Coffee Nadu Chandu: ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಮೂಲಕ ಶಿವಣ್ಣರನ್ನು ಭೇಟಿಯಾದ ಕಾಫಿನಾಡು ಚಂದು : ಅನುಶ್ರೀಯಿಂದ ವಿಶೇಷ ಗಿಫ್ಟ್​

Coffee Nadu Chandu : ಹಾಯ್​ ನಾನು ಪುನೀತಣ್ಣ,, ಶಿವಣ್ಣನ ಅಭಿಮಾನಿ ಎಂಬ ಧ್ವನಿಯನ್ನು ಕೇಳಿದರೆ ಸಾಕು ಇದು ಕಾಫಿನಾಡು ಚಂದು ಮಾಡಿರುವ ರೀಲ್ಸ್​ ಎನ್ನುವುದು ಎಲ್ಲರಿಗೂ ಗೊತ್ತಾಗಿ ಹೋಗುವಷ್ಟರ ಮಟ್ಟಿಗೆ ಚಿಕ್ಕಮಗಳೂರಿನ ಆಟೋ ಚಾಲಕ ಚಂದು ಫೇಮಸ್​ ಆಗಿದ್ದಾರೆ, ವಿಶೇಷ ರೀತಿಯಲ್ಲಿ ಜನರಿಗೆ ಹುಟ್ಟು ಹಬ್ಬದ ಶುಭಾಶಯವನ್ನು ಕೋರುವ ಮೂಲಕ ಕಾಫಿನಾಡು ಚಂದು ಸದ್ಯ ಸೋಶಿಯಲ್​ ಮೀಡಿಯಾದ ಸೆನ್ಸೇಷನ್​ ಎನಿಸಿಬಿಟ್ಟಿದ್ದಾರೆ.


ಆ್ಯಂಕರ್​ ಅನುಶ್ರೀ ಬಳಿಯಲ್ಲಿ ನಾನು ಶಿವಣ್ಣರನ್ನು ನೋಡಬೇಕು ಅಂತಾ ಕಾಫಿನಾಡು ಚಂದು ಮನವಿ ಮಾಡಿದ್ದರು. ಅನುಶ್ರೀ ಅಕ್ಕ..ಓ ಅನುಶ್ರೀ ಅಕ್ಕ.. ನಾವು ಶಿವಣ್ಣನನ್ನು ನೋಡಬೇಕು ಎಂದು ಕಾಫಿನಾಡು ಚಂದು ರೀಲ್ಸ್​ ಮಾಡಿದ್ದೇ ತಡ ಜೀ ಕನ್ನಡ ವಾಹಿನಿಯು ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಶೋಗೆ ಕಾಫಿನಾಡು ಚಂದುರನ್ನು ಅತಿಥಿಯಾಗಿ ಆಹ್ವಾನಿಸಿದೆ. ಭಾನುವಾರ ಪ್ರಸಾರ ಕಂಡ ಎಪಿಸೋಡ್​ನಲ್ಲಿ ಕಾಫಿನಾಡು ಚಂದು ತನ್ನ ನೆಚ್ಚಿನ ಹಿರೋ ಶಿವಣ್ಣರನ್ನು ಭೇಟಿಯಾಗಿ ತಮ್ಮದೇ ಶೈಲಿಯಲ್ಲಿ ಹಾಡು ಹಾಡಿದ್ದಾರೆ. ಕಾಫಿ ನಾಡು ಚಂದು ಅಭಿಮಾನವನ್ನು ಕಂಡ ನಟ ಶಿವಣ್ಣ ನಿಮ್ಮಂತ ಅಭಿಮಾನಿಗಳನ್ನು ಪಡೆದ ನಾವೇ ಧನ್ಯರು ಎಂದು ಹೇಳಿದ್ದಾರೆ.


ಇತ್ತ ಆ್ಯಂಕರ್ ಅನುಶ್ರೀ ಕೂಡ ಕಾಫಿ ನಾಡು ಚಂದುರನ್ನು ಅತ್ಯಂತ ಗೌರವಯುತವಾಗಿ ಕಾರ್ಯಕ್ರಮದಲ್ಲಿ ನಡೆಸಿಕೊಂಡಿದ್ದಾರೆ. ಕಾಫಿ ನಾಡು ಚಂದು ರೀಲ್ಸ್​ಗೆ ಸ್ಪಂದಿಸಿ ಅನುಶ್ರೀ ಇಂತದ್ದೊಂದು ಕಾರ್ಯ ಮಾಡುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.


ಇನ್ನು ಕಾರ್ಯಕ್ರಮದ ಬಳಿಕ ಅನುಶ್ರೀ ಕಾಫಿನಾಡು ಚಂದು ಜೊತೆಯಲ್ಲಿ ರೀಲ್ಸ್​ ಮಾಡಿದ್ದು ಅದೂ ಕೂಡ ವೈರಲ್​ ಆಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ಕಾಫಿ ನಾಡು ಚಂದುಗೆ ಟೈಟಾನ್​ ಕಂಪನಿಯ ವಾಚ್​ನ್ನು ಉಡುಗೊರೆಯಾಗಿ ಕೊಟ್ಟ ಆ್ಯಂಕರ್​ ಅನುಶ್ರೀ ಕಾಫಿ ನಾಡು ಚಂದು ಮುಂದಿನ ಜೀವನಕ್ಕೆ ಶುಭ ಹಾರೈಸಿದ್ದಾರೆ .

ಇದನ್ನು ಓದಿ : BIG BREAKING NEWS : ಜಿಯೋ ಗ್ರಾಹಕರಿಗೆ ಗುಡ್‌ ನ್ಯೂಸ್‌ : ‘ಜಿಯೋ 5G ಸೇವೆ’ ಘೋಷಿಸಿದ ಮುಕೇಶ್ ಅಂಬಾನಿ |Reliance AGM 2022

ಇದನ್ನೂ ಓದಿ : Mukesh Ambani : ರಿಲಯನ್ಸ್​ ರೀಟೇಲ್​ ವ್ಯವಹಾರಗಳ ಮುಖ್ಯಸ್ಥೆಯಾಗಿ ಮುಕೇಶ್​ ಅಂಬಾನಿ ಪುತ್ರಿ ಇಶಾ ನೇಮಕ

Coffee Nadu Chandu gets special gift from Anchor Anushree

Comments are closed.