಜೊತೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಿದ್ದಾರೆ.

ಧರ್ಮಸ್ಥಳಕ್ಕೆ ಆಗಮಿಸಿದ ಶಿವಲಿಂಗೇಗೌಡ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿದರು. ಪುಣ್ಯ ನದಿಯಲ್ಲಿ ಸ್ನಾನ ಮುಗಿಸಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಆ ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದರು. ಹಾಸನ ಜಿಲ್ಲೆಯ ಮಳೆ-ಬೆಳೆ ಬಗ್ಗೆ ಹೆಗ್ಗಡೆಯವರ ಜೊತೆ ಮಾತುಕತೆ ನಡೆಸಿದರು. ಆದ್ರೆ ಈ ಸಂದರ್ಭ ಆಣೆ ಪ್ರಮಾಣದ ಬಗ್ಗೆ ಹೆಗ್ಗಡೆಯವರ ಜೊತೆ ಶಿವಲಿಂಗೇಗೌಡ ಚರ್ಚೆ ನಡೆಸಲಿಲ್ಲ. ಬಳಿಕ ದೇವಸ್ಥಾನದ ಒಳಗೆ ಹೋದ ಶಾಸಕರು ಪ್ರಮಾಣ ಮಾಡಿದರು.

ಆಣೆ ಪ್ರಮಾಣದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಶಿವಲಿಂಗೇಗೌಡ ನಾನು ರಾಗಿ ಕಳ್ಳ ಅಂದಿದ್ದರು ನಾನು ಏನೂ ಕದ್ದಿಲ್ಲ ಅಂತಾ ಆಣೆ ಪ್ರಮಾಣ ಮಾಡಿದ್ದೇನೆ. ನನಗೆ ಈ ಆರೋಪ ಯಾಕೆ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ ಎಂದು ಹೇಳಿದರು.

ಬಿಜೆಪಿಯ ರವಿಕುಮಾರ್ ಈ ಆರೋಪ ಮಾಡಿದ್ದಾರೆ, ಅವರನ್ನು ಕರೆದಿದ್ದೆ. ಹಾಗಾಗಿ ನಾನೇ ಬಂದು ಆಣೆ ಮಾಡಿದ್ದೇನೆ, ಅವರು ಬೇಕಾದ್ರೆ ಬರಲಿ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು. ಮಂಜುನಾಥನ ಮೇಲೆ ಆಣೆ ಲೋಕರೂಢಿ ಮಾತು. ಯಾರು ಬೇಕಾದರೂ ಸಾಕ್ಷಿ ಆಧಾರ ಇಲ್ಲದ ಆರೋಪ ಮಾಡಿದಾಗ ಆಣೆಗೆ ಬರೋದು ಲೋಕಾರೂಢಿ. ಇದರಲ್ಲಿ ಮಂಜುನಾಥ ಸ್ವಾಮಿ ಎಳೆದು ತರೋ ಮಾತು ಇಲ್ಲ ಎಂದು ಆಣೆ ಪ್ರಮಾಣದ ಬಗ್ಗೆ ಸ್ಪಷ್ಟನೆ ನೀಡಿದರು.

ನಾನು ರೈತರಿಗೆ ರಾಗಿ ಕೊಡಿಸಲು ಸಾಕಷ್ಟು ಹೋರಾಟ ಮಾಡಿದ್ದೇನೆ. ಆದರೆ ನನಗೆ ಈ ಆರೋಪ ಯಾಕೆ ಮಾಡಿದ್ದಾರೆ ಅಂತ ಅವರನ್ನೇ ಕೇಳಬೇಕು. ಹೆಗ್ಗಡೆಯವರ ಜೊತೆ ಈ ಬಗ್ಗೆ ಚರ್ಚೆ ಮಾಡಿಲ್ಲ, ಭೇಟಿ ಮಾಡಿದ್ದೇನೆ ಅಷ್ಟೇ. ನನ್ನ ಕ್ಷೇತ್ರದಲ್ಲಿ 15 ವರ್ಷ ನೆಮ್ಮದಿ ಇತ್ತು, ಆದರೆ ಈಗ ಎಲ್ಲವೂ ಆರಂಭವಾಗಿದೆ. ನಾನು ‌ಜೆಡಿಎಸ್ ಜೊತೆ ಕಳೆದ ಐದಾರು ತಿಂಗಳಿನಿಂದ ಅಂತರ ಕಾಯ್ದುಕೊಂಡಿದ್ದೇನೆ. ಅದಕ್ಕೆ ಕಾರಣ ಇದೆ, ವರಿಷ್ಟರ ಅಸಮಾಧಾನದ ಹಿನ್ನೆಲೆ ಸ್ವಲ್ಪ ಅಂತರ ಇದೆ. ನಾನು ಇಲ್ಲಿಗೆ ಬಂದಿರೋ ವಿಚಾರ ವರಿಷ್ಠರ ಯಾರ ಗಮನಕ್ಕೂ ತರಲಿಲ್ಲ. ಆದರೆ ಸ್ಥಳೀಯ ಮುಖಂಡರ ಜೊತೆ ಚರ್ಚೆ ಮಾಡಿ ಇಲ್ಲಿಗೆ ಬಂದಿದ್ದೇನೆ ಎಂದು ಶಿವಲಿಂಗೇಗೌಡ ಹೇಳಿದರು.

ಇದನ್ನು ಓದಿ : Ghulam Nabi Azad : ಯಶಸ್ವಿ ನಾಯಕನಾಗುವ ಯಾವುದೇ ಆಸಕ್ತಿ ರಾಹುಲ್​ ಗಾಂಧಿಗಿಲ್ಲ:ರಾಜೀನಾಮೆ ಬಳಿಕ ಗುಲಾಂ ನಬಿ ಆಜಾದ್​ ಮೊದಲ ಪ್ರತಿಕ್ರಿಯೆ

ಇದನ್ನೂ ಓದಿ : Vijay Deverakonda : ವಿರಾಟ್​ ಕೊಹ್ಲಿ ಜೀವನಾಧಾರಿತ ಸಿನಿಮಾದಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ ವಿಜಯ್​ ದೇವರಕೊಂಡ

JDS MLA Shivlinge Gowda outraged against BJP members in Dharamsthala

Comments are closed.