₹ 61 Lakh For A Laddoo :ಲಡ್ಡೂ ಖರೀದಿ ಮಾಡಲು ಬರೋಬ್ಬರಿ 61 ಲಕ್ಷ ರೂಪಾಯಿ ಪಾವತಿಸಿದ್ದಾರೆ ಈ ಊರಿನ ನಿವಾಸಿಗಳು

ಹೈದರಾಬಾದ್​ : ₹ 61 Lakh For A Laddoo :ಗಣೇಶ ಮೂರ್ತಿಯನ್ನು ಪೂಜಿಸಿದ ಬಳಿಕ ಪ್ರಸಾದದ ರೂಪದಲ್ಲಿ ಲಡ್ಡುಗಳನ್ನು ನೀಡುವ ಪದ್ಧತಿ ಅನೇಕ ದೇವಸ್ಥಾನಗಳಲ್ಲಿ ಇದೆ. ಆದರೆ ಹೈದರಾಬಾದ್​​ ಮಾತ್ರ ಗಣೇಶ ಹಬ್ಬದ ಸಿಹಿ ನೈವೇದ್ಯದ ವಿಚಾರವಾಗಿಯೇ ಇದೀಗ ದೇಶ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಏಕೆಂದರೆ ದೇವರ ಪ್ರಸಾದವು ಲಕ್ಷಕ್ಕೂ ಅಧಿಕ ಮೌಲ್ಯಕ್ಕೆ ಬಿಕರಿಯಾಗುವ ಮೂಲಕ ದಾಖಲೆಯನ್ನು ಸೃಷ್ಟಿಸಿವೆ. ಹೈದರಾಬಾದ್​ನ ಗೇಟೆಡ್​ ಸಮುದಾಯವಾದ ರಿಚ್ಮಂಡ್​ ವಿಲ್ಲಾ ಸನ್​ ಸಿಟಿಯಲ್ಲಿ ಹತ್ತರಿಂದ ಹನ್ನೆರಡು ಕೆಜಿ ಲಾಡಿಗಾಗಿ ನೂರು ಮಂದಿ ನಿವಾಸಿಗಳು ಹಣ ಪಾವತಿ ಮಾಡಿದ್ದು ಇದರ ದಾಖಲೆಯ ಮೊತ್ತ 60.8 ಲಕ್ಷ ರೂಪಾಯಿ ಆಗಿದೆ.


ಮರಕಥೆ ಶ್ರೀ ಲಕ್ಷ್ಮೀ ಗಣಪತಿ ಉತ್ಸವ ಪಂಗಡದ ಗಣೇಶ ಲಡ್ಡು 46 ಲಕ್ಷ ರೂಪಾಯಿಗೆ ಮಾರಾಟವಾದರೆ ಬಾಳಾಪುರದ ಗಣೇಶ ಲಡ್ಡು 24. 60 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿದೆ. ಅಂದಹಾಗೆ ಇವೆಲ್ಲ ಆರಂಭವಾಗಿದ್ದು 1994ರಲ್ಲಿ. ಬಾಳಾಪುರದ ಪಂಡಲ್​ನಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಥಳೀಯ ರೈತರಾದ ಕೋಲನ್​ ಮೋಹನ್​ ರೆಡ್ಡಿ ಮಂಗಳಕರ ಲಡ್ಡುಗಾಗಿ 450 ರೂಪಾಯಿ ಬೆಟ್ಟಿಂಗ್​ ಕಟ್ಟಿದ್ದರು.


ಅಂದಹಾಗೆ ಇಲ್ಲಿನ ನಿವಾಸಿಗಳು ಈ ರೀತಿ ಇಷ್ಟೆಲ್ಲ ಹಣ ನೀಡಿ ಗಣೇಶನ ಪ್ರಸಾದ ಖರೀದಿ ಮಾಡಲು ಕಾರಣ ಕೂಡ ಇದೆ. ಗಣೇಶನ ಲಡ್ಡುಗಳು ಅದೃಷ್ಟ , ಆರೋಗ್ಯ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಇಲ್ಲಿನ ಸ್ಥಳೀಯ ನಿವಾಸಿಗಳು ನಂಬಿದ್ದಾರೆ. ಲಡ್ಡುಗಳ ಹರಾಜಿನಿಂದ ಹೈದರಾಬಾದ್​ನಲ್ಲಿ ಬಾಲಾಪುರ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಆರಂಭವಾಗುತ್ತದೆ.


ಇನ್ನು ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ರಿಚ್​ಮಂಡ್​ ವಿಲ್ಲಾಸನ್​ ಸಿಟಿ ನಿವಾಸಿ ಡಾ.ಸಾಜಿ ಡಿಸೋಜಾ, ಲಡ್ಡು ಖರೀದಿ ಮಾಡಲು ಸುಮಾರು ನೂರು ಮಂದಿ ನಿವಾಸಿಗಳು ಒಟ್ಟಾಗಿ ಸೇರಿದ್ದರು. ನಮ್ಮಲ್ಲಿ ಹಿಂದೂಗಳು,ಮುಸ್ಲಿಮರು, ಕ್ರಿಶ್ಚಿಯನ್​ ಹಾಗೂ ಸಿಖ್​ ನಿವಾಸಿಗಳಿದ್ದಾರೆ. ಆದರೆ ನಮ್ಮಲ್ಲಿರುವ ಏಕೈಕ ಧರ್ಮವೆಂದರೆ ಅದು ಮಾನವೀಯತೆ. ಗಣೇಶ ಹಬ್ಬವನ್ನು ನಾವೆಲ್ಲರೂ ಒಂದಾಗಿ ಆಚರಿಸುತ್ತೇವೆ ಎಂದು ಹೇಳಿದ್ದಾರೆ.
ಇಲ್ಲಿನ ನಿವಾಸಿಗಳು ಐದು ವರ್ಷಗಳ ಹಿಂದೆ ಗಣೇಶ ಲಡ್ಡೂವಿಗೆ ₹ 25 ಸಾವಿರ ನೀಡಿ ಹರಾಜು ಹಾಕುವ ಸಂಪ್ರದಾಯ ಆರಂಭಿಸಿದ್ದರು. ವ್ಯತ್ಯಾಸವೆಂದರೆ ಲಡ್ಡೂವನ್ನು ಅತಿ ಹೆಚ್ಚು ಬಿಡ್ ಮಾಡಿದವರಿಗೆ ನೀಡುವ ಬದಲು, ಲಡ್ಡೂಗಾಗಿ ಪಾವತಿಸಲು ಕ್ರೌಡ್‌ಫಂಡಿಂಗ್‌ನಂತಹ ಎಲ್ಲಾ ನಿವಾಸಿಗಳಿಂದ ಕೊಡುಗೆಗಳನ್ನು ಸ್ವೀಕರಿಸಲು ಪೂಜಾ ಸಂಘಟಕರು ನಿರ್ಧರಿಸಿದರು.

ಇದನ್ನು ಓದಿ : Dinesh Karthik: 12 ವರ್ಷಗಳ ನಂತರ ಮತ್ತೊಮ್ಮೆ ವಿಶ್ವಕಪ್ ಆಡಲಿದ್ದಾರೆ ಡಿಕೆ ; ನಾಲ್ಕೇ ಶಬ್ದಗಳಲ್ಲಿ ಖುಷಿ ಹಂಚಿಕೊಂಡ ಕಾರ್ತಿಕ್

ಇದನ್ನೂ ಓದಿ : young man stabbed a young woman :ಪ್ರೀತಿ ನಿರಾಕರಿಸಿದ ಕಾರಣಕ್ಕೆ ಯುವತಿಗೆ ಚೂರಿ ಇರಿದ ಯುವಕ

Would You Pay ₹ 61 Lakh For A Laddoo Some Hyderabad Residents Did

Comments are closed.