ರಾಮನಗರ : young man stabbed a young woman :
ಪ್ರೀತಿ – ಪ್ರೇಮ ಯಾವಾಗಲೂ ಎರಡು ಮನಸ್ಸು ಜೊತೆ ಸೇರಿ ಆದ್ರೆ ಚಂದ. ಕೆಲ ಸಂದರ್ಭದಲ್ಲಿ ಎಕಮುಖ ಪ್ರೀತಿ ಉಂಟಾಗಿ ಪಾಗಲ್ ಪ್ರೇಮಿ ರೀತಿ ಕಿರುಕುಳ ನೀಡಿ ಜೀವಕ್ಕೆ ಸಂಚಕಾರ ತಂದೊಡ್ಡುವ ಘಟನೆ ಆಗಾಗ ನಡೆಯುತ್ತಿರುತ್ತದೆ. ಇದೀಗ ರಾಮನಗರದಲ್ಲಿಯೂ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಚಾಕು ಇರಿದು ತಾನೂ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ರಾಮನಗರದ ಚನ್ನಪಟ್ಟಣದ ಕೋಟೆ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು ರಾಮನಗರದ ವೆಂಕಟೇಶ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಪ್ರೀತಿ ನಿರಾಕರಿಸಿದ ಕಾರಣಕ್ಕೆ ಮೇಘನ ಎಂಬ ಯುವತಿಗೆ ಚಾಕು ಇರಿದ ವೆಂಕಟೇಶ್ ಬಳಿಕ ತಾನೂ ಚಾಕುವಿನಿಂದ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಹಿಂದೆ ರಾಮನಗರದ ಸಂಗೀತ ಮೊಬೈಲ್ಸ್ ನಲ್ಲಿ ವೆಂಕಟೇಶ್ ಹಾಗೂ ಮೇಘನ ಜೊತೆಗೆ ಕೆಲಸ ಮಾಡುತ್ತಿದ್ದರು. ಆ ಬಳಿಕ ವೆಂಕಟೇಶ್ ಕಿರುಕುಳಕ್ಕೆ ಮೇಘನಾ ಕೆಲಸ ಬಿಟ್ಟಿದ್ದಳು. ಆದ್ರೂ ಮೇಘನಾ ಬೆನ್ನು ಬಿಡದ ವೆಂಕಟೇಶ್ ಇಂದು ಚನ್ನಪಟ್ಟಣದ ಕೋಟೆ ಬಡಾವಣೆಯ ಮೇಘನ ಮನೆಗೆ ಬಂದು ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಈ ಸಂದರ್ಭ ಮೇಘನಾ ಪ್ರೀತಿ ನಿರಾಕರಿಸಿದ್ದಾಳೆ. ಹೀಗಾಗಿ ಪ್ರೀತಿ ನಿರಾಕರಿಸಿದ್ದಕ್ಕೆ ವೆಂಕಟೇಶ್ ಚಾಕು ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಘಟನೆಯಲ್ಲಿ ಯುವತಿ ಮೇಘನಾ ಹಾಗೂ ವೆಂಕಟೇಶ್ ಇಬ್ಬರು ಗಾಯಗೊಂಡಿದ್ದಾರೆ. ವೆಂಕಟೇಶ್ ಕುತ್ತಿಗೆಯಲ್ಲಿ ಚೂರಿ ಸಿಲುಕಿಕೊಂಡ ಸ್ಥಿತಿಯಲ್ಲಿಯೇ ಸ್ಥಳದಲ್ಲಿ ಪತ್ತೆಯಾಗಿದ್ದಾನೆ. ಘಟನಾ ಸ್ಥಳಕ್ಕೆ ಚನ್ನಪಟ್ಟಣ ಟೌನ್ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿದ್ದು ಸ್ಥಳ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರ. ಇಬ್ಬರು ಗಾಯಾಳುಗಳನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ.
ಪ್ರೀತಿ ನಿರಾಕರಿಸಿದ ಕಾರಣಕ್ಕೆ ವೆಂಕಟೇಶ್ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ. ತಾನು ಮಾಡಿದ ತಪ್ಪಿಗೆ ಇದೀಗ ಯುವತಿಯೂ ಸಂಕಷ್ಟ ಎದುರಿಸುವಂತಾಗಿದೆ. ಒಟ್ಟಿನಲ್ಲಿ ಏಕಮುಖ ಪ್ರೀತಿ ಪ್ರೇಮ ಎಂದು ಬಾಳು ಹಾಳು ಮಾಡಿಕೊಳ್ಳುವ ಬದಲು ಜೀವನದಲ್ಲಿ ಉತ್ತಮವಾಗಿ ಬಾಳಿ ಬದುಕಬೇಕಾಗಿದೆ.
ಇದನ್ನು ಓದಿ : HD Kumaraswamy challenge :ನಿನ್ನ ಆಸ್ತಿ ಎಷ್ಟು, ನಮ್ಮ ಆಸ್ತಿ ಎಷ್ಟು ಹೇಳು ಎಂದು ಶಾಸಕ ಪ್ರೀತಂ ಗೌಡಗೆ ಹೆಚ್ಡಿಕೆ ಸವಾಲ್
ಇದನ್ನೂ ಓದಿ : Dinesh Karthik: 12 ವರ್ಷಗಳ ನಂತರ ಮತ್ತೊಮ್ಮೆ ವಿಶ್ವಕಪ್ ಆಡಲಿದ್ದಾರೆ ಡಿಕೆ ; ನಾಲ್ಕೇ ಶಬ್ದಗಳಲ್ಲಿ ಖುಷಿ ಹಂಚಿಕೊಂಡ ಕಾರ್ತಿಕ್
A young man stabbed a young woman because she refused his love