attempt was made to loot lakhs of money :ಎಟಿಎಂ ಗೆ ತುಂಬಲು ತಂದಿದ್ದ ಲಕ್ಷ ಲಕ್ಷ ಹಣ ಸಿಬ್ಬಂದಿಯಿಂದಲೇ ಲೂಟಿಗೆ ಯತ್ನ

ಆಂಧ್ರ ಪ್ರದೇಶ : attempt was made to loot lakhs of money : ಹಣ ಅಂದ್ರೆ ಹೆಣ ಕೂಡಾ ಬಾಯಿ ತೆರೆಯುತ್ತೆ ಎಂಬ ಗಾದೆ ಮಾತನ್ನು ನೀವೆಲ್ಲಾ ಕೇಳಿರ್ತಿರಾ. ಈ ಗಾದೆ ಮಾತಿಗೆ ಹತ್ತಿರವಾಗುವಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತದೆ‌.‌ ಇದೀಗ ಇದೇ ರೀತಿ ಎ.ಟಿ.ಎಂ ಗೆ ಹಣ ತುಂಬುವ ವಾಹನದ ಚಾಲಕನೇ ಹಣ ಕದ್ದು ಎಸ್ಕೇಪ್ ಆಗಿ ಬಳಿಕ‌ ತಗಲಾಕಿಕೊಂಡ ಘಟನೆ ನಡೆದಿದೆ.

ಆಂಧ್ರಪ್ರದೇಶದ ಕಡಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಳ್ಳತನ ಪ್ರಕರಣ ನಡೆದಿತ್ತು. ಎ.ಟಿ.ಎಂ ಗೆ ಹಣ ತುಂಬುವ ಸಿಎಂಎಸ್ ಕಂಪನಿಯ ವಾಹನ ಚಾಲಕ ಫಾರೂಕ್ ಆಂಧ್ರಪ್ರದೇಶದ ಕಡಪ ನಗರದ ಎಸ್.ಬಿ.ಎಂ ಬ್ಯಾಂಕ್ ನಿಂದ 53 ಲಕ್ಷದ 50 ಸಾವಿರ ಹಣ ಎಟಿಎಂಗೆ ತುಂಬಲು ತಂದಿದ್ದ. ಆದ್ರೆ ಈತ ಎ.ಟಿ.ಎಂ ಗೆ ಹಣ ತುಂಬಿಸುವ ಬದಲು ಸಿ.ಎಂ.ಎಸ್ ಕಂಪನಿ ವಾಹನದಿಂದ ಹಣವನ್ನು ಖಾಸಗಿ ಇಟಿಯೋಸ್ ಕಾರಿಗೆ ಶಿಫ್ಟ್ ಮಾಡಿದ್ದ. ಇಟಿಯೋಸ್ ಕಾರಿಗೆ ಹಣ ಶಿಫ್ಟ್ ಮಾಡುವ ದೃಶ್ಯ ಸಿಸಿ ಟಿವಿ ಯಲ್ಲಿ ಸೆರೆಯಾಗಿತ್ತು.‌ ಹೀಗಾಗಿ ಎಚ್ಚೆತ್ತುಕೊಂಡ ಬ್ಯಾಂಕಿನ ಅಧಿಕಾರಿಗಳು ಮತ್ತು‌ ಸಿ.ಎಂ
ಎಸ್ ಕಂಪೆನಿಯ ಅಧಿಕಾರಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ಅಷ್ಟರಲ್ಲಾಗಲೇ ಆಂಧ್ರಪ್ರದೇಶ ನೋಂದಣಿಯ 39 ಎಚ್.ಜಿ 3109 ನಂಬರ್ ನ ಟಾಟಾ ಇಟಿಯೋಸ್ ಕಾರಿನಲ್ಲಿ ಹಣ ಇಟ್ಟುಕೊಂಡು ಪರಾರಿಯಾಗಿದ್ದಾನೆ. ಪೊಲೀಸರು ಕರ್ನಾಟಕ ಗಡಿ ಭಾಗ ಸೇರಿದಂತೆ ಆಂಧ್ರಪ್ರದೇಶದ ಪೊಲೀಸ್ ಠಾಣೆಗಳಿಗೆ ಈ ಮಾಹಿತಿ ರವಾನಿಸಿದ್ದಾರೆ.

ಈ ಸಂದರ್ಭ ಕರ್ನಾಟಕ ಗಡಿ‌ ಕಡೆಗೆ ಬರುತ್ತಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಹೀಗಾಗಿ ಆಂಧ್ರ ಗಡಿಭಾಗದ ಬಾಗೇಪಲ್ಲಿ ಚೆಕ್ ಪೋಸ್ಟ್ ಬಳಿ ಇಟಿಯೋಸ್ ಕಾರಿಗೆ ಪೊಲೀಸರು ತಡೆಯೊಡ್ಡಿದ್ದಾರೆ. ಆದ್ರೆ ಪೊಲೀಸರನ್ನ ಕಂಡೊಡನೆ ಕಾರಿನಿಂದ ಇಳಿದು ಆರೋಪಿ ಫಾರೂಕ್ ಪರಾರಿಯಾಗಿದ್ದಾನೆ. ಆದ್ರೆ ಹಣವನ್ನು ಕಾರಿನಲ್ಲೇ ಬಿಟ್ಟು ಪರಾರಿಯಾಗಿದ್ದರಿಂದ ಇಟಿಯೋಸ್ ಕಾರು ಸಮೇತ 53ಲಕ್ಷದ 50 ಸಾವಿರ ಹಣವನ್ನು ಬಾಗೇಪಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸದ್ಯ ಬಾಗೇಪಲ್ಲಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಈ ಮಿಂಚಿನ ಕಾರ್ಯಾಚರಣೆ ನಡೆಸಿ 53 ಲಕ್ಷದ 50 ಸಾವಿರ ನಗದನ್ನು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಆಂಧ್ರಪ್ರದೇಶ ರಾಜ್ಯದಲ್ಲಿ ಆದ ಕಳ್ಳತನದ ಹಣ ಕರ್ನಾಟಕದಲ್ಲಿ ಪತ್ತೆಯಾಗಿದೆ. ಬಾಗೇಪಲ್ಲಿ ಸಿಪಿಐ ನಾಗರಾಜ್ ನೇತ್ರತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು ಸದ್ಯ ಪರಾರಿಯಾಗಿರುವ ಕಳ್ಳನಿಗಾಗಿ ಆಂಧ್ರಪ್ರದೇಶ ಪೊಲೀಸರು ಕರ್ನಾಟಕ ರಾಜ್ಯ ಪೊಲೀಸರ‌ ಸಹಕಾರ ಪಡೆದು ಶೋಧ ಕಾರ್ಯ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ತೆಪ್ಪಗೆ ತಾನೂ ದುಡಿದಕ್ಕೆ ತಕ್ಕಷ್ಟು ವೇತನ ಪಡೆದುಕೊಳ್ಳುತ್ತಾ ಇದ್ದಿದ್ದರೆ ಫಾರೂಕ್ ಮುಂದೆಯೂ ಉದ್ಯೋಗದಲ್ಲಿ ಮುಂದುವರಿಬಹುದಿತ್ತು.‌ಆದ್ರೆ ಒಮ್ಮೆಲೆ ಶ್ರೀಮಂತನಾಗೋಕೆ ಹೋಗಿ ಈಗ ತಲೆಮರೆಸಿಕೊಳ್ಲುವಂತಾಗಿದೆ.

ಇದನ್ನು ಓದಿ : VIMS :ವಿಮ್ಸ್ ನಿರ್ದೇಶಕರ ಮೇಲಿನ ಸಿಟ್ಟಿಗೆ ಬಡ ರೋಗಿಗಳನ್ನು ಬಲಿ ಪಡೆದ್ರಾ ನೀಚರು

ಇದನ್ನೂ ಓದಿ : KL Rahul bats for Stray Dogs: “ದಯವಿಟ್ಟು ಇದನ್ನು ನಿಲ್ಲಿಸಿ”.. ಬೀದಿ ನಾಯಿಗಳ ಸಾಮೂಹಿಕ ಹತ್ಯೆಗೆ ಮಿಡಿದ ಕ್ರಿಕೆಟಿಗ ಕೆ.ಎಲ್ ರಾಹುಲ್

An attempt was made to loot lakhs of money brought to the ATM by the staff

Comments are closed.