VIMS :ವಿಮ್ಸ್ ನಿರ್ದೇಶಕರ ಮೇಲಿನ ಸಿಟ್ಟಿಗೆ ಬಡ ರೋಗಿಗಳನ್ನು ಬಲಿ ಪಡೆದ್ರಾ ನೀಚರು

ಬಳ್ಳಾರಿ : VIMS : ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯದಿಂದ ವೆಂಟಿಲೇಟರ್ ಸ್ಥಗಿತವಾಗಿ ಸರಣಿ ಸಾವು ಸಂಭವಿಸಿದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಘಟನೆ ಕುರಿತಂತೆ ವಿಮ್ಸ್ ನಿರ್ದೇಶಕ ಗಂಗಾಧರ ಗೌಡ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದು ನಿರ್ದೇಶಕರ ಮೇಲಿನ ಸಿಟ್ಟಿಗೆ ಬಡ ರೋಗಿಗಳನ್ನು ನೀಚರು ಬಲಿ ಪಡೆದ್ರಾ ಎಂಬ ಅನುಮಾನ ಸೃಷ್ಟಿಸಿದೆ.

ನನ್ನ‌ ಹೆಸರು ಕೆಡಿಸಲು ಏನೇನೋ ಮಾಡುತ್ತಿದ್ದಾರೆ. ನನ್ನ ಹೆಸರು ಕೆಡಿಸಲು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ನಿರ್ದೇಶಕ ಗಂಗಾಧರ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಂಡ ದಿನ ಕೆಲವರು ಪೋನ್ ನಲ್ಲಿ ಮಾತನಾಡಿದ್ದಾರೆ.‌ ಆ ಆಡಿಯೋ ಸಂಗ್ರಹಿಸುತ್ತಿದ್ದೇನೆ ಎಂದು ಹೇಳಿರುವ ಗಂಗಾಧರ ಗೌಡ, ರೋಗಿಗಳು ಸತ್ತ ನಂತರ ಶವವಿಟ್ಟು ಪ್ರತಿಭಟನೆ ಮಾಡೋ ಪ್ಲ್ಯಾನ್ ಕೂಡ ಮಾಡಿದ್ದರು‌ ಎಂದು ಹೇಳಿದ್ದಾರೆ.

ನನ್ನ ವಿರುದ್ಧ ಷಂಡ್ರತ್ಯ ನಡೆಸಿದವರ ವಿರುದ್ದ ದೂರು ನೀಡಲು ನಿರ್ಧರಿಸಿರುವೆ ಎಂದು ಹೇಳಿದ ಗಂಗಾಧರ ಗೌಡ, ನನ್ನ ಹೆಸರು ಕೆಡಿಸಲು ಮುಂದಾದವರ ವಿರುದ್ದ ಎಫ್ ಐಆರ್ ದಾಖಲು ಮಾಡಿ ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಇಂದು ವಿಮ್ಸ್ ಗೆ ಬಳ್ಳಾರಿ ಉಸ್ತುವಾರಿ ಸಚಿವ ಶ್ರೀರಾಮುಲು ಭೇಟಿ ನೀಡಿದ್ದಾರೆ. ವಿಮ್ಸ್ ನ ಆಡಳಿತ ಭವನದಲ್ಲಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ವಿಮ್ಸ್ ನಿರ್ದೇಶಕ ಗಂಗಾಧರ ಗೌಡ ಸಚಿವರಿಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಎಡಿಸಿ ಮಂಜುನಾಥ್ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ರು. ಆದ್ರೆ ಈ ಸಭೆಗೆ ಮಾಧ್ಯಮದವರನ್ನ ಹೊರಗೆ ಕಳುಹಿಸಿ ಗೌಪ್ಯವಾಗಿ ಉಸ್ತುವಾರಿ ಸಚಿವರು ಸಭೆ ಮಾಡಿದ್ದಾರೆ.

ಸದ್ಯ ವಿಮ್ಸ್ ನಿರ್ದೇಶಕರು ನೀಡಿರುವ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದ್ದು, ನಿರ್ದೇಶಕರನ್ನ ಕೆಳಗಿಸಲು ಕರೆಂಟ್ ಕಟ್ ಮಾಡಲಾಯಿತ ಎಂಬ ಸಂಶಯಕ್ಕೆ ಕಾರಣವಾಗಿದೆ. ಒಂದು ವೇಳೆ ಇದು ಹೌದಗಿದ್ದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮೆಗಾ ಸ್ಕೆಚ್ ಹಾಕಿರುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಈ ಘಟನೆ ಬಗ್ಗೆ ಸರ್ಕಾರ ಕೂಲಂಕುಷ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಬೇಕಾಗಿದೆ.

ಇದನ್ನು ಓದಿ : Vinay Kumar : MI ಎಮಿರೇಟ್ಸ್ ತಂಡಕ್ಕೆ ದಾವಣಗೆರೆ ಎಕ್ಸ್‌ಪ್ರೆಸ್ ವಿನಯ್ ಕುಮಾರ್ ಬೌಲಿಂಗ್ ಕೋಚ್

ಇದನ್ನೂ ಓದಿ : DK Shivakumar : ಮೇಕೆದಾಟು ಬಳಿಕ ಕೃಷ್ಣೆಗಾಗಿ ‘ಕೈ’ ಪಾದಯಾತ್ರೆ: ಸುಳಿವು ಕೊಟ್ಟ ಡಿ.ಕೆ.ಶಿವಕುಮಾರ್

Power outage in VIMS was pre-planned to remove me as its director: Dr Gouda

Comments are closed.