ಗದಗ : insect : ರೈತ ಈ ದೇಶದ ಬೆನ್ನೆಲುಬು. ಆದ್ರೆ ಈ ಬೆನ್ನೆಲುಬುವಿಗೆ ನಿರಂತರ ಕಷ್ಟಗಳೆ ಬರುತ್ತಿದೆ. ಈ ನಡುವೆ ಕಷ್ಟ ಪಟ್ಟಾದರೂ ಬೆಳೆ ಬೆಳೆದು ನಾವು ನೀವು ನಿತ್ಯ ಉಣ್ಣಲು ಆಹಾರ ಒದಗಿಸುತ್ತಿದ್ದಾನೆ. ಇಷ್ಟು ಕಷ್ಟ ಪಡುವ ರೈತನಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಗದಗ ಜಿಲ್ಲೆಯಲ್ಲಿ ಪತ್ತೆಯಾಗಿರುಬ ಭಯಾನಕ ಕೀಟ ಕಂಡು ರೈತ ಬೆಚ್ಚಿಬಿದ್ದಿದ್ದಾನೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಈ ಕೀಟ ಪತ್ತೆಯಾಗಿದೆ. ಅದೆಂತಹ ಭಯಾನಕ ಕೀಟ ಅಂದ್ರೆ ಈ ಕೀಟ ದೇಹ ಸ್ಪರ್ಷ ಮಾಡಿದ್ರೆ ಸಾಕು ಮೈ ಎಲ್ಲಾ ಉರಿ ಉರಿ ಬರುವಂತಾಗುತ್ತೆ. ಜಮೀನಿನಲ್ಲಿ ಕೆಲಸ ಮಾಡುವಾಗ ರೈತ ಸಿದ್ದಪ್ಪ ಕುರ್ತಕೋಟಿ ಎನ್ನುತನಿಗೆ ಈ ಕೀಟ ಸ್ಪರ್ಷ ಆಗಿದ್ದು ಪರಿಣಾಮ ರೈತ ಉರಿಯಿಂದ ಗದ್ದೆಯಲ್ಲೇ ನರಳಾಡಿದ್ದಾನೆ. ಈ ಭಯಾನಕ ಕೀಟಕ್ಕೆ ಹೆದರಿ ಜಮೀನುಗಳಿಗೆ ಹೋಗಲು ರೈತರು, ಕಾರ್ಮಿಕರು ಇದೀಗ ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ರೈತ ಸಿದ್ದಪ್ಪ ಕುರ್ತಕೋಟಿ ಈ ಕೀಟ ಸ್ಪರ್ಷ ಆಗಿ ಮೈ ಎಲ್ಲಾ ಉರಿ ಉರಿ ಬರುವಂತಾದರೂ ಬಳಿಕ ಸುಧಾರಿಸಿಕೊಂಡು ಈ ಕೀಟ ಹಿಡಿದುಕೊಂಡು ಕೃಷಿ ಇಲಾಖೆಯ ಜಂಟಿ ನಿರ್ದೇಕರ ಕಚೇರಿಗೆ ಬಂದಿದ್ದಾನೆ. ಕೀಟವನ್ನು ಡಬ್ಬಿಯಲ್ಲಿ ಹಾಕಿ ಬಂದ ರೈತ ಜಂಟಿ ನಿರ್ದೇಶಕ ಜೀಯಾಹುಲ್ಲಾಗೆ ಹಸ್ತಾಂತರ ಮಾಡಿದ್ದಾನೆ.
ಸ್ಪೈನಿ ಓಕ್ ಸ್ಲಗ್ ಎನ್ನುವುದು ಈ ಹುಳದ ವೈಜ್ಞಾನಿಕ ಹೆಸರು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜೀಯಾವುಲ್ಲಾ ಮಾಹಿತಿ ನೀಡಿದ್ದಾರೆ. ಈ ಕೀಟ ರೈತರ ದೇಹಕ್ಕೆ ಸ್ಪರ್ಷವಾದ್ರೆ ಆತಂಕ ಇರಲಿಲ್ಲ. ಆದ್ರೆ ಮೂರ್ಛೆ, ವಾಂತಿ, ತುರಿಕೆ ಹೀಗಾಗೋದ್ರಿಂದ ಆತಂಕ ಹೆಚ್ವಾಗಿದೆ ಎಂದು ಜಂಟಿ ನಿರ್ದೇಶಕರು ಹೇಳಿದ್ದಾರೆ. ಇದು ಗಂಭೀರವಾದ ವಿಷಯವಾಗಿದ್ದು, ಹೀಗಾಗಿ ವಿಜ್ಞಾನಿಗಳ ಸಂಪರ್ಕ ಮಾಡುತ್ತ ಇದ್ದೇವೆ ಎಂದು ಹೇಳಿದ್ದಾರೆ.
ಸದ್ಯ ಗದಗ ಜಿಲ್ಲಾ ಕೃಷಿ ಇಲಾಖೆ ಈ ಭಯಾನಕ ಹುಳುವನ್ನು ಧಾರವಾಡ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಶೋಧನೆಗೆ ಕಳುಹಿಸುವ ನಿರ್ಧಾರ ಮಾಡಿದೆ. ಈ ಕೀಟದಿಂದ ರೈತರು ಎಚ್ಚರಿಕೆಯಿಂದ ಇರುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ಎಚ್ಚರಿಕೆ ನೀಡಿದ್ದಾರೆ.
ಈ ಭಯಾನಕ ಹುಳದ ಬಗ್ಗೆ ಒಬ್ಬರ ಬಾಯಿಂದ ಇನ್ನೊಬ್ಬರ ಬಾಯಿಗೆ ಸುದ್ದಿ ಹರಡುತ್ತಿದೆ. ಇದರಿಂದ ರೈತರ ಜೊತೆ ಜನರು ಸಹ ಸಾಕಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ. ಈ ಕೀಟದಿಂದ ಜೀವಕ್ಕೇನಾದರೂ ಅಪಾಯ ಸಂಭವಿಸಬಹುದಾ ಎಂಬ ಆತಂಕವೂ ಜನರಲ್ಲಿ ಇದೆ. ಒಟ್ಟಿನಲ್ಲಿ ಈ ಕೀಟದ ಬಗ್ಗೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಅಧ್ಯಯನ ನಡೆಸಿ ರೈತರಿಗೆ ಈ ಬಗ್ಗೆ ಮಾಹಿತಿ ನೀಡಬೇಕಾಗಿದೆ. ಈ ಮೂಲಕ ಶೀಘ್ರವಾಗಿ ರೈತರಲ್ಲಿರುವ ಗೊಂದಲ, ಭಯದ ವಾತಾವರಣವನ್ನು ನಿವಾರಣೆ ಮಾಡಬೇಕಾಗಿದೆ.
ಇದನ್ನು ಓದಿ : DK Shivakumar : ಮೇಕೆದಾಟು ಬಳಿಕ ಕೃಷ್ಣೆಗಾಗಿ ‘ಕೈ’ ಪಾದಯಾತ್ರೆ: ಸುಳಿವು ಕೊಟ್ಟ ಡಿ.ಕೆ.ಶಿವಕುಮಾರ್
ಇದನ್ನೂ ಓದಿ : VIMS :ವಿಮ್ಸ್ ನಿರ್ದೇಶಕರ ಮೇಲಿನ ಸಿಟ್ಟಿಗೆ ಬಡ ರೋಗಿಗಳನ್ನು ಬಲಿ ಪಡೆದ್ರಾ ನೀಚರು
Terrible insect that has drawn the farmers’ lives: If the insect touches the body, it will be enough to burn